ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಯವಿಟ್ಟು ಮರಳಿ ಬಾ’ ಸುಶಾಂತ್‌ ಸಹೋದರಿ ಶ್ವೇತಾ ಭಾವುಕ ಪೋಸ್ಟ್‌

Last Updated 15 ಫೆಬ್ರುವರಿ 2021, 14:14 IST
ಅಕ್ಷರ ಗಾತ್ರ

ಬಾಲಿವುಡ್‌ನ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್‌ ರಜಪೂತ್ ಇಹಲೋಕ ತ್ಯಜಿಸಿ 8 ತಿಂಗಳು‌ಗಳು ಕಳೆದಿವೆ. ಇಂದು ಸುಶಾಂತ್ ಸಹೋದರಿ ಶ್ವೇತಾ ಸಿಂಗ್ ತಮ್ಮನ ನೆನಪಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ಭಾವುಕವಾಗಿ ಬರೆದುಕೊಂಡು ಸುಶಾಂತ್ ಫೋಟೊವನ್ನು ಹಂಚಿಕೊಂಡಿದ್ದಾರೆ.

‘ಎಲ್ಲಿಗೆ ಹೊರಟು ಹೋಗಿದ್ದೀಯಾ ಮಗು, ಮರಳಿ ಬಾ. ನಿನ್ನನ್ನು ನೋಡದೇ, ನಿನ್ನ ದನಿ ಕೇಳದೇ ಈಗಾಗಲೇ 8 ತಿಂಗಳುಗಳು ಕಳೆದಿವೆ. ಪ್ಲೀಸ್ ಮರಳಿ ಬಾ’ ಎಂದು ಬರೆದುಕೊಂಡಿದ್ದಾರೆ.

ಸುಶಾಂತ್ ಹುಟ್ಟಿದ ದಿನವಾದ ಜನವರಿ 21 ರಂದು ಶ್ವೇತಾ ತಮ್ಮನ ಹೆಸರಿನಲ್ಲಿ 25ಲಕ್ಷ ಮೊತ್ತದ ವಿದ್ಯಾರ್ಥಿವೇತನ ಘೋಷಿಸಿದ್ದರು.

ಇಂದು ಶ್ವೇತಾ ಹಂಚಿಕೊಂಡಿದ್ದ ಪೋಸ್ಟ್‌ಗೆ ಸುಶಾಂತ್ ಅಭಿಮಾನಿಗಳೂ ಕೂಡ ಭಾವುಕವಾಗಿ ಪ್ರತಿಕ್ರಿಯಿಸಿದ್ದು, ದಯವಿಟ್ಟು ಮರಳಿ ಬನ್ನಿ ಸರ್‌, ನಿಮ್ಮನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.

ಕಳೆದ ಜೂನ್‌ 14 ರಂದು ಸುಶಾಂತ್ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT