ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿ ಬಾಲಸುಬ್ರಮಣ್ಯಂಗೆ ಕೋವಿಡ್ ನೆಗೆಟಿವ್, ಇದು ವದಂತಿ ಎಂದ ಎಸ್‌ಪಿಬಿ ಪುತ್ರ

Last Updated 24 ಆಗಸ್ಟ್ 2020, 8:07 IST
ಅಕ್ಷರ ಗಾತ್ರ

ಚೆನ್ನೈ: ಇಲ್ಲಿನಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಮಣ್ಯಂ ಅವರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದುಪಿಆರ್‌ಒ ನಿಖಿಲ್ ಮುರುಗನ್ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಇದು ವದಂತಿ ಎಂದು ಎಸ್‌ಪಿಬಿ ಪುತ್ರ ಚರಣ್ ಹೇಳಿದ್ದಾರೆ.

ನನ್ನಪ್ಪನಿಗೆ ಕೋವಿಡ್ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂಬ ವದಂತಿಯೊಂದು ಹರಿದಾಡುತ್ತಿದೆ. ಅವರಿಗೆ ಕೋವಿಡ್ ಪಾಸಿಟಿವ್ ಅಥವಾ ನೆಗೆಟಿವ್ ಏನೇ ಆಗಿರಲಿ, ಅವರ ಆರೋಗ್ಯ ಸ್ಥಿತಿ ಅದೇ ರೀತಿ ಇದೆ. ಇಎಂಒ ವೆಂಟಿಲೇಟರ್ ಸಹಾಯದಿಂದ ಅವರು ಚಿಕಿತ್ಸೆಯಲ್ಲಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಚರಣ್ ತಮ್ಮ ಫೇಸ್‌ಬುಕ್ ಪುಟದಲ್ಲಿ ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.

ಸಾರ್ವಜನಿಕ ಸಂಪರ್ಕಾಧಿಕಾರಿ ನಿಖಿಲ್ ಮುರುಗನ್ ಅವರು ಮಾಧ್ಯಮದವರಿಗೆ ಎಸ್‌ಪಿಬಿಗೆ ಕೊರೊನಾ ನೆಗೆಟಿವ್ ವರದಿ ಬಂದಿರುವುದಾಗಿ ಸಂದೇಶ ಕಳಿಸಿದ್ದರು. ಇದೇ ಸಂದೇಶವನ್ನು ಅವರು ಟ್ವೀಟ್ ಕೂಡಾ ಮಾಡಿದ್ದರು. ಇದಾಗಿಅರ್ಧ ಗಂಟೆಯ ನಂತರ ಚರಣ್ ಫೇಸ್‌ಬುಕ್‌ನಲ್ಲಿ ಈ ವಿಡಿಯೊ ಪೋಸ್ಟ್ ಮಾಡಿದ್ದಾರೆ. ಇದೀಗ ನಿಖಿಲ್ ತಮ್ಮ ಟ್ವೀಟ್ ಡಿಲೀಟ್ ಮಾಡಿದ್ದಾರೆ.

16 ಭಾಷೆಗಳಲ್ಲಿ 40,000 ಕ್ಕಿಂತಲೂ ಹೆಚ್ಚು ಹಾಡುಗಳನ್ನು ಹಾಡಿರುವಗಾಯಕ ಎಸ್‌ಪಿಬಿ, 74ರ ಹರೆಯದ ಅವರಿಗೆ ಆಗಸ್ಟ್ 5ರಂದು ಕೋವಿಡ್ ಸೋಂಕು ಇರುವುದಾಗಿ ದೃಢಪಟ್ಟಿದ್ದುಆಗಸ್ಟ್13ರಿಂದ ಚೆನ್ನೈಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT