ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ಬರುತ್ತಿದ್ದಾಳೆ ‘ಪಾರು’

Last Updated 7 ಡಿಸೆಂಬರ್ 2020, 6:34 IST
ಅಕ್ಷರ ಗಾತ್ರ

‌‌ಕೊರೊನಾ ಹಾವಳಿಯ ನಡುವೆ ಇತ್ತೀಚೆಗೆ ಥಿಯೇಟರ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುವುದು ಕಡಿಮೆಯಾಗಿದೆ. ಅದರಲ್ಲೂ ಮಕ್ಕಳ ಚಿತ್ರವಂತೂ ತೆರೆ ಕಂಡಿರುವುದು ಅಪರೂಪ ಎನ್ನಬಹುದು. ಬಹಳ ದಿನಗಳ ನಂತರ ಮಕ್ಕಳ ಚಿತ್ರವೊಂದು ತೆರೆ ಕಾಣಲು ಸಿದ್ಧವಾಗಿದೆ. ಅದುವೇ ‘ಪಾರು’. ವಿಭಿನ್ನ ಕಥಾಹಂದರ ಇರುವ ಈ ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ಸಿಕ್ಕಿದೆ. ಚಿತ್ರವು ಜನವರಿಯಲ್ಲಿ ತೆರೆ ಕಾಣಲಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಹಂಸಲೇಖ ಶುಭಾಶಯ ಕೋರಿದ್ದಾರೆ.

ನಾಲ್ಕು ಮಂದಿ ಚಿಂದಿ ಆಯುವ ಮಕ್ಕಳ ಕಥೆ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬ ಹುಡುಗಿ ಓದಿ ಜಿಲ್ಲಾಧಿಕಾರಿ ಆಗುತ್ತಾಳೆ. ಇದೇ ಈ ಚಿತ್ರದ ಕಥಾಸಾರಾಂಶ.

ದಾವಣಗೆರೆ ಮೂಲದ ಹನ್ಮಂತ್ ಪೂಜಾರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಹಾಗೂ ಛಾಯಾಗ್ರಹಣ ಕೂಡ ಹನ್ಮಂತ್ ಅವರೇ ಮಾಡಿದ್ದಾರೆ.

ನೀನಾಸಂ ಕಲಾವಿದವರಾಗಿರುವ ಅವರು ಬುದ್ಧಿವಂತ, ಅಯೋಗ್ಯ, ದೋಬಿಘಾಟ್‌ ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದು ಅವರ ಚೊಚ್ಚಲ ಸಂಪೂರ್ಣ ನಿರ್ದೇಶನದ ಚಿತ್ರ.

ದುರ್ಗ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹನ್ಮಂತ್ ಅವರೇ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸಿ.ಎನ್‌. ಗೌರಮ್ಮ ಸಹ ನಿರ್ಮಾಪಕಿಯಾಗಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು ಎ.ಟಿ. ರವೀಶ್ ಸಂಗೀತ ನೀಡಿದ್ದಾರೆ.

ಬೇಬಿ ಹಿತೈಷಿ ಪೂಜಾರ್, ಮಾಸ್ಟರ್ ಮೈಲಾರಿ‌ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಂಕುಮಾರ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

ದಾವಣಗೆರೆ, ಬೆಂಗಳೂರು, ಹಾವೇರಿ ಮುಂತಾದ ಕಡೆ 31 ದಿನಗಳ ಚಿತ್ರೀಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT