‘ಗೋಲ್ಡ್‌ ಫಿಶ್‌’ ಬಲೆಯಲ್ಲಿ ಆದಿ–ಸಾಶಾ

ಭಾನುವಾರ, ಮಾರ್ಚ್ 24, 2019
32 °C

‘ಗೋಲ್ಡ್‌ ಫಿಶ್‌’ ಬಲೆಯಲ್ಲಿ ಆದಿ–ಸಾಶಾ

Published:
Updated:

ಅಡಿವಿ ಸಾಯಿ ಕಿರಣ್‌ ನಿರ್ದೇಶನದ ‘ಆಪರೇಷನ್‌ ಗೋಲ್ಡ್‌ ಫಿಶ್‌’ ಟೀಸರ್‌ ತೆಲುಗು ಸಿನಿಪ್ರಿಯರಿಗೆ ಇಷ್ಟವಾಗಿದೆ. ಆದಿ, ಸಾಶಾ ಚೆಟ್ರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರ, ನೈಜ ಕತೆಯನ್ನು ಆಧರಿಸಿದೆ. ಗಾಂಭೀರ್ಯದಿಂದ ಕೂಡಿದ ಇವರಿಬ್ಬರ ನಟನೆ ಟೀಸರ್‌ನಲ್ಲಿ ಗಮನ ಸೆಳೆಯುತ್ತದೆ.

ವಿಶೇಷವಾಗಿ, ಸೇನಾಧಿಕಾರಿಯ ಪಾತ್ರದಲ್ಲಿ ಆದಿ ಇಡೀ ಚಿತ್ರವನ್ನು ಆವರಿಸಿಕೊಂಡಂತೆ ಭಾಸವಾಗುತ್ತದೆ. ಕಾಶ್ಮೀರಿ ಪಂಡಿತರ ಪಾಲಿನ ದುಃಸ್ವಪ್ನವಾದ ಭಯೋತ್ಪಾದಕ ಘಾಜಿ ಬಾಬಾನನ್ನು ಮಟ್ಟಹಾಕುವ ಕಾರ್ಯಾಚರಣೆಯಲ್ಲಿ ಆದಿ ಅದ್ಭುತವಾಗಿ ನಟಿಸಿರುವುದು ಕಂಡುಬರುತ್ತದೆ.

ಕಾಶ್ಮೀರಿ ಪಂಡಿತರು ಆರು ವರ್ಷಗಳ ಹಿಂದೆ ಅನುಭವಿಸಿದ್ದ ಯಾತನಾಮಯ ದಿನಗಳನ್ನು ವಾಸ್ತವದ ನೆಲೆಯಲ್ಲೇ ಚಿತ್ರ  ವಿವರಿಸುತ್ತದೆ. ಟೀಸರ್‌ ಬಿಡುಗಡೆ ಮಾಡಿದ್ದು ಟಾಲಿವುಡ್‌ನ ‘ಪ್ರಿನ್ಸ್‌’ ಮಹೇಶ್‌ ಬಾಬು. 

ಸಾಶಾ ಚೆಟ್ರಿ, ಜಾಹೀರಾತುಗಳ ಮೂಲಕ ಕಿರುತೆರೆಯಲ್ಲಿ ಮಿಂಚಿ ಸೆಲೆಬ್ರಿಟಿ ಎನಿಸಿಕೊಂಡ ಬಳಿಕ ಚಿತ್ರರಂಗಕ್ಕೆ ಕಾಲಿಟ್ಟವರು. ಸಂಭಾಷಣೆಕಾರ ತ್ರಿವಿಕ್ರಮ್‌ ಅವರ ಖಾಸಾ ದೋಸ್ತ್‌ ಅಬ್ಬೂರು ರವಿ ಕೂಡಾ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 

ಈ ಚಿತ್ರದಲ್ಲಿ ಅಬ್ಬೂರು ರವಿ, ನಿತ್ಯಾ ರಮೇಶ್‌, ಕಾರ್ತಿಕ್‌ ರಾಜು, ನೂಕ ರಾಜು, ಕೃಷ್ಣುಡು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಾಯಿ ಕಿರಣ್‌ ಚಿತ್ರ ನಿರ್ದೇಶಿಸಿದ್ದು, ವಿನಾಯಕುಡು ಟಾಕೀಸ್‌ನವರು ಬಂಡವಾಳ ಹೂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !