ಶುಕ್ರವಾರ, ಡಿಸೆಂಬರ್ 6, 2019
21 °C

ಪೈಲ್ವಾನ್‌: ಕಿಚ್ಚನ ಹೊಸ ಪೋಸ್ಟರ್‌ಗೆ ಅಭಿಮಾನಿಗಳ ಫಿದಾ

Published:
Updated:

ಕೃಷ್ಣ ನಿರ್ದೇಶನದ ನಟ ಸುದೀಪ್‌ ನಟನೆಯ ‘ಪೈಲ್ವಾನ್‌’ ಸಿನಿಮಾ ಆಗಸ್ಟ್‌ 8ರಂದು ಬಿಡುಗಡೆಯಾಗಲಿದೆ. ಎಂಟು ಭಾಷೆಗಳಲ್ಲಿ ಈ ಚಿತ್ರ ತೆರೆ ಕಾಣುತ್ತಿದ್ದು, ಚಂದನವನದಲ್ಲಿ ಭಾರೀ ಕುತೂಹಲ ಹುಟ್ಟಿಸಿದೆ.

‘ಪೈಲ್ವಾನ್‌’ ಚಿತ್ರದ ಮೊಟ್ಟಮೊದಲ ‘ಬಾಕ್ಸಿಂಗ್ ಪೋಸ್ಟರ್‌’ ಮಂಗಳವಾರ ಬಿಡುಗಡೆಯಾಗಿದ್ದು, ವೈರಲ್‌ ಆಗಿದೆ. ಸುದೀಪ್‌ ಅವರ ಹೊಸ ಫೋಸ್ಟರ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

 ‘ಕೆ.ಜಿ.ಎಫ್‌’ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡಿತ್ತು. ‘ಪೈಲ್ವಾನ್‌’ ಎಂಟು ಭಾಷೆಗಳಲ್ಲಿ ತೆರೆಕಾಣುತ್ತಿರುವುದ ಕನ್ನಡ ಚಿತ್ರರಂಗದಮಟ್ಟಿಗೆ ಹೊಸ ದಾಖಲೆಯಾಗಿದೆ.

‘ಪೈಲ್ವಾನ್‌ ಚಿತ್ರ ಪೋಸ್ಟರ್‌ ಬಿಡುಗಡೆ ಮಾಡುತ್ತಿರುವುದು ಖುಷಿಯಾಗಿದೆ. ಜೊತೆಗೆ, ಈ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದು ಸಂತಸ ತಂದಿದೆ’ ಎಂದು ಬಾಲಿವುಡ್‌ ನಟ ಸುನಿಲ್‌ ಶೆಟ್ಟಿ ಟ್ವೀಟ್‌ ಮಾಡಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು