ಬುಧವಾರ, ಜೂನ್ 3, 2020
27 °C

ಹಿಂದಿಗೆ ‘ಓ ಮೈ ಕಡವುಲೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಲಿವುಡ್‌ನಲ್ಲಿ ಈಚೆಗೆ ಬಿಡುಗಡೆಯಾಗಿರುವ ಅಶ್ವಥ್‌ ಮಾರಿಮುತ್ತು ನಿರ್ದೇಶನದ ಮೊದಲ ಸಿನಿಮಾ ‘ಓ ಮೈ ಕಡವುಲೆ’ ಭಾರಿ ಹಿಟ್‌ ಆಗಿತ್ತು. ಫೆಬ್ರುವರಿ 14ರಂದು ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಪ್ರೇಕ್ಷಕ ಹಾಗೂ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಈ ಚಿತ್ರವು ಹಿಂದಿಗೆ ರಿಮೇಕ್‌ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ತಮಿಳಿನ ಈ ಚಿತ್ರದಲ್ಲಿ ಅಶೋಕ್‌ ಸೆಲ್ವನ್‌ ಹಾಗೂ ರಿತಿಕಾ ಸಿಂಗ್‌ ನಾಯಕ– ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ನಿರ್ಮಾಪಕರು ಈಗ ಅದನ್ನು ಹಿಂದಿಯಲ್ಲಿ ತಯಾರಿಸಲು ಆಲೋಚಿಸಿದ್ದಾರೆ. ಈಗಾಗಲೇ ಹಿಂದಿ ರಿಮೇಕ್‌ ಚಿತ್ರದ ಕೆಲಸಗಳು ಆರಂಭವಾಗಿವೆ. ಮೂಲ ಚಿತ್ರಕ್ಕೆ ಬಂಡವಾಳ ಹೂಡಿರುವ ಅಶೋಕ್‌ ಸೆಲ್ವನ್,‌ ಅವರೇ ಹಿಂದಿಯಲ್ಲೂ ನಿರ್ಮಾಣ ಮಾಡುತ್ತಿದ್ದಾರೆ.

‘ಹಿಂದಿಗೆ ರಿಮೇಕ್‌ ಆಗುತ್ತಿರುವುದು ನಿಜ, ಸದ್ಯದಲ್ಲೇ ಕಲಾವಿದರ ಮಾಹಿತಿಯನ್ನು ಬಹಿರಂಗ ಮಾಡುತ್ತೇವೆ’ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಲಾಕ್‌ಡೌನ್‌ ಮುಗಿದ ನಂತರ ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. 

ಕೆಲ ದಿನಗಳ ಹಿಂದೆ ಈ ಚಿತ್ರವು ತೆಲುಗಿಗೆ ರಿಮೇಕ್‌ ಆಗಲಿದ್ದು, ಪಿವಿಪಿ ಸಿನಿಮಾಸ್‌ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದೆ ಎಂದು ಸುದ್ದಿಯಾಗಿತ್ತು. ತೆಲುಗು ರಿಮೇಕ್‌ಗೂ ಕಲಾವಿದರ ಆಯ್ಕೆ ನಡೆಯುತ್ತಿದೆ ಎನ್ನಲಾಗಿದೆ.

‘ಓ ಮೈ ಕಡವುಲೆ’ ಸಿನಿಮಾದಲ್ಲಿ ಅಶೋಕ್‌ ಸೆಲ್ವನ್‌, ರಿತಿಕಾ ಸಿಂಗ್‌, ವಿಜಯ್‌ ಸೇತುಪತಿ,  ವಾಣಿ ಭಜನ್‌ ಮೊದಲಾದವರು ನಟಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು