ಗುರುವಾರ , ಸೆಪ್ಟೆಂಬರ್ 23, 2021
20 °C

ನಿರೀಕ್ಷೆ ಹುಸಿಗೊಳಿಸಿದ ಪ್ರಭಾಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್, ಈಚೆಗಷ್ಟೇ ತಮ್ಮ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದಾರೆ. ಅಂತೂ ತಮ್ಮ ನೆಚ್ಚಿನ ನಟ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವಂತಾದ ಅಂತ ಅಭಿಮಾನಿಗಳು ಖುಷಿ ಪಟ್ಟಿದ್ದೇ ಪಟ್ಟಿದ್ದು. ಮೊದಲ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ‘ಬಾಹುಬಲಿ’ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದ ಪ್ರಭಾಸ್ ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಗಳಿಸಿದ್ದರು. ಏಳು ಲಕ್ಷಕ್ಕೂ ಅಧಿಕ ಮಂದಿ ಖಡ್ಗ ಹಿಡಿದಿದ್ದ ಬಾಹುಬಲಿ ಪೋಸ್ಟರ್‌ಗೆ ಲೈಕ್ ಬಟನ್ ಒತ್ತಿದ್ದರು.

ಎರಡನೇ ಪೋಸ್ಟ್ ‘ಸಾಹೊ’ ಸಿನಿಮಾಕ್ಕೆ ಸಂಬಂಧಿಸಿದ್ದಾಗಿರ ಬಹುದು ಎಂದು ನಿರೀಕ್ಷಿಸುತ್ತಿದ್ದ ಅಭಿಮಾನಿಗಳನ್ನು ಪ್ರಭಾಸ್ ನಿರಾಶೆ ಗೊಳಿಸಿದ್ದಾರೆ.

ಏಪ್ರಿಲ್ 29ರಂದು ಹಾಕಿಕೊಂಡಿರುವ ಈ ಪೋಸ್ಟ್‌ನಲ್ಲಿ ‘ಬಾಹುಬಲಿ’ ಭಾಗ–2ರ ಪೋಸ್ಟರ್ ಇದೆ. ‘ಸರಿಯಾಗಿ ಇಂದಿಗೆ ಎರಡು ವರ್ಷಗಳ ಹಿಂದೆ ‘ಬಾಹುಬಲಿ ಭಾಗ–2’ ಬಿಡುಗಡೆಯಾಯ್ತು. ಈ ದಿನ ನನ್ನ ಪಾಲಿಗೆ ಎಂದೆಂದಿಗೂ ಭಾವುಕ ದಿನ. ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ತಂಡಕ್ಕೆ ನಾನು ಕೃತಜ್ಞನಾಗಿರುತ್ತೇನೆ. ಸದಾ ನನ್ನ ಪರವಾಗಿರುವ ನನ್ನ ಅಭಿಮಾನಿಗಳಿಗೆ ದೊಡ್ಡ ಅಪ್ಪುಗೆ (ಹಗ್). ನನ್ನನ್ನು ಪ್ರೋತ್ಸಾಹಿಸಿ, ಸಿನಿಮಾವನ್ನು ದೊಡ್ಡಮಟ್ಟಕ್ಕೆ ಯಶಸ್ವಿಗೊಳಿಸಿದ್ದಕ್ಕೆ ಧನ್ಯವಾದ’ ಎನ್ನುವ ವಿವರಣೆಯನ್ನೂ ಪ್ರಭಾಸ್ ಬರೆದುಕೊಂಡಿದ್ದಾರೆ.

ಪ್ರಭಾಸ್ ಅವರ ಈ ಪೋಸ್ಟ್‌ ತುಸು ನಿರಾಶೆಗೊಳಿಸಿದ್ದರೂ, ಅಭಿಮಾನಿಗಳು ಮಾತ್ರ ಎಂದಿನಿಂತೆ ನೆಚ್ಚಿನ ನಟನ ಪರವಾಗಿಯೇ  ಪ್ರತಿಕ್ರಿಯಿಸಿದ್ದಾರೆ. ಮುಂದಿನ ಚಿತ್ರ ‘ಸಾಹೊ’ ಮತ್ತಷ್ಟು ಯಶಸ್ಸು ತರಲಿ ಎಂದು ಹಾರೈಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.