ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌ ಮಾಕ್ಟೇಲ್‌ ಸಿನಿಮಾಕ್ಕೀಗ 1ರ ಹರೆಯ

Last Updated 31 ಜನವರಿ 2021, 10:03 IST
ಅಕ್ಷರ ಗಾತ್ರ

ಡಾರ್ಲಿಂಗ್‌ ಕೃಷ್ಣ ಮೊದಲ ಬಾರಿ ನಿರ್ದೇಶಿಸಿ, ಒಟಿಟಿ ವೇದಿಕೆಯಲ್ಲಿ ಅದ್ಭುತ ಯಶಸ್ಸು ಕಂಡ ಚಿತ್ರ ‘ಲವ್‌ ಮಾಕ್ಟೇಲ್‌’. ನಿಜಜೀವನದ ಪ್ರೇಮಿಗಳಾದ ಕೃಷ್ಣ ಹಾಗೂ ಮಿಲನಾ ನಾಗರಾಜ್ ನಟಿಸಿದ್ದ ಈ ಚಿತ್ರಕ್ಕಿಂದು ವರ್ಷ ತುಂಬಿದೆ. ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದರೂ ಆಗ ಚಿತ್ರಕ್ಕೆ ಅಷ್ಟು ಯಶಸ್ಸು ಸಿಕ್ಕಿರಲಿಲ್ಲ. ಈ ಚಿತ್ರದ ನಂತರ ಕೃಷ್ಣ ಹಾಗೂ ಮಿಲನಾ ಇಬ್ಬರ ಅದೃಷ್ಣವೂ ಬದಲಾಗಿತ್ತು. ಜೊತೆಗೆ ಈ ಚಿತ್ರದ ಸೀಕ್ವೆಲ್ ಕೆಲಸವೂ ನಡೆಯುತ್ತಿದೆ.

ಲವ್‌ ಮಾಕ್ಟೇಲ್‌ಗೆ ಹರೆಯ ತುಂಬಿದ ಈ ಸಂದರ್ಭದಲ್ಲಿ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ ಕೃಷ್ಣ. ‘ಲವ್‌ ಮಾಕ್ಟೇಲ್‌ ಚಿತ್ರ ವರ್ಷ ಪೂರೈಸಿದೆ. ಆದರೆ ಈ ಪಯಣ ಇಲ್ಲಿಗೆ ನಿಂತಿಲ್ಲ. ನಿಮ್ಮೆಲ್ಲರ ಸಹಕಾರ ಹಾಗೂ ಪ್ರೀತಿಗೆ ಧನ್ಯವಾದಗಳು. ಈ ಒಂದು ವರ್ಷ ತುಂಬಾ ಸಂತಸದ ಹಾಗೂ ತೃಪ್ತಿದಾಯಕವಾಗಿತ್ತು, ಲವ್‌ಮಾಕ್ಟೇಲ್‌ಗೆ ಧನ್ಯವಾದ. ಕಠಿಣಶ್ರಮ ಹಾಗೂ ಒಲವು ಎಂದಿಗೂ ನಮ್ಮನ್ನು ಸೋಲಲು ಬಿಡುವುದಿಲ್ಲ ಎಂಬುದಕ್ಕೆ ಇದೇ ಸಾಕ್ಷಿ. ಲವ್‌ಮಾಕ್ಟೇಲ್‌ 2 ಸದ್ಯದಲ್ಲೇ ಬಿಡುಗಡೆಯಾಗಲಿದೆ’ ಎಂದು ಬರೆದುಕೊಂಡಿದ್ದಾರೆ.

ಲವ್‌ ಮಾಕ್ಟೇಲ್‌ನಲ್ಲಿ ಮಿಲನಾ ನಾಗರಾಜ್ ಹಾಗೂ ಅಮೃತಾ ಐಯ್ಯಂಗಾರ್ ನಾಯಕಿಯರಾಗಿ ನಟಿಸಿದ್ದರು. ಲವ್‌ ಮಾಕ್ಟೇಲ್‌ 2ನಲ್ಲಿ ಸುಷ್ಮಾ ಎಂಬ ಹೊಸ ನಾಯಕಿ ನಟಿಸಿದ್ದಾರೆ. ಉಳಿದಂತೆ ಡಾರ್ಲಿಂಗ್ ಕೃಷ್ಣ, ಖುಷಿ ಆಚಾರ್ ಹಾಗೂ ಅಭಿಲಾಷ್‌ ಸೀಕ್ವೆಲ್‌ನಲ್ಲೂ ಇದ್ದಾರೆ. ನಕುಲ್ ಅಭಯ್‌ಂಕರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಿಲನಾ ಹಾಗೂ ಕೃಷ್ಣರ ಮದುವೆ ಫೆಬ್ರುವರಿ 14ಕ್ಕೆ ನಡೆಯಲಿದ್ದು ಸದ್ಯ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT