ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖರಾಬು’ ಹಾಡು 5 ಕೋಟಿ ವೀಕ್ಷಣೆ

Last Updated 25 ಜೂನ್ 2020, 15:24 IST
ಅಕ್ಷರ ಗಾತ್ರ

ಧ್ರುವ ಸರ್ಜಾ ಅಭಿನಯದ ‘ಪೊಗರು ಚಿತ್ರದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡಏಪ್ರಿಲ್‌ ತಿಂಗಳಲ್ಲೇ ಈ ಸಿನಿಮಾದ ‘ಖರಾಬು ಬಾಸು ಖರಾಬು, ಓಡೋಗು ಸುಮ್ನೆ ಓಡೋಗು’ ಎಂಬ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿತ್ತು.ಇಲ್ಲಿಯವರೆಗೆ ಈ ಹಾಡನ್ನು 5 ಕೋಟಿ ಮಂದಿ ವೀಕ್ಷಿಸಿದ್ದಾರೆ !

ಚಂದನ್‌ ಶೆಟ್ಟಿ ಸಾಹಿತ್ಯ ಬರೆದು, ಸಂಗೀತ ನಿರ್ದೇಶನ ಮಾಡಿ, ಹಾಡಿರುವ ಈ ಹಾಡಿಗೆ ಧ್ರುವ ಸರ್ಜಾ ಅಭಿಮಾನಿಗಳು ಫಿದಾ ಅಗಿದ್ದಾರೆ. 4 ನಿಮಿಷದ ಈ ವಿಡಿಯೊ ಹಾಡು ಈಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಈ ಹಾಡಿನ ದೃಶ್ಯದಲ್ಲಿದ್ದಾರೆ.

‘ಎರಡು ವರ್ಷಗಳ ನಂತರ ಅಣ್ಣ ಬರ್ತಾವ್ನೇ, ಎಲ್ಲರೂ ಮನೆಗೋಗಿ’ ಎಂಬ ಡೈಲಾಗ್‌ನಿಂದ ಆರಂಭವಾಗುವ ಈ ಹಾಡಿನಲ್ಲಿ ಧ್ರುವಸರ್ಜಾ ಉದ್ದ ಕೂದಲಿನಲ್ಲಿ ವಿಭಿನ್ನ ಗೆಟಪ್‌ನಲ್ಲಿ ಗಮನಸೆಳೆಯುತ್ತಾರೆ. ರಶ್ಮಿಕಾ ಸರಳ ಸುಂದರಿಯಾಗಿ ಇಷ್ಟವಾಗುತ್ತಾರೆ.

ಇದು ‘ಭರ್ಜರಿ’ ಸಿನಿಮಾ ಬಿಡುಗಡೆಯಾದ ಮೂರು ವರ್ಷಗಳ ನಂತರ ಬಿಡುಗಡೆಯಾಗುತ್ತಿರುವ ಧ್ರುವ ಸರ್ಜಾ ಅಭಿನಯದ ಚಿತ್ರ. ಕೊರೊನಾ ಸೋಂಕಿನಿಂದಾಗಿ ಲಾಕ್‌ಡೌನ್‌ ಆಗದೇ ಇದ್ದಿದ್ದರೆ ಈ ಚಿತ್ರದ ಕೆಲಸಗಳು ಮುಗಿದು ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿತ್ತು. ಆದರೆ ಈಗ ಚಿತ್ರದ ಬಿಡುಗಡೆಯೂ ಮುಂದಕ್ಕೆ ಹೋಗುವ ಸಾಧ್ಯತೆಯಿದೆ.

ಈ ಚಿತ್ರಕ್ಕೆ ನಂದಕಿಶೋರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಬಿ.ಕೆ. ಗಂಗಾಧರ್‌ ಬಂಡವಾಳ ಹೂಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್‌, ಧನಂಜಯ್‌, ರವಿಶಂಕರ್‌, ಕುರಿಪ್ರತಾಪ್‌, ಚಿಕ್ಕಣ್ಣ ಮೊದಲಾದವರು ಪಾತ್ರವರ್ಗದಲ್ಲಿದ್ದಾರೆ.

ಹಾಡು ನೋಡಲು–https://www.youtube.com/watch?v=Ysf4QRrcLGM

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT