ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಟ್‌ಫ್ಲಿಕ್ಸ್‌ನಲ್ಲಿ ‘ದಿ ವೈಟ್ ಟೈಗರ್‌’

Last Updated 14 ಜನವರಿ 2021, 19:30 IST
ಅಕ್ಷರ ಗಾತ್ರ

‘ದಿ ವೈಟ್ ಟೈಗರ್‌’ ಅರವಿಂದ್ ಅಡಿಗ ಅವರ ಕಾದಂಬರಿ. ಈ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ಮಾಡಲಾಗಿದೆ. ರಾಮಿನ್ ಬಹ್ರಾನಿ ನಿರ್ದೇಶನದ ಈ ಚಿತ್ರದಲ್ಲಿ ಆದರ್ಶ್ ಗೌರವ್‌, ರಾಜ್‌ಕುಮಾರ್ ರಾವ್ ಹಾಗೂ ಪ್ರಿಯಾಂಕ ಚೋಪ್ರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಜ.22ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ. ಈ ಚಿತ್ರವು ಸಮಾಜದಲ್ಲಿ ಒಬ್ಬ ಸಾಮಾನ್ಯ ಮನುಷ್ಯನ ಹೋರಾಟ, ಬಡತನ, ಭ್ರಷ್ಟಾಚಾರ ಮತ್ತು ಉಳಿವು ಈ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ.

ಚಿತ್ರದಲ್ಲಿ ಆದರ್ಶ್ ಗೌರವ್‌ ಅವರು ಬಲರಾಂ ಹಲ್ವಾಯಿ ಎಂಬ ಬಡ ಚಾಲಕನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಂಕ ಹಾಗೂ ರಾಜ್‌ಕುಮಾರ್ ರಾವ್‌ ಅಮೆರಿಕದಿಂದ ಭಾರತಕ್ಕೆ ಮರಳುವ ಶ್ರೀಮಂತ ದಂಪತಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಮುಕುಲ್‌ ಡಿಯೊರಾ, ರಾಮಿನ್ ಬಹ್ರಾನಿ, ಪ್ರೇಮ್‌ ಅಕ್ಕರಾಜು ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಡ್ಯಾನಿ ಬೆನ್ಸಿ, ಸೌಂದರ್ ಜುರಿಯನ್ಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 125 ನಿಮಿಷಗಳ ಈ ಚಿತ್ರಕ್ಕೆ ಪೌಲ್ ಕಾರ್ನೆರಾ ಸಿನಿಮಾಟೊಗ್ರಫಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT