ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Jailer: ಶಿವಣ್ಣನ ನರಸಿಂಹಾವತಾರಕ್ಕೆ ಪ್ಯಾನ್ ಇಂಡಿಯಾ ಪ್ರೇಕ್ಷಕರು ಫಿದಾ

Published 11 ಆಗಸ್ಟ್ 2023, 7:52 IST
Last Updated 11 ಆಗಸ್ಟ್ 2023, 7:52 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು: ಸೂಪರ್‌ ಸ್ಟಾರ್ ರಜಿನಿಕಾಂತ್ ನಟನೆಯ ‘ಜೈಲರ್’ ಚಿತ್ರ ಗುರುವಾರ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ಬಂದು ಹೋಗುವ ಶಿವರಾಜ್‌ಕುಮಾರ್ ಅಭಿನಯಕ್ಕೆ ಕನ್ನಡಿಗರು ಮಾತ್ರವಲ್ಲ, ತಮಿಳು, ತೆಲುಗು ಹಾಗೂ ಇತರ ಭಾಷಾ ಪ್ರೇಕ್ಷಕರೂ ಫಿದಾ ಆಗಿದ್ದಾರೆ.

ಮುತ್ತುವೇಲ್ ಪಾಂಡಿಯನ್ ಅವತಾರದಲ್ಲಿ ತೆರೆ ಮೇಲೆ ಬರುವ ರಜನಿಕಾಂತ್‌ ಎಂಟ್ರಿಗೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಯ ಮಳೆಗರೆದರೆ, ನರಸಿಂಹ ಪಾತ್ರದಲ್ಲಿ ಕಾಣಿಸಿಕೊಳ್ಳುವ ಶಿವಣ್ಣನ ಮಾಸ್‌ ಲುಕ್‌, ಎಂಟ್ರಿ ಶೈಲಿ ಹಾಗೂ ಸಂಗೀತಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ.

ತಮಗಾದ ಅನುಭವವನ್ನು ಹಲವರು ಸಾಮಾಜಿಕ ಜಾಲತಾಣ ‘ಎಕ್ಸ್‌’ (ಟ್ವಿಟರ್), ಫೇಸ್‌ಬುಕ್‌ಗಳಲ್ಲಿ ಹಂಚಿಕೊಂಡಿದ್ದಾರೆ. 

ಫ್ಯಾಮಿಲಿ ಮ್ಯಾನ್‌ ಮುತ್ತುವೇಲ್ ಮಗ ಅರ್ಜುನ್ ಪೊಲೀಸ್ ಅಧಿಕಾರಿ. ಪ್ರಕರಣವನ್ನು ಭೇದಿಸಲು ಹೋದ ಮಗ ಕಣ್ಮರೆಯಾಗುತ್ತಾನೆ. ಮಗನನ್ನು ಹುಡುಕುವ ಯತ್ನದಲ್ಲಿ ಕರ್ನಾಟಕ ಮೂಲದ ಡಾನ್‌ ನರಸಿಂಹನ ಸಹಾಯ ಪಡೆಯುತ್ತಾನೆ. ಕನ್ನಡ ಸಂಭಾಷಣೆಯೊಂದಿಗೆ ಪ್ರವೇಶ ಪಡೆಯುವ ಶಿವರಾಜ್‌ಕುಮಾರ್ ಮ್ಯಾನರಿಸಮ್‌ ಅನ್ನು ಪ್ರೇಕ್ಷಕರು ಮನಸಾರೆ ಹೊಗಳಿದ್ದಾರೆ.

ರಜನಿಕಾಂತ್ ಅವರನ್ನು ತೆರೆ ಮೇಲೆ ಯಾರಾದರೊಬ್ಬ ನಟ ಹಿಂದಿಕ್ಕಲಿದ್ದಾರೆ ಎಂದು ನಾನು ನನ್ನ ಕನಸಿನಲ್ಲಿಯೂ ಸಹ ಊಹಿಸಿರಲಿಲ್ಲ. ಆದರೆ ಕ್ಲೈಮ್ಯಾಕ್ಸ್‌ಗೂ ಮೊದಲು ಬರುವ ದೃಶ್ಯದಲ್ಲಿ ಶಿವಣ್ಣ ರಜನಿಕಾಂತ್‌ ಅವರನ್ನು ಹಿಂದಿಕಿದ್ದಾರೆ. ನಾನು ಶಿವಣ್ಣನ ಅಭಿಮಾನಿಯಾದೆ ಎಂದೆನಿಸುತ್ತದೆ’ ಎಂದು ತಮಿಳು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

‘ಇವರ ಒಂದೂ ಚಿತ್ರವನ್ನು ನಾನು ನೋಡಿಲ್ಲ. ಆದರೆ ಇವರು ತೆರೆ ಮೇಲೆ ಬಂದ ದೃಶ್ಯವಂತೂ ಅದ್ಭುತ. ಕ್ಲೈಮ್ಯಾಕ್ಸ್‌ಗೂ ಮೊದಲ ಇವರ ಎಂಟ್ರಿ ನಿಜಕ್ಕೂ ರೋಮಾಂಚನ’ ಎಂದು ಮತ್ತೊಬ್ಬರು ‘ಎಕ್ಸ್’ ನಲ್ಲಿ ಬರೆದಿದ್ದಾರೆ.

ಜೈಲರ್ ಚಿತ್ರದಲ್ಲಿ ಶಿವಣ್ಣ ಅವರನ್ನು ನಿರ್ದೇಶಕ ನೆಲ್ಸನ್ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರುವುದರ ಬಗ್ಗೆ ಹೊಗಳಿ ಬರೆದುಕೊಂಡಿದ್ದಾರೆ‌. ಕನ್ನಡ ನಿರ್ದೇಶಕರಿಗಿಂತ ಚೆನ್ನಾಗಿ ಶಿವಣ್ಣ ಅವರನ್ನು ನೆಲ್ಸನ್ ತೆರೆ ಮೇಲೆ ತೋರಿಸಿದ್ದಾರೆ ಎಂದೂ ಹೇಳಿದ್ದಾರೆ.

ರಜನಿಕಾಂತ್, ಶಿವರಾಜ್‌ಕುಮಾರ್, ಮೋಹನ್‌ಲಾಲ್‌, ತಮನ್ನಾ ಸೇರಿದಂತೆ ಪ್ರಮುಖ ನಟರು ಜೈಲರ್ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನು ಓದಿ: Jailer Cinema Review: ರಜನಿ ಠುಸ್ ಪಟಾಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT