‘ಆರ್ಕೆಸ್ಟ್ರಾ ಮೈಸೂರು’, ‘ಬಡವ ರಾಸ್ಕಲ್’, ‘ಮರ್ಯಾದೆ ಪ್ರಶ್ನೆ’, ‘ಎಕ್ಕ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ಪೂರ್ಣಚಂದ್ರ ಮೈಸೂರು ಸದ್ಯ ತಾವು ನಟಿಸಿರುವ ‘ಹೆಗ್ಗಣ ಮುದ್ದು’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇದರ ಜೊತೆಗೆ ಸದ್ದಿಲ್ಲದೇ ಒಂದು ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಪೂರ್ಣ ನಿರ್ದೇಶನದ ಮೊದಲ ಚಿತ್ರವನ್ನು ಧನಂಜಯ ತಮ್ಮ ‘ಡಾಲಿ ಪಿಕ್ಚರ್ಸ್’ನಡಿ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಅದರೊಳಗಿನ ಪಾತ್ರವೊಂದಕ್ಕೂ ಬಣ್ಣಹಚ್ಚಿದ್ದಾರೆ. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ಹಬ್ಬದ ದಿನಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡು ಚಿತ್ರತಂಡ ಕೆಲಸ ಮಾಡುತ್ತಿದೆ. ಒಂದೆರಡು ದಿನಗಳಲ್ಲಿ ಶೀರ್ಷಿಕೆಯನ್ನೂ ಘೋಷಣೆ ಮಾಡಲಿದೆ ಚಿತ್ರತಂಡ. ಸಿನಿಮಾ ಕುರಿತು ಪೂರ್ಣ ಮಾಹಿತಿ ಹಂಚಿಕೊಂಡಿದ್ದಾರೆ.

‘ನನಗೆ ಕ್ರೈಮ್ ಥ್ರಿಲ್ಲರ್ ಹಾಸ್ಯ ಪ್ರಧಾನ ಕಥೆಗಳನ್ನು ಬರೆಯುವ ಆಸೆ ಇತ್ತು. ಹಲವು ಐಡಿಯಾಗಳು ಇದ್ದವು. ಕಳೆದ ವರ್ಷ ಮೂರು ತಿಂಗಳು ನಟನೆಯಿಂದ ಬಿಡುವು ಸಿಕ್ಕಿತ್ತು. ಈ ಸಂದರ್ಭದಲ್ಲಿ ಈ ಸಿನಿಮಾದ ಒಂದು ಸಾಲು ಬರೆದು, ಸ್ನೇಹಿತರ ಜೊತೆ ಚರ್ಚಿಸಿದೆ. ಈ ಸಾಲನ್ನು ಸವಾಲಾಗಿ ಸ್ವೀಕರಿಸಿ ಕಥೆ ಬರೆದೆ. ಈ ಸಿನಿಮಾದ ಕಥೆ ಬಹಳ ಕಠಿಣವಾಗಿದ್ದು, ಚಿತ್ರಕಥೆ ಜಟಿಲವಾಗಿದೆ. ಕಥೆಯನ್ನು ಓದಲು ಧನಂಜಯ ಅವರಿಗೆ ನೀಡಿದ್ದೆ. ಅವರು ಆರು ತಿಂಗಳು ಸಮಯ ತೆಗೆದುಕೊಂಡರು. ಕಥೆ ಓದಿದ ಕೂಡಲೇ ನಿರ್ಮಾಣಕ್ಕೆ, ನಟನೆಗೆ ಒಪ್ಪಿಕೊಂಡರು. ಈಗಿನ ಸಮಯದಲ್ಲಿ ಒಂದು ಸಿನಿಮಾ ಮಾಡಲು ಕನಿಷ್ಠ ₹2–₹3 ಕೋಟಿ ಬೇಕು. ಗೆಳೆಯನಾಗಿ ನಾನೇ ನಿರ್ಮಾಣ ಮಾಡುತ್ತೇನೆ ಎಂದು ಧನಂಜಯ ಅವರು ಹೇಳಿದಾಗ ನನ್ನ ಮೇಲಿನ ಜವಾಬ್ದಾರಿಯೂ ಹೆಚ್ಚಿತು’ ಎನ್ನುತ್ತಾರೆ ಪೂರ್ಣ.

‘ಈ ಸಿನಿಮಾಗೆ ನಾನೇ ಕಥೆ, ಸಂಭಾಷಣೆ ಬರೆದಿದ್ದೇನೆ. ಚಿತ್ರಕಥೆಗೆ ಮಹಾದೇವ್ ಪ್ರಸಾದ್ ಹಾಗೂ ಧಾರವಾಡದ ಅರುಣ ಅವರು ಜೊತೆಯಾಗಿದ್ದಾರೆ. ಅರುಣ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಸಿನಿಮಾದೊಳಗೆ ರಾಜ್ಯದ ಹಲವು ಭಾಗಗಳ ಕನ್ನಡದ ಸ್ಲ್ಯಾಂಗ್ಗಳು ಇವೆ. ಹಲವು ಹೊಸ ಪ್ರತಿಭೆಗಳು ಕಾಣಿಸಿಕೊಳ್ಳಲಿದ್ದಾರೆ. ಈಗಿನ ಜೆನ್ಜಿ ಹುಡುಗರನ್ನು ಸೇರಿಸಿಕೊಂಡು ಪೂರ್ಣ ಪ್ರಮಾಣದ ಮನರಂಜನಾ ಸಿನಿಮಾ ಕಟ್ಟಿದ್ದೇವೆ. ಈ ಹೋರಾಟದ ಪಯಣದಲ್ಲಿ ನಿರ್ದೇಶಕ ಶಶಾಂಕ್ ಸೋಗಾಲ್ ಜೊತೆಗೇ ಇದ್ದರು’ ಎಂದರು ಪೂರ್ಣ.

‘ಧನಂಜಯ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸರ್ಪ್ರೈಸ್. ನಾನು ಧನಂಜಯ ಅವರನ್ನು ಸೂಪರ್ಹ್ಯೂಮನ್ ರೀತಿ ಕಂಡಿದ್ದೇನೆ. ಅವರ ಒಳ್ಳೆಯ ಗುಣಗಳನ್ನು ನೋಡಿಕೊಂಡು ಬೆಳೆದಿದ್ದೇನೆ. ಎಲ್ಲರೂ ಮೆಚ್ಚಿಕೊಳ್ಳುವಂತ ಒಂದು ಪಾತ್ರವನ್ನು ಅವರು ಮಾಡಿದ್ದಾರೆ. ತಮ್ಮ ಸಿನಿಮಾಗಳ ನಡುವೆ ಒಂದೇ ಉಸಿರಿನಲ್ಲಿ ಈ ಸಿನಿಮಾವನ್ನು ಧನಂಜಯ ಮುಗಿಸಿದ್ದರು’ ಎಂದರು.

‘ನಾನು ನಟಿಸುತ್ತಿರುವ ‘ಹೆಗ್ಗಣ ಮುದ್ದು’ ಹಾಗೂ ನನ್ನ ನಿರ್ದೇಶನದ ಸಿನಿಮಾದ ಮಾದರಿ ಬೇರೆ ಬೇರೆಯಾಗಿದೆ. ನನ್ನ ನಿರ್ದೇಶನದ ಸಿನಿಮಾ ‘ಗ್ಯಾಂಗ್ಸ್ಟರ್ ಕಾಮಿಡಿ’ ಜಾನರ್ನಲ್ಲಿದೆ. ಎರಡೂ ಸಿನಿಮಾಗಳ ಕಥೆಯ ಕಾಲಘಟ್ಟಕ್ಕೆ ಕನಿಷ್ಠ 20 ವರ್ಷದ ಅಂತರವಿದೆ. ಸಿನಿಮಾ ರಿಲೀಸ್ ಯಾವಾಗ ಎನ್ನುವುದನ್ನು ಧನಂಜಯ ಅವರೇ ನಿರ್ಧರಿಸಲಿದ್ದಾರೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-51-1871721562

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.