ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಂದರು ಪರಿಣೀತಿ

Last Updated 17 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ನಮಸ್ತೆ ಲಂಡನ್‌ ಚಿತ್ರ ಮನಸಿನಿಂದ ಮರೆಯಾಗುವ ಮುನ್ನವೇ ನಮಸ್ತೆ ಇಂಗ್ಲೆಂಡ್‌ ಚಿತ್ರ ತೆರೆಗೆ ಬರಲಿದೆ. ಇದರಲ್ಲಿ ಅರ್ಜುನ್‌ ಕಪೂರ್ ಹಾಗೂ ಪರಿಣೀತಿ ಚೋಪ್ರಾ ನಟಿಸಿದ್ದಾರೆ. ಚಿತ್ರದ ಪ್ರಮೋಷನ್‌ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು, ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜಸ್ಪ್ರೀತ್‌ (ಪರಿಣೀತಿ) ಮತ್ತು ಪರಮ್‌ (ಅರ್ಜುನ್‌) ಇಬ್ಬರ ಪಯಣದ ಸುತ್ತ ಈ ಚಿತ್ರವಿದೆ. ನಮಸ್ತೆ ಲಂಡನ್‌ನಲ್ಲಿ ಅಕ್ಷಯ್‌ ಕುಮಾರ್‌ ಹಾಗೂ ಕತ್ರಿನಾ ಕೈಫ್‌ ನಟಿಸಿದ್ದರು. 2007ರಲ್ಲಿ ಬಿಡುಗಡೆಯಾದ ಈ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ವಿಚಿತ್ರ ಎನ್ನುವಷ್ಟಂತೂ ಕಲೆಕ್ಷನ್‌ ಬಾಚಿತ್ತು. ಇದೀಗ ನಮಸ್ತೆ ಇಂಗ್ಲೆಂಡ್‌ನ ಎರಡು ಟ್ರೇಲರ್‌ಗಳು ಬಿಡುಗಡೆಯಾಗಿವೆ. ಒಂದರಲ್ಲಿ ಪರಿಣೀತಿ ಹಾಗೂ ಅರ್ಜುನ್‌ ಕಪೂರ್‌ ನಡುವಿನ ಲವ್‌ ಹೇಟ್‌ ಬಾಂಧವ್ಯದ ಚಿತ್ರಣವಿದ್ದರೆ ಇನ್ನೊಂದರಲ್ಲಿ ಇದು ತ್ರಿಕೋನ ಪ್ರೇಮಕಥೆಯೇ ಎಂಬ ಸಂಶಯ ಹುಟ್ಟಿಸುವಂತಿದೆ.

ಪರಿಣೀತಿ ಚೋಪ್ರಾ ಬಹುದಿನಗಳ ಮೇಲೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅವರ ಅಭಿಮಾನಿಗಳಿಗೆ ಖುಷಿಯಂತೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT