ಬಿಡುಗಡೆಗೆ ಮುನ್ನವೇ ಬಿಸಿ ಹೆಚ್ಚಿಸಿಕೊಂಡ ‘ಪಾದರಸ’!

7

ಬಿಡುಗಡೆಗೆ ಮುನ್ನವೇ ಬಿಸಿ ಹೆಚ್ಚಿಸಿಕೊಂಡ ‘ಪಾದರಸ’!

Published:
Updated:
Deccan Herald

ಶುಕ್ರವಾರ ತೆರೆಗೆ ಬರಬೇಕಿರುವ ಚಿತ್ರ ‘ಪಾದರಸ’ ಸುದ್ದಿಯಲ್ಲಿದೆ. ಹೀಗೆ ಸುದ್ದಿಯಾಗಿರುವುದಕ್ಕೆ ಕಾರಣ ಚಿತ್ರದ ಬಿಡುಗಡೆ ಮಾತ್ರವೇ ಅಲ್ಲ. ಸಿನಿಮಾ ತೆರೆಗೆ ಬರುವ ದಿನ ಹತ್ತಿರ ಬರುತ್ತಿರುವಾಗ ನಾಯಕಿ ವೈಷ್ಣವಿ ಅವರು ಪ್ರಚಾರ ಕಾರ್ಯಕ್ರಮಗಳಿಗೆ ಬರುತ್ತಿಲ್ಲ ಎಂಬ ಆರೋಪ ಸುದ್ದಿಗೆ ಕಾರಣ.

ಈ ವಿಚಾರವಾಗಿ ಚಿತ್ರದ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಹ ನೀಡಿದ್ದಾರೆ. ‘ಚಿತ್ರದ ಬಿಡುಗಡೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ, ವೈಷ್ಣವಿ ಅವರು ಚಿತ್ರದ ಪ್ರಚಾರ ಕಾರ್ಯಗಳಿಗೆ ಸಹಕಾರ ಕೊಡುತ್ತಿಲ್ಲ. ಬೇರೊಂದು ಭಾಷೆಯ ಚಿತ್ರದ ಶೂಟಿಂಗ್‌ಗೆ ತೆರಳುತ್ತಿರುವುದಾಗಿ ಕಾರಣ ಹೇಳಿದ್ದಾರೆ’ ಎಂಬುದು ನಿರ್ಮಾಪಕರು ನೀಡಿರುವ ದೂರಿನ ಸಾರಾಂಶ.

‘ನಾವು ಈಗ ಒಂದು ಟಿ.ವಿ. ವಾಹಿನಿಯ ಕಚೇರಿಯಲ್ಲಿ ಇದ್ದೇವೆ. ಸಿನಿಮಾಕ್ಕೆ ಸಂಬಂಧಿಸಿದಂತೆ ಈ ವಾಹಿನಿಯ ಮೂಲಕ ಒಂದು ಕಾರ್ಯಕ್ರಮ ಪ್ರಸಾರ ಆಗಬೇಕಿದೆ. ಇಡೀ ಚಿತ್ರತಂಡ ಇಲ್ಲಿದೆ. ಆದರೆ, ನಾಯಕಿ ಮಾತ್ರ ಇಲ್ಲ’ ಎಂದು ದೂರಿದರು ನಿರ್ದೇಶಕ ಹೃಷಿಕೇಶ್ ಜಂಬಗಿ.

ಈ ವಿವಾದದ ಕುರಿತು ಪ್ರತಿಕ್ರಿಯೆ ಪಡೆಯಲು ವೈಷ್ಣವಿ ಅವರನ್ನು ಸಂಪರ್ಕಿಸಿದರೆ ‘ನಾನು ಎರಡೂವರೆ ವರ್ಷ ಈ ಸಿನಿಮಾಕ್ಕಾಗಿ ಕೆಲಸ ಮಾಡಿದ್ದೇನೆ. ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಮೊದಲೇ ಒಪ್ಪಿಕೊಂಡಿದ್ದ ಬೇರೊಂದು ಚಿತ್ರದ ಕೆಲಸ ಇದ್ದ ಕಾರಣ ಎರಡು ದಿನ ಮಾತ್ರ ಬರಲು ಸಾಧ್ಯವಾಗದು ಎಂದು ಹೇಳಿದ್ದೆ. ಅಷ್ಟೇ’ ಎಂದರು ವೈಷ್ಣವಿ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !