ನಿಲ್ಲದ ಪಠಾಣ್ ಅಬ್ಬರ: ಪ್ರಪಂಚದಾದ್ಯಂತ ₹800 ಕೋಟಿ ಗಳಿಕೆ

ಮುಂಬೈ: ಬಿಡುಗಡೆಗೊಂಡ 2ನೇ ವಾರವೂ ಗಳಿಕೆಯಲ್ಲಿ ಮುಂಚೂಣಿಯಲ್ಲಿರುವ ಶಾರುಖ್ ಖಾನ್ ನಟನೆಯ ಬಾಲಿವುಡ್ ಚಿತ್ರ ‘ಪಠಾಣ್’, 12 ದಿನಗಳಲ್ಲಿ ಪ್ರಪಂಚದಾದ್ಯಂತ ₹832 ಕೋಟಿ ಗಳಿಸಿದೆ.
ಯಶ್ ರಾಜ್ ಫಿಲ್ಮ್ಸ್ ನೀಡಿರುವ ಮಾಹಿತಿ ಪ್ರಕಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವು ಸಾಗರೋತ್ತರ ಪ್ರದೇಶಗಳಲ್ಲಿ ₹ 317.20 ಕೋಟಿ ಮತ್ತು ಭಾರತದಲ್ಲಿ ₹ 515 ಕೋಟಿ ಗಳಿಸಿದೆ. ಭಾರತದಲ್ಲಿ ಚಿತ್ರದ ಈವರೆಗಿನ ನಿವ್ವಳ ಗಳಿಕೆ ₹ 28.50 ಕೋಟಿ.
ನಾಲ್ಕು ವರ್ಷಗಳ ನಂತರ ಶಾರುಖ್ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ಪಡುಕೋಣೆ, ಡಿಂಪಲ್ ಕಪಾಡಿಯಾ ಮತ್ತು ಆಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸಲ್ಮಾನ್ ಖಾನ್ ಅವರ ‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’, ಮತ್ತು ಹೃತಿಕ್ ರೋಷನ್ ಅವರ ‘ವಾರ್’ ನಂತರ ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಸ್ಪೈ ಯೂನಿವರ್ಸ್‌ನಲ್ಲಿ ನಿರ್ಮಿಸಿರುವ ಚಿತ್ರ ‘ಪಠಾಣ್’.
ಚಿತ್ರದ ‘ಬೇಷರಮ್ ರಂಗ್’ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಬಟ್ಟೆ ಧರಿಸಿ ನರ್ತಿಸಿದ್ದರು. ಕೇಸರಿ ಬಣ್ಣವನ್ನು ಅವಮಾನಿಸುವ ಸಾಲುಗಳು ಗೀತೆಯಲ್ಲಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಈ ಮೂಲಕ ಚಿತ್ರತಂಡ ಕೆಲವರ ಭಾವನೆ ಘಾಸಿಗೊಳಿಸಿದೆ ಎಂದು ಕೆಲ ಬಲಪಂಥೀಯ ಸಂಘಟನೆಗಳು ಚಿತ್ರ ಬಾಯ್ಕಾಟ್ ಕರೆ ನೀಡಿದ್ದವು. ದೇಶದ ಕೆಲವೆಡೆ ಪ್ರತಿಭಟನೆ, ಚಿತ್ರಮಂದಿರಕ್ಕೆ ದಾಳಿಯ ನಡುವೆಯೂ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಪಠಾಣ್ ಯಶಸ್ವಿಯಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.