ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಪ್ರವೇಶ ಪಡೆದಿದ್ದ ‘ರೈಟಿಂಗ್ ವಿತ್ ಫೈರ್‘ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿಲ್ಲ. ಈ ವಿಭಾಗದಲ್ಲಿ‘ಸಮ್ಮರ್ ಆಫ್ ಸೋಲ್‘ ಚಿತ್ರ ಪ್ರಶಸ್ತಿ ಪಡೆದುಕೊಂಡಿದೆ.
‘ರೈಟಿಂಗ್ ವಿತ್ ಫೈರ್‘ ಪತ್ರಿಕೋದ್ಯಮ ಆಧರಿಸಿದ ಸಾಕ್ಷ್ಯಚಿತ್ರವಾಗಿದೆ. ಇದು 20 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಎಲ್ಲೆಡೆ ಪ್ರಶಂಸೆಗಳಿಸಿತ್ತು.ಈ ಸಲ ಆಸ್ಕರ್ ತಂದುಕೊಡಲಿದೆ ಎಂಬ ನಂಬಿಕೆ ಭಾರತೀಯರಿಗೆ ಇತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
‘ರೈಟಿಂಗ್ ವಿತ್ ಫೈರ್’ ದಲಿತ ಮಹಿಳಾ ಪತ್ರಕರ್ತೆಯರು ನಡೆಸುತ್ತಿರುವ‘ಖಬರ್ ಲೆಹರಿಯಾ’ ಪತ್ರಿಕೆಯ ಕಥೆಯನ್ನು ಹೊಂದಿದೆ.ಮಹಿಳಾ ಪರ ಪತ್ರಿಕೋದ್ಯಮದ ಉದ್ದಿಶ್ಯ ಹೊಂದಿರುವ ಈ ಪತ್ರಿಕೆ ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯದ ಚೌಕಟ್ಟಿನೊಳಗೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ವರದಿ ಮಾಡುತ್ತಲಿದೆ.
ಅಲಕ್ಷಿತ ಮಹಿಳೆಯರೇ ಸೇರಿ ಕಟ್ಟಿ ಬೆಳೆಸಿರುವ ‘ಖಬರ್ ಲೆಹರಿಯಾ’ದ ಕಥೆ ಇರುವ‘ರೈಟಿಂಗ್ ವಿತ್ ಫೈರ್’ ಮೀರಾ, ಕವಿತಾ, ಶ್ರೀದೇವಿಯಂತಹ ದಲಿತ ಮಹಿಳಾ ಪತ್ರಕರ್ತರ ಕಥನವನ್ನು ಜಾಗತಿಕ ಕ್ಯಾನ್‍ವಾಸ್‍ಗೆ ಪರಿಚಯಿಸಲಾಗಿದೆ.
ರಿಂಟು ಥಾಮಸ್ ಮತ್ತು ಸುಶ್ಮಿತ್ ಘೋಷ್ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.