ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕಿನಿಯಲ್ಲಿ ಕಣ್ಣು ಕೋರೈಸಿದ ಚೆಲುವೆ ಪೂಜಾ ಹೆಗ್ಡೆ

Last Updated 19 ಡಿಸೆಂಬರ್ 2021, 10:15 IST
ಅಕ್ಷರ ಗಾತ್ರ

ಬೆಂಗಳೂರು: ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಅವರು ತಮ್ಮ ನೆಚ್ಚಿನ ಮಾಲ್ಡಿವ್ಸ್‌ ಪ್ರವಾಸವನ್ನೂ ಮೇಲಿಂದ ಮೇಲೆ ಕೈಗೊಳ್ಳುತ್ತಿದ್ದಾರೆ.

ಪೂಜಾ ಹೆಗ್ಡೆ ಈ ಮೊದಲು ಸಾಕಷ್ಟು ಎಕ್ಸ್‌ಪೋಸ್ ಇರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಇದೀಗ ಅವರು ತಮ್ಮ ಪ್ರವಾಸದ ಹಾಟ್ ಫೋಟೊಗಳನ್ನು ಹಂಚಿಕೊಂಡು ಅಭಿಮಾನಿಗಳ ಮನ ತಣಿಸುತ್ತಿದ್ದಾರೆ.

ಪೂಜಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬಿಕಿನಿಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದು, ಈ ಫೋಟೊ ನೋಡಿದ ಹುಡುಗರು, ‘ಕಣ್ಣುಕೋರೈಸುವಂತಿದೆ ಪೂಜಾ ಮೈಮಾಟ’ ಎಂದಿದ್ದಾರೆ.

ಚಿತ್ರದಲ್ಲಿ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಪೂಜಾ ಹರಡಿರುವ ಕೂದಲುಗಳನ್ನು ಕಟ್ಟಿಕೊಳ್ಳುವ ಮೂಲಕ, ‘ಹರಡಿರುವ ಕೂದಲಗಳಂತೆ ನನ್ನ ಪ್ರಯಾಣವೂ ಯಾವಾಗಲೂ ಎಲ್ಲೆಲ್ಲಿಗೋ ಸಾಗುತ್ತಿರುತ್ತದೆ’ ಎಂದು ಹೇಳಿಕೊಂಡಿದ್ದಾರೆ.

ತೆಲುಗಿನ ಸೂಪರ್‌ಹಿಟ್ ‘ಅಲಾವೈಕುಂಠಪುರಂಲು’ಸಿನಿಮಾ ನಂತರ ಪೂಜಾಗೆ ಸಾಲು ಸಾಲು ಸಿನಿಮಾಗಳು ಅರಸಿ ಬರುತ್ತಿವೆ.

ಸದ್ಯ ಜನವರಿ 14 ಕ್ಕೆ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್'ಬಿಡುಗಡೆಯಾಗಲಿದ್ದು,ಬಹುನಿರೀಕ್ಷಿತ, ವಿಭಿನ್ನ ಪ್ರೇಮ ಕಥಾ ಹಂದರವುಳ್ಳ ‘ರಾಧೆ ಶ್ಯಾಮ್‌’ನಲ್ಲಿ ಪೂಜಾ ಹೆಗ್ಡೆ 'ಪ್ರೇರಣಾ'ಆಗಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ಆಕ್ಷ್ಯನ್ ಕಟ್ ಹೇಳಿದ್ದು, ಈ ಚಿತ್ರವನ್ನು ಗೋಪಿ ಕೃಷ್ಣ ಮೂವೀಸ್, ಯುವಿ ಕ್ರಿಯೇಷನ್ಸ್ ಮತ್ತು ಟಿ ಸಿರೀಸ್ ನಿರ್ಮಿಸುತ್ತಿದೆ. ಸಚಿನ್ ಖೇಡೇಕರ್, ಪ್ರಿಯದರ್ಶಿ ಪುಲಿಕೊಂಡ, ಭಾಗ್ಯಶ್ರೀ, ಮುರ್ಲಿ ಶರ್ಮಾ, ಕುನಾಲ್ ರಾಯ್ ಕಪೂರ್, ರಿದ್ದಿ ಕುಮಾರ್, ಸಶಾ ಛೆಟ್ರಿ, ಸತ್ಯನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಉಡುಪಿ ಮೂಲದ ಪೂಜಾ ಹೆಗ್ಡೆ 1990 ಅಕ್ಟೋಬರ್ 13 ರಂದು ಮುಂಬೈನಲ್ಲಿ ಜನಿಸಿದ್ದು, 2012 ರಲ್ಲಿ ‘ಮುಗಮುದಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ಬಾಲಿವುಡ್‌ನಲ್ಲಿ ಹೃತಿಕ್ ರೋಷನ್ ಜೊತೆಗೆ ‘ಮೆಹಂಜೊದಾರೋ’ ಸಿನಿಮಾದಲ್ಲಿ ಅಭಿನಯಿಸಿ ಗಮನ ಸೆಳೆದರು. ಇಲ್ಲಿವರೆಗೆ 12 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಉಳಿದಂತೆ ತೆಲುಗಿನ ‘ಆಚಾರ್ಯ್', ‘ಸರ್ಕಸ್' ಹಾಗೂ ‘ಬೀಸ್ಟ್‌' ಸಿನಿಮಾಗಳಲ್ಲಿ ಸದ್ಯಕ್ಕೆ ಪೂಜಾ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT