ಮತ್ತೊಂದು ಎನ್‌ಟಿಆರ್‌ ಪಿಚ್ಚರ್‌!

7

ಮತ್ತೊಂದು ಎನ್‌ಟಿಆರ್‌ ಪಿಚ್ಚರ್‌!

Published:
Updated:
Prajavani

ತೆಲುಗಿನಲ್ಲಿ ಈಗ ತಾರೆಗಳ ಜೀವನಾಧಾರಿತ ಸಿನಿಮಾಗಳ ಉಬ್ಬರ ಕಾಲ. 2018ರಲ್ಲಿ ತೆರೆಕಂಡಿದ್ದ, ನಟಿ ಸಾವಿತ್ರಿ ಬದುಕನ್ನು ಆಧರಿಸಿದ ‘ಮಹಾನಟಿ’ ಸಿನಿಮಾ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈ ವರ್ಷಾರಂಭಕ್ಕೆ (ಜನವರಿ 9) ಬಿಡುಗಡೆಯಾಗಿದ್ದ ತೆಲುಗಿನ ‘ಎನ್.ಟಿ.ಆರ್‌. ಕಥಾನಾಯಕುಡು’ ಸಿನಿಮಾ ಕೂಡ ಮಿಶ್ರ ಪ್ರತಿಕ್ರಿಯೆಯೊಂದಿಗೆ ಪ್ರದರ್ಶನ ಕಾಣುತ್ತಿದೆ. ಎನ್‌ಟಿಆರ್‌ ಪಾತ್ರಕ್ಕೆ ಅವರ ಮಗ ನಂದಮೂರಿ ಬಾಲಕೃಷ್ಣ ಜೀವ ತುಂಬಿರುವುದು ಚಿತ್ರದ ವಿಶೇಷ.

ಇದೀಗ ಎನ್‌ಟಿಆರ್‌ ಬದುಕನ್ನು ಇನ್ನೊಂದು ದಿಕ್ಕಿನಿಂದ ಚಿತ್ರಿಸುವ ಪ್ರಯತ್ನ ನಡೆಯುತ್ತಿದೆ. ಎನ್‌ಟಿಆರ್ ತಮ್ಮ 70ನೇ ವಯಸ್ಸಿನಲ್ಲಿ 35 ವರ್ಷದ ಲಕ್ಷ್ಮಿ ಪಾರ್ವತಿ ಅವರನ್ನು ಮದುವೆಯಾಗಿದ್ದರು. ಲಕ್ಷ್ಮಿ ಪಾರ್ವತಿ ಅವರ ಮನಸ್ಸಿನಲ್ಲಿ ಇರುವ ಎನ್‌ಟಿಆರ್ ಬಿಂಬ ಎಂಥದ್ದು? ಈ ಕುತೂಹಲವನ್ನು ತೆರೆಯ ಮೇಲೆ ತಣಿಸಲು ಹೊರಟಿದ್ದಾರೆ ರಾಮ್‌ಗೋಪಾಲ್‌ ವರ್ಮ. ಈ ಸಿನಿಮಾ ಹೆಸರು ‘ಲಕ್ಷ್ಮೀಸ್‌ ಎನ್‌ಟಿಆರ್‌’. ಈ ಸಿನಿಮಾಗೂ ಕನ್ನಡಕ್ಕೂ ಒಂದು ಸಂಬಂಧವಿದೆ. ಅದೇನು ಗೊತ್ತೆ? ಲಕ್ಷ್ಮಿ ಪಾರ್ವತಿಯ ಪಾತ್ರದಲ್ಲಿ ನಟಿಸುತ್ತಿರುವವರು ಕನ್ನಡದ ಯಜ್ಞಾ ಶೆಟ್ಟಿ.

ಯುವನಟಿಯಾಗಿ ಮತ್ತು ಎಪ್ಪತ್ತು ವರ್ಷದ ವೃದ್ಧೆಯಾಗಿ ಎರಡು ಛಾಯೆ ಇರುವ ಪಾತ್ರದಲ್ಲಿ ಯಜ್ಞಾ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕಾಗಿ ಅವರ ತಯಾರಿಯೂ ಜೋರಾಗಿಯೇ ಇದೆಯಂತೆ. ಸದ್ಯಕ್ಕೆ ಚಿತ್ರದ ಪ್ರಿ–ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಫೆಬ್ರುವರಿಯಲ್ಲಿ ಚಿತ್ರೀಕರಣ ಪ್ರಾರಂಭಿಸುವ ಯೋಜನೆಯನ್ನು ಆರ್‌ಜಿವಿ ಹಾಕಿಕೊಂಡಿದ್ದಾರಂತೆ. ಅವರ ಈ ಪ್ರಯತ್ನಕ್ಕೆ ಎನ್‌ಟಿಆರ್ ಕುಟುಂಬದಿಂದ ವಿರೋಧ ವ್ಯಕ್ತವಾಗಿರುವ ಸುದ್ದಿಯೂ ಇದೆ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !