ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸದಾಶಿವ ಆಯೋಗದ ವರದಿ ವಿರೋಧಿಸಿದವರಿಗೆ ತಕ್ಕ ಪಾಠ’

ಮಾದಿಗ ಮೀಸಲಾತಿ ಹೋರಾಟ ಸಮಿತಿ ರ್‍ಯಾಲಿ
Last Updated 3 ಏಪ್ರಿಲ್ 2018, 9:17 IST
ಅಕ್ಷರ ಗಾತ್ರ

ಪಾಲಬಾವಿ:  ‘ಸಾಮಾಜಿಕ ನ್ಯಾಯದ ಪರವಾಗಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ವಿರೋಧಿಸುವವರಿಗೆ ವಿಧಾನಸಭೆ ಚುನಾವಣೆಯಲ್ಲಿ ಮಾದಿಗರ ಶಕ್ತಿ ತೋರಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮರೆಗುದ್ದಿ ಹೇಳಿದರು.ಪಾಲಬಾವಿ ಗ್ರಾಮದ ಮಾದಾರ ಚನ್ನಯ್ಯ ನಗರದಲ್ಲಿ ಸೋಮವಾರ ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ’ಮಾದಿಗರ ಮತಜಾಗೃತಿ ಅಭಿಯಾನ ಬೈಕ್ ರ‍್ಯಾಲಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಮಾದಿಗ ಸಮಾಜದವರು ರಾಜಕೀಯವಾಗಿ ಪ್ರಬಲವಾಗಬೇಕಾದರೆ ಅವರನ್ನು ವಿರೋಧಿಸುವವರಿಗೆ ಪಾಠ ಕಲಿಸಬೇಕು’ ಎಂದು ಹೇಳಿದರು.

‘ಸದಾಶಿವ ವರದಿಯನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರವೂ ಅನುಷ್ಠಾನಗೊಳಿಸಲಿಲ್ಲ, ಶಾಸಕರೂ ವಿರೋಧಿಸಿದರು. ಅವರಿಗೆ ಮಾದಿಗರ ಬಲ ತೋರಿಸಬೇಕು’ ಎಂದರು.ಸಮಿತಿಯ ರಾಜ್ಯ ಉಪಾಧ್ಯಕ್ಷ ಮುರಗೇಶ ಕಣ್ಣವರ, ಜೆಡಿಎಸ್‌ನ ರಾಜೇಂದ್ರ ಐಹೊಳೆ, ಹನುಮಂತ ಸೀಮಿಕೇರಿ, ಅಜಿತ ಮಾದರ, ಸಂತೋಷ ನಾಟೀಕಾರ, ಸಂಜು ಮಾದರ, ಸಿದ್ದಪ್ಪ ಮಾದರ, ಶಿವಪ್ಪ ಮಾದರ, ಲಕ್ಷ್ಮಣ ಮೇತ್ರಿ, ಸುರೇಶ ಮಾದರ, ಸಂಗಪ್ಪ ಹಿಪ್ಪರಗಿ, ಬಸಪ್ಪ ಬುರಡಿ, ಶ್ರೀಶೈಲ ಕಡಕೋಳ, ಶಿವಪ್ಪ ಮಾದರ, ಕುಮಾರ ತೆಳಗಡೆ, ಅನಿಲ ಈರಗಾರ, ಸಂತೋಷ ಮಾದರ, ರಾಘವೇಂದ್ರ ಮಾದರ, ಮಾರುತಿ ಮಾದರ, ಲಕ್ಷ್ಮಣ ಹಾದಿಮನಿ, ರಾಜು ಗಸ್ತಿ, ಪರಶುರಾಮ ಭಂಡಾರಿ,ಪಪ್ಪು ಮಾದರ, ಚಿದಾನಂದ ಮಾದರ, ಪ್ರಕಾಶ ಮಾದರ, ಲಕ್ಕಪ್ಪ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT