ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ ಅವರು ತುಂಬು ಗರ್ಭಿಯಂತಿರುವ ಚಿತ್ರಗಳನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.
.ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಹೊಸ ಚಿತ್ರದ ಶೀರ್ಷಿಕೆ ಘೋಷಿಸಿದ ನಟ ಡಾಲಿ .
ಪೂನಂ ಪಾಂಡೆ ಹಂಚಿಕೊಂಡ ಚಿತ್ರದಲ್ಲಿ ಅವರು ಗರ್ಭಿಣಿಯಂತೆ ಕಾಣುತ್ತಿದ್ದಾರೆ. ಇವರ ಚಿತ್ರಗಳಿಗೆ ಅಭಿಮಾನಿಗಳು ‘ನಿಮ್ಮ ಗಂಡ ಯಾರು’? ಇದು ಪ್ರಚಾರದ ಗಿಮಿಕ್, ‘ಇದು ಕೂಡ ಮತ್ತೊಂದು ಪ್ರಾಂಕ್’, ‘ ಈ ಸುದ್ದಿ ನಿಜನಾ?’ ಮಗುವಿನ ಅಪ್ಪ ಯಾರು? ಎಂದು ಅಭಿಪ್ರಾಯ ಹಂಚಿಕೊಂಡಿದ್ದರೆ, ಇನ್ನೂ ಕೆಲವರು ನಟಿಗೆ ಶುಭಕೋರಿದ್ದಾರೆ.

ಆದರೆ, ಇದೇ ಚಿತ್ರವನ್ನು ‘ಎಕ್ಸ್’ಖಾತೆಯಲ್ಲಿ ಹಂಚಿಕೊಂಡ ಅವರು, ಇದು ‘ಕೃತಕ ಬುದ್ಧಿಮತ್ತೆಯಿಂದ ನಿರ್ಮಿಸಲಾದ ಚಿತ್ರ’ ಎಂದು ಸ್ಪಷ್ಟಪಡಿಸಿದ್ದಾರೆ.

2024ರಲ್ಲಿ ಪೂನಂ ಪಾಂಡೆ ಗರ್ಭಕಂಠ ಕ್ಯಾನ್ಸರ್ಗೆ ತುತ್ತಾಗಿ ಮೃತಪಟ್ಟಿರುವುದಾಗಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಆ ವಿಡಿಯೊ ತೀವ್ರ ಸಂಚಲನ ಸೃಷ್ಟಿಸಿತ್ತು. ಆದಾದ ಬಳಿಕ, ಪೂನಂ ಅವರು ವಿಡಿಯೊ ಸಂದೇಶದ ಮೂಲಕ ತಾವು ಬದುಕಿರುವುದಾಗಿ ತಿಳಿಸಿದ್ದರು. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೆ ಮಾಡಿರುವುದಾಗಿಯೂ ಅವರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.