ಭಾನುವಾರ, ಜನವರಿ 23, 2022
27 °C

ತೆಲುಗು ನಟ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ, ಮಗ ಅಕಿರಗೆ ಕೋವಿಡ್ ದೃಢ

ಐಎಎನ್‌ಎಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗು ನಟ ಪವನ್‌ ಕಲ್ಯಾಣ್‌ ಅವರ ಮಾಜಿ ಪತ್ನಿ, ನಟಿ ರೇಣು ದೇಸಾಯಿ, ಪುತ್ರ ಅಕಿರ ನಂದನ್‌ಗೆ ಕೋವಿಡ್ ದೃಢಪಟ್ಟಿದೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ನನಗೆ ಮತ್ತು ಅಕಿರನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸದ್ಯ ನಾವು ಚೇತರಿಸಿಕೊಳ್ಳುತ್ತಿದ್ದೇವೆ. ಎಲ್ಲರೂ ಕೋವಿಡ್‌ 3ನೇ ಅಲೆಯ ಬಗ್ಗೆ ಎಚ್ಚರಿಕೆ ವಹಿಸಿ ಜತೆಗೆ, ತಪ್ಪದೇ ಮಾಸ್ಕ್‌ ಧರಿಸಿ’ ಎಂದು ರೇಣು ಮನವಿ ಮಾಡಿದ್ದಾರೆ.

ನಾವು ಎರಡು ಡೋಸ್ ಲಸಿಕೆ ಪಡೆದಿದ್ದೇವೆ. ನೀವೂ ಕೂಡ ತಪ್ಪದೇ ಲಸಿಕೆ ಪಡೆಯಿರಿ ಎಂದು ವಿನಂತಿಸಿದ್ದಾರೆ.

ಇತ್ತೀಚೆಗೆ ನಟ ಮಹೇಶ್‌ ಬಾಬು, ನಟಿ ತ್ರಿಷಾ ಅವರಿಗೆ ಕೋವಿಡ್ ದೃಢಪಟ್ಟಿತ್ತು.

ಇದನ್ನೂ ಓದಿ... ಕಾಳಿ ದೇವಿಯ ಪಾದದ ಮೇಲೆ ವ್ಯಕ್ತಿಯ ರುಂಡ ಪತ್ತೆ: ತೆಲಂಗಾಣದಲ್ಲಿ ಆಗಿದ್ದಾದರೂ ಏನು?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು