ಶನಿವಾರ, ಮಾರ್ಚ್ 25, 2023
28 °C
ಪಾಕಿಸ್ತಾನದ ಪೇಶಾವರದಲ್ಲಿ ಪ್ರಾರ್ಥನೆ, ಮೋಂಬತ್ತಿ ಹಚ್ಚಿ ಗೌರವ

ದಿಲೀಪ್‌ ಮಿಸ್‌ ಮಾಡಿಕೊಳ್ಳುತ್ತಿರುವ ಪಾಕ್‌ ನಟರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ: ಪಾಕಿಸ್ತಾನದ ಸಿನಿಮಾ ನಟರು ಅಗಲಿದ ನಟ ದಿಲೀಪ್‌ ಕುಮಾರ್‌ ಅವರನ್ನು ಗಾಢವಾಗಿ ಸ್ಮರಿಸಿದ್ದಾರೆ.

ಅದ್ನಾನ್‌ ಸಿದ್ದಿಕಿ, ಸಬಾ ಕಮಾರ್‌, ಅಲಿ ಜಾಫರ್‌, ಇಮ್ರಾನ್‌ ಅಬ್ಬಾಸ್‌, ಹುಮಾಯೂನ್ ಸಯೀದ್ ಸಹಿತ ಹಲವು ಪಾಕ್‌ ನಟರು ದಿಲೀಪ್‌ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಪೇಶಾವರ ಅವರ ತವರು ನೆಲ. ಹೀಗಾಗಿ ಭಾವನಾತ್ಮಕ ನಂಟು ಈಗಲೂ ಇದೆ. 2018ರಲ್ಲಿ ‘ಮಾಮ್‌’ ಚಿತ್ರದಲ್ಲಿ ನಟಿಸಿದ್ದ ಅದ್ನಾನ್‌ ಸಿದ್ದಿಕಿ ಅವರು ದಿಲೀಪ್‌ ಕುಮಾರ್‌ ಅವರನ್ನು ಒಂದು ಸಂಸ್ಥೆ ಎಂದೇ ಬಣ್ಣಿಸಿದ್ದಾರೆ.

ಪೇಶಾವರದಲ್ಲಿರುವ ದಿಲೀಪ್‌ ಕುಮಾರ್ ಅವರ ಪೂರ್ವಿಕರ ಮನೆಯ ಮುಂಭಾಗ ಮೋಂಬತ್ತಿ ಹಚ್ಚಿ ಗೌರವ ಸಲ್ಲಿಸಲಾಯಿತು. ಜೊತೆಗೆ ಸಾಮೂಹಿಕ ಪ್ರಾರ್ಥನೆ ನೆರವೇರಿದೆ.

‘ದಿಲೀಪ್‌ ಅವರನ್ನು ದಂತಕಥೆ ಎಂದು ಬಣ್ಣಿಸಿದರೆ ಅದು ಸಣ್ಣ ಶಬ್ದ ಅಷ್ಟೆ. ಥೇಸ್ಪಿಯನ್ನರು (ರಂಗಭೂಮಿ, ನಟನೆ, ಕಲಾ ಕ್ಷೇತ್ರದ ವ್ಯಕ್ತಿಗಳು) ಯಾವತ್ತೂ ಸಾಯುವುದಿಲ್ಲ. ನಮ್ಮ ಕೆಲಸಗಳಲ್ಲಿ ದಿಲೀಪ್‌ ಕುಮಾರ್‌ ಜೀವಂತವಾಗಿರುತ್ತಾರೆ’ ಎಂದು ಸಿದ್ದಿಕಿ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನಟನಾಗಲು ಬಯಸುವ ಯಾರೂ ಕೂಡಾ ದಿಲೀಪ್‌ ಅವರನ್ನು ಗುರು ಎಂದು ಪರಿಗಣಿಸುತ್ತಾರೆ ಎಂದೂ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ದಿಲೀಪ್‌ ಅವರು ‘ದೇವದಾಸ್‌’ನಂಥ ದುರಂತ ಕಥೆಯ ಪ್ರೇಮಿಯನ್ನು ತಮ್ಮದೇ ಶೈಲಿಯಲ್ಲಿ ಅಮರಗೊಳಿಸಿದರು. ಅದಕ್ಕೆ ಬೇರೆ ಸಾಟಿಯೇ ಇಲ್ಲ ಎಂದು ಸಿದ್ದಿಕಿ ಭಾವುಕರಾಗಿ ನುಡಿದಿದ್ದಾರೆ.

ಬಾಲಿವುಡ್‌ನ ಪ್ರಸಿದ್ಧ ಸರಣಿ ‘ಮಾಟ್‌’ ಮತ್ತು ‘ಹಿಂದಿ ಮೀಡಿಯಂ’ನ ನಟಿ ಸಭಾ ಕಮಾರ್‌ ಕೂಡಾ ದುಃಖ ವ್ಯಕ್ತಪಡಿಸಿದ್ದಾರೆ.


ಪಾಕಿಸ್ತಾನದ ಪೇಶಾವರದಲ್ಲಿರುವ ದಿಲೀಪ್‌ ಕುಮಾರ್‌ ಅವರ ಪೂರ್ವಿಕರ ಮನೆಯ ಮುಂಭಾಗ ಮೋಂಬತ್ತಿ ಹಚ್ಚಿ ಗೌರವ ಸಲ್ಲಿಸಲಾಯಿತು –ಎಎಫ್‌ಪಿ ಚಿತ್ರ

‘ಅವರು ಪ್ರಪಂಚದಾದ್ಯಂತದ ನಟರಿಗೆ ಸ್ಫೂರ್ತಿಯಾಗಿದ್ದರು. ನಿಜಕ್ಕೂ ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವರ ಬಳಿಗೆ ಹಿಂದಿರುಗುತ್ತೇವೆ. ಅವರ ಅಗಲಿಕೆಗೆ ಗಾಢ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಕ್ಕೆ ದಿಲೀಪ್‌ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿ ಸಿಗಲಿ’ ಎಂದು ಸಭಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ  ಬರೆದಿದ್ದಾರೆ.

ಜಾಫರ್‌ ಕುಮಾರ್‌ ಅವರು ದೀಲೀಪ್‌ ಅವರನ್ನು ಪರಿಶುದ್ಧ, ಪರಿಪೂರ್ಣ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ‘ಒಬ್ಬ ಮನುಷ್ಯ ಎಷ್ಟು ಅತ್ಯಾಧುನಿಕ ಮತ್ತು ಪರಿಷ್ಕರಿಸಲ್ಪಟ್ಟವನೆಂದರೆ, ಅವರು ಮಾತನಾಡಿದ ಪ್ರತಿಯೊಂದು ಸಾಲಿನಲ್ಲೂ ಅಧ್ಯಾಯಗಳನ್ನು ಬರೆಯಬಹುದು. ಒಂದು ಯುಗದ ಅಂತ್ಯವು ಸಮಯರಹಿತವಾಗಿರುತ್ತದೆ’ ಎಂದು ಬರೆದಿದ್ದಾರೆ. ಇದು ಟ್ವಿಟರ್‌ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ಟ್ಯಾಗ್‌ # ದಿಲಿಪ್ ಕುಮಾರ್ #RestInPeace ಹೆಸರಿನಲ್ಲಿ ಹರಿದಾಡುತ್ತಿದೆ.

ಹಿಂದಿ ಚಿತ್ರಗಳಾದ ‘ಕ್ರಿಯೇಚರ್ 3 ಡಿ’ ಮತ್ತು ‘ಎ ದಿಲ್ ಹೈ ಮುಷ್ಕಿಲ್’ ಗಳಲ್ಲಿ ಕಾಣಿಸಿಕೊಂಡ ಅಬ್ಬಾಸ್ ಅವರು ಕೆಲವು ವರ್ಷಗಳ ಹಿಂದೆ ಮುಂಬೈನಲ್ಲಿ ಈದ್ ಹಬ್ಬವನ್ನು ದಿಲೀಪ್‌ ಅವರೊಂದಿಗೆ ಆಚರಿಸಿದ್ದರು. ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

‘ನೀವು ನನ್ನೊಂದಿಗೆ ಮತ್ತು ನನ್ನ ಹೆತ್ತವರೊಂದಿಗೆ ಮುಂಬೈಯಿಂದ ಫೋನ್‌ನಲ್ಲಿ ಮಾತನಾಡಿದ ದಿನವನ್ನು ನಾನು ಈಗಲೂ ನೆನಪಿಸಿಕೊಳ್ಳುತ್ತೇನೆ. ನಂತರ ನನ್ನನ್ನು ನಿಮ್ಮ ಸ್ಥಳಕ್ಕೆ ಈದ್‌ ಆಚರಣೆಗೆ ಕರೆದಿರಿ. ನಾನು ಅಕ್ಷರಶಃ ವಿಸ್ಮಯಗೊಂಡಿದ್ದೇನೆ ಮತ್ತು ನಿಮ್ಮ ಜೊತೆಗಿದ್ದಾಗ ಮಂತ್ರಮುಗ್ಧನಾಗಿದ್ದೆ’ ಎಂದು ಅವರು ನೆನಪಿಸಿಕೊಂಡಿದ್ದಾರೆ.

‘ಖುದಾ ಕೇ ಲಿಯೆ’ ಖ್ಯಾತಿಯ ಶಾನ್ ಶಾಹಿದ್ ಕುಮಾರ್ ಅವರು ದಿಲೀಪ್‌ ಅವರನ್ನು ‘ಪೂರ್ವದ ಶಿಕ್ಷಕ’ ಎಂದು ಕರೆದಿದ್ದಾರೆ.

‘ಎಂತಹ ದಂತಕಥೆ ... ಪ್ರದರ್ಶನ ನೀಡುವ ಪ್ರತಿಯೊಬ್ಬ ಕಲಾವಿದರಲ್ಲೂ ಅವರ ನಟನೆಯ ಮಾದರಿಯು ಯಾವಾಗಲೂ ಕಂಡುಬರುತ್ತದೆ. ಅವರು ಯುಗದ ಕೊನೆಯ ವ್ಯಕ್ತಿಯಾಗಿದ್ದರು’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಹುಮೈನಾ ಮಲಿಕ್ ಪ್ರತಿಕ್ರಿಯಿಸಿ, ‘ದಿಲೀಪ್‌ ಕುಮಾರ್ ಯಾವಾಗಲೂ ನನ್ನ ನೆಚ್ಚಿನ ನಾಯಕ’ ಎಂದಿದ್ದಾರೆ.

‘ಅತ್ಯಂತ ವಿನಮ್ರ ಮತ್ತು ಉತ್ತಮವಾಗಿ ಕಾಣುವವರು. ಅಲ್ಲಾಹನು ನಿಮ್ಮನ್ನು ಅಲ್ಲಿ ಹೆಚ್ಚು ಪ್ರೀತಿಯಿಂದ ಇಟ್ಟುಕೊಳ್ಳಲಿ. ಆಮೆನ್’ ಎಂದು ಮಲಿಕ್ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು