ಮಂಗಳವಾರ, ಏಪ್ರಿಲ್ 7, 2020
19 °C

ಮಾಲ್ಡೀವ್ಸ್‌ ಕಿನಾರೆಯಲ್ಲಿ ಬೆಳದಿಂಗಳ ಬಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪರಿಣೀತಿ ಚೋಪ್ರಾ ಸಮುದ್ರ ಸ್ನಾನದ ಮೋಹಕ ಚಿತ್ರಗಳಿವು. ಈ ಬಾಲಿವುಡ್‌ ಬೆಡಗಿ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್‌ನ ರಜೆಯ ಮಜವನ್ನು ಹಂಚಿಕೊಂಡಿದ್ದಾರೆ.

‘ಸುಂದರ ಕಡಲ ಕಿನಾರೆಗಳ ಮಾಲ್ಡೀವ್ಸ್‌ ನನ್ನ ಎರಡನೇ ಮನೆಯಂತೆ. ನನಗೊಂದಷ್ಟು ಸಾಗರವನ್ನು ಕೊಟ್ಟುಬಿಡಿ ಜೀವನ ಪೂರ್ತಿ ಸಂತೋಷದಿಂದ ಇರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಚಿಕ್ಕ ಮಕ್ಕಳಂತೆ ನೀರಿನಲ್ಲಿ ಆಟವಾಡುತ್ತ ಮೈಮರೆತಿರುವ ಪರಿಣಿತಿ ಚಿತ್ರಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎರಡು ಸುಂದರ ದೃಶ್ಯಗಳು ಒಂದೆಡೆ ಸಮ್ಮಿಲನಗೊಂಡಿವೆ ಎಂದು ಕೆಲವರು ನಟಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. 

ಒಂದು ತಿಂಗಳ ಅಂತರದಲ್ಲಿ ಪರಿಣಿತಿ ಎರಡನೇ ಬಾರಿ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಡಿಸೆಂಬರ್‌ ಅಂತ್ಯದಲ್ಲಿ ಆಸ್ಟ್ರೀಯಾದ ರುದ್ರ ರಮಣೀಯ ಕಣಿವೆಗಳಲ್ಲಿ ಸುತ್ತಾಡಿ ಸುಸ್ತಾಗಿದ್ದನ್ನು ಹೀಗೆ ಕಡಲ ತಡಿಗಳಲ್ಲಿ ಹಾಯಾಗಿ ಮಲಗಿ ರಿಲ್ಯಾಕ್ಸ್‌ ಆದಂತಿದೆ.

 
 
 
 

 
 
 
 
 
 
 
 
 
 
 

Parineeti Chopra (@parineetichopra) ರಿಂದ ಹಂಚಲಾದ ಪೋಸ್ಟ್ ಅವರು ರಂದು

ತಿಳಿ ನೀಲಿ ಆಗಸ ಮತ್ತು ಸ್ಫಟಿಕದಂತೆ ಸ್ವಚ್ಚವಾಗಿರುವ ಸಾಗರದ ದಡದಲ್ಲಿ ಕಪ್ಪು ಕನ್ನಡಕ ಮತ್ತು ಬ್ಲ್ಯಾಕ್‌ ಸ್ವಿಮ್‌ ಸೂಟ್‌ನಲ್ಲಿ 31 ವರ್ಷದ ಪರಿಣೀತಿ ಇನ್ನೂ 16ರ ತರುಣಿಯಂತೆ ಕಾಣುತ್ತಿದ್ದಾರೆ. 2011ರಲ್ಲಿ ಲೇಡಿಸ್‌ ವರ್ಸಸ್‌ ರಿಕಿ ಬೇಹ್ಲ್‌ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಪರಿಣೀತಿ ಗೋಲ್‌ಮಾಲ್‌ ಅಗೇನ್‌, ಹಸೀ ತೋ ಪಸೀ, ಇಷ್ಕ್‌ಜಾದೆ, ಕಿಲ್‌ ದಿಲ್‌ ಮತ್ತಿತರ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.

ಸಿದ್ಧಾರ್ಥ ಮಲ್ಹೋತ್ರಾ ಜತೆ ‘ಜಬರಿಯಾ ಜೋಡಿ’ಯಲ್ಲಿ ನಟಿಸಿದ್ದ ಪರಿಣೀತಿ ಮುಂದಿನ ಚಿತ್ರ ‘ಸೈನಾ’ ನಟಿಸಲು ಸಿದ್ಧತೆ ನಡೆಸಿದ್ದಾರೆ. ಇದು ಬ್ಯಾಡ್ಮಿಂಟನ್‌ ಪಟು ಸೈನಾ ನೆಹ್ವಾಲ್‌ ಜೀವನ ಕತೆ ಆಧರಿಸಿದ ಬಯೋಪಿಕ್‌. ಸದ್ಯ ‘ಸಂದೀಪ್‌ ಔರ್‌ ಪಿಂಕಿ ಫರಾರ್‌’ ಮತ್ತು ‘ದಿ ಗರ್ಲ್‌ ಆನ್‌ ದಿ ಟ್ರೇನ್‌’ ಚಿತ್ರದ ಹಿಂದಿ ರಿಮೇಕ್‌ ‘ದ ಗರ್ಲ್‌ ಆನ್‌ ದಿ ಟ್ರೇನ್‌ ಆ್ಯಂಡ್‌ ಬುಜ್‌: ಪ್ರೈಡ್‌ ಆಫ್‌ ಇಂಡಿಯಾ’ ಪರಿಣೀತಿ ಕೈಯಲ್ಲಿವೆ.

 
 
 
 

 
 
 
 
 
 
 
 
 
 
 

Parineeti Chopra (@parineetichopra) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು