‘ಲ್ಯಾಂಡ್ಲಾರ್ಡ್‘ ಚಿತ್ರದಲ್ಲಿ ಹೂಡಿಕೆ ಮಾಡಿದ್ದ ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಅವರು ಪಿ.ಸಿ. ಶೇಖರ್ ನಿರ್ದೇಶನದ ಮುಂಬರುವ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
.ರಿಷಬ್ ಶೆಟ್ಟಿ ಫಿಲ್ಮ್ಸ್ನಿಂದ ‘ಅಧ್ಯಾಯ–2‘ : ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ.
‘ರಾಗಾ‘, 'ರೊಮಿಯೋ’ ನಂತಹ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿ.ಸಿ. ಶೇಖರ್ ಅವರು ಇದೀಗ, ಯುಗಾದಿ ಹಬ್ಬದಂದು ತಮ್ಮ ನಿರ್ದೇಶನದ 12ನೇ ಚಿತ್ರವನ್ನು ಘೋಷಿಸಿದ್ದಾರೆ.

ಶೇಖರ್ ನಿರ್ದೇಶನ, ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿರುವ ಮುಂಬರುವ ಹೊಸ ಚಿತ್ರದ ಎಲ್ಲಾ ತಯಾರಿಗಳು ಮುಗಿದಿದ್ದು, ಇನ್ನೇನು ಚಿತ್ರ ಸೆಟ್ಟೇರಬೇಕಿದೆ ಎಂದು ಚಿತ್ರತಂಡ ತಿಳಿಸಿದೆ.

ಸದ್ಯ, ಪಿ.ಸಿ. ಶೇಖರ್ ನಿರ್ದೇಶನದ ‘ಮಹಾನ್‘ ಚಿತ್ರದ ಕೊನೆಯ ಹಂತದ ಚಿತ್ರೀಕರಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆಯೂ ಮತ್ತೊಂದು ಹೊಸ ಚಿತ್ರಕ್ಕೆ ಕೆ.ವಿ ಸತ್ಯಪ್ರಕಾಶ್ ಜೊತೆ ಕೈ ಜೋಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪಿ.ಸಿ. ಶೇಖರ್ ಅವರು, ‘ಸಾರಥಿ‘, ‘ಲ್ಯಾಂಡ್ಲಾರ್ಡ್‘ ನಂತಹ ದೊಡ್ಡ ಸಿನಿಮಾಗಳನ್ನು ಮಾಡಿರುವ ನಿರ್ಮಾಪಕರು ನನಗೆ ಅವಕಾಶ ಕೊಟ್ಟಿದ್ದು ತುಂಬಾ ಖುಷಿಯ ವಿಚಾರ. ಸದ್ಯದಲ್ಲೇ ಹೊಸ ಚಿತ್ರದ ಶೀರ್ಷಿಕೆ ಹಾಗೂ ನಟರ ಬಗ್ಗೆ ಮಾಹಿತಿ ನೀಡುತ್ತೇವೆ‘ ಎಂದಿದ್ದಾರೆ.

ಹೊಸ ಚಿತ್ರವನ್ನು ಪಿ.ಸಿ. ಶೇಖರ್ ನಿರ್ದೇಶನ ಮಾಡುತ್ತಿದ್ದರೆ, ಕೆ.ವಿ. ಸತ್ಯಪ್ರಕಾಶ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇವರಿಬ್ಬರ ಜತೆಗೆ ‘ರಾಗಾ‘ ಚಿತ್ರದ ನಟ ಮಿತ್ರ ಅವರು ಈ ಸಿನಿಮಾದಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.