‘ಶಾಖಾಹಾರಿ’ ಸಿನಿಮಾ ನಿರ್ದೇಶಕ ಸಂದೀಪ್ ಸುಂಕದ್ ನಿರ್ದೇಶನದ ‘ಪಬ್ಬಾರ್’ನ ಶೂಟಿಂಗ್ ಶೇ 90ರಷ್ಟು ಪೂರ್ಣಗೊಂಡಿದೆ. ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿ ಚಿತ್ರತಂಡ ಇತ್ತೀಚೆಗೆ ಮರಳಿದೆ.

ಸಿನಿಮಾದಲ್ಲಿ ನಾಯಕರಾಗಿ ಧೀರೆನ್ ಆರ್.ರಾಜ್ಕುಮಾರ್ ನಟಿಸಿದ್ದು, ಬುಧವಾರ (ಏ.29) ಅವರ ಜನ್ಮದಿನದಂದು ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಶಿಮ್ಲಾ, ಸಾಂಗ್ಲಾ, ಪಬ್ಬಾರ್ ನದಿ ಪ್ರದೇಶದಲ್ಲಿ ಚಿತ್ರತಂಡ ಶೂಟಿಂಗ್ ನಡೆಸಿದೆ. ಧೀರೆನ್, ‘ಸಕುಟುಂಬ ಸಮೇತ’, ‘ಟೋಬಿ’ ಖ್ಯಾತಿಯ ಭರತ್, ಗೋಪಾಲಕೃಷ್ಣ ದೇಶಪಾಂಡೆ, ಅಮೃತಾ ಪ್ರೇಮ್ ಸೇರಿದಂತೆ ಹಲವು ಕಲಾವಿದರು ಇಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

‘ಚಿತ್ರದ ಮೊದಲ ಹಂತದ ಡಬ್ಬಿಂಗ್ ಮತ್ತು ಹಿನ್ನೆಲೆ ಸಂಗೀತದ ಕೆಲಸಗಳು ಪೂರ್ಣಗೊಂಡಿವೆ. ಧೀರೆನ್ ಈ ಸಿನಿಮಾದಲ್ಲಿ ಎರಡು–ಮೂರು ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದಿಷ್ಟು ಹೊಸ ಪಾತ್ರಧಾರಿಗಳ ಸೇರ್ಪಡೆಯಾಗಿವೆ. ಅದರ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದ್ದೇವೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಿತ್ರೀಕರಣದ ಜೊತೆ ಜೊತೆಯಲ್ಲೇ ನಡೆಯುತ್ತಿದೆ. ಒಂದು ಹಾಡು ಮತ್ತು ಸಾಹಸ ದೃಶ್ಯದ ಚಿತ್ರೀಕರಣ ಬಾಕಿ ಇದೆ. ಸಿನಿಮಾವನ್ನು ಇದೇ ಆಗಸ್ಟ್ ಅಥವಾ ಅಕ್ಟೋಬರ್ನಲ್ಲಿ ತೆರೆಗೆ ತರುವ ಯೋಚನೆಯಲ್ಲಿದ್ದೇವೆ’ ಎಂದಿದ್ದಾರೆ ಸಂದೀಪ್ ಸುಂಕದ್.

ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಯ್ಯಪ್ಪ ನಟಿಸುತ್ತಿದ್ದಾರೆ. ಸಿನಿಮಾವನ್ನು ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಇದೊಂದು ಕ್ರೈಂ, ಅಡ್ವೆಂಚರಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಹಿಮಾಚಲ ಪ್ರದೇಶದ ಶಿಮ್ಲಾ ಬಳಿಯ ‘ಪಬ್ಬಾರ್’ ನದಿ ಈ ಚಿತ್ರದ ಕಥೆಯ ಕೇಂದ್ರಬಿಂದುವಾಗಿದೆ. ಹೀಗಾಗಿಯೇ ಚಿತ್ರಕ್ಕೆ ‘ಪಬ್ಬಾರ್’ ಎಂಬ ಶೀರ್ಷಿಕೆ ಇಡಲಾಗಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-51-1894905812

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.