ಶನಿವಾರ, ಅಕ್ಟೋಬರ್ 19, 2019
28 °C

ಸೈನಾ ನೆಹ್ವಾಲ್‌ ಪಾತ್ರಕ್ಕಾಗಿ ಪರಿಣಿತಿ ಬ್ಯಾಡ್ಮಿಂಟನ್ ಅಭ್ಯಾಸ

Published:
Updated:
Prajavani

ಸೈನಾ ನೆಹ್ವಾಲ್ ಅವರ ಪಾತ್ರದಲ್ಲಿ ಅಭಿನಯಿಸಲಿರುವ ಪರಿಣಿತಿ ಚೋಪ್ರಾ ಬ್ಯಾಡ್ಮಿಂಟನ್ ಅಂಗಳದಲ್ಲಿ ಬೆವರು ಹರಿಸಿದ್ದಾರೆ. ಕೆಲವು ತಿಂಗಳಿನಿಂದ ಸತತವಾಗಿ ಅಭ್ಯಾಸ ಮಾಡುತ್ತಿರುವ ಅವರು ಸದ್ಯದಲ್ಲೇ ಸಿನಿಮಾದ ಶೂಟಿಂಗ್ ಆರಂಭವಾಗುತ್ತಿದೆ ಎಂದು ಹೇಳಿದ್ದಾರೆ. 

‘ಅಭ್ಯಾಸ ಮಾಡಿ ಬೆವರು ಹರಿಸಿದ್ದೇನೆ’ ಎಂದು ಬರೆದುಕೊಂಡಿರುವ ಅವರು ಅಂಗಳದಲ್ಲಿ ಬ್ಯಾಡ್ಮಿಂಟನ್ ಆಡುತ್ತಿರುವ ಚಿತ್ರಗಳನ್ನು ಅಭಿಮಾನಿಗಳಿಗಾಗಿ ಶೇರ್‌ ಮಾಡಿದ್ದಾರೆ. ಸೈನಾ ನೆಹ್ವಾಲ್‌ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ತಂದುಕೊಟ್ಟಿದ್ದಾರೆ. 2012 ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಅವರು ಪದಕ ಗೆದ್ದುಕೊಂಡಿದ್ದರು. 2018ರಿಂದಲೇ ಅವರ ಜೀವನಕತೆ ಆಧಾರಿತ ಚಿತ್ರ ತೆರೆ ಕಾಣಲಿದೆ ಎಂಬ ವದಂತಿ ಬಾಲಿವುಡ್‌ನಲ್ಲಿ ಹಬ್ಬಿತ್ತು. 2019ರ ಮಾರ್ಚ್‌ ವೇಳೆಗೆ ಭೂಷಣ್‌ ಕುಮಾರ್ ಅವರ ನಿರ್ಮಾಣದಲ್ಲಿ ಸಿನಿಮಾ ಘೋಷಣೆ ಮಾಡಲಾಯಿತು.

ಅಮೋಲ್‌ ಗುಪ್ಟೆ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಸೈನಾ ನೆಹ್ವಾಲ್‌ ಅವರೇ ಹೇಳಿಕೊಂಡ ಕತೆಗಳ ಆಧಾರದ ಮೇಲೆ ಚಿತ್ರಕಥೆ ನಿರ್ಮಾಣಗೊಂಡಿದೆ. ‘ಸೈನಾ ಅವರ ಬ್ಯಾಡ್ಮಿಂಟನ್‌ ಜರ್ನಿಯನ್ನು ತೆರೆಗೆ ತರುವ ಪ್ರಯತ್ನ ಮಾತ್ರ ಅಲ್ಲ. ಇದು ಅವರ ಸಂಪೂರ್ಣ ಬದುಕನ್ನು ಕಟ್ಟಿಕೊಡಲಿದೆ’ ಎಂದು ಇತ್ತೀಚೆಗಷ್ಟೇ ಅಮೋಲ್ ಹೇಳಿಕೊಂಡಿದ್ದರು.

Post Comments (+)