ಶನಿವಾರ, ನವೆಂಬರ್ 23, 2019
23 °C

‘ಪೈಲ್ವಾನ್‌’ಗೆ ಶುಭ ಕೋರಿದ ಕನ್ನಡ ಚಿತ್ರರಂಗ

Published:
Updated:

ನಿರ್ದೇಶಕ ಕೃಷ್ಣ ಮತ್ತು ನಟ ಸುದೀಪ್‌ ಕಾಂಬಿನೇಷನ್‌ನಡಿ ಮೂಡಿಬಂದಿರುವ ‘ಪೈಲ್ವಾನ್‌’ ಚಿತ್ರಕ್ಕೆ ಚಿತ್ರರಂಗದ ಹಲವು ನಟರು ಮತ್ತು ನಿರ್ದೇಶಕರು ಶುಭ ಕೋರಿದ್ದಾರೆ.

‘ಪೈಲ್ವಾನ್ ಚಿತ್ರರಂಗಕ್ಕೆ ಒಳ್ಳೆಯದಾಗಲಿ. ಚಿತ್ರ ಸೂಪರ್‌ ಹಿಟ್‌ ಆಗಲಿ. 5 ಭಾಷೆಯಲ್ಲಿಯೂ ಪೈಲ್ವಾನ್ ಗೆಲುವು ಸಾಧಿಸಲಿ’ ಎಂದು ‘ಗೋಲ್ಡನ್‌ ಸ್ಟಾರ್’ ಗಣೇಶ್‌ ಶುಭ ಹಾರೈಸಿದ್ದಾರೆ.

 

ನಟ ಜಗ್ಗೇಶ್‌ ಅವರು, ‘ಪೈಲ್ವಾನ್‌ ಕನ್ನಡಿಗರ ಹೃದಯ ಗೆಲ್ಲಲಿ. ಬನ್ನೊರಲ್ಲಿ ‘ತೋತಾಪುರಿ’ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಕಂಡ ಚಿತ್ರಮಂದಿರದ ಮುಂದೆ ಹಾದು ಹೋಗುವಾಗ ಖುಷಿಯಾಯಿತು. ಜನರ ಪ್ರೀತಿ ಕಂಡು... ಶುಭಮಸ್ತು’ ಎಂದಿದ್ದಾರೆ.  

ನಟ ಶರಣ್‌ ಅವರು, ‘ಪೈಲ್ವಾನ್‌ ಚಿತ್ರ ಒಳ್ಳೆಯ ಯಶಸ್ಸುಗಳಿಸುವ ಮೂಲಕ ಸುದೀಪ್‌ ಮತ್ತು ಚಿತ್ರತಂಡಕ್ಕೆ ಶುಭವಾಗಲಿ’ ಎಂದು ಹೇಳಿದ್ದಾರೆ.

‘Pailwaan ಚಿತ್ರವು ಉನ್ನತ ಯಶಸ್ಸು ಕಾಣಲಿ ಹಾಗೂ ನಮ್ಮ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ತಲುಪಲಿ’ ಎಂದು ನಿರ್ದೇಶಕ ಪ್ರೇಮ್‌ ಟ್ವೀಟ್‌ ಮಾಡಿದ್ದಾರೆ. 

 

 

ಪ್ರತಿಕ್ರಿಯಿಸಿ (+)