ಭಾನುವಾರ, ಆಗಸ್ಟ್ 25, 2019
28 °C

ಅಮೆರಿಕ ಉದ್ಯಮಿ ಮಗಳ ಜತೆ ಪ್ರಭಾಸ್‌ ಮದುವೆ!

Published:
Updated:
Prajavani

‘ಸಾಹೋ’ ಸಿನಿಮಾ ಬಿಡುಗಡೆಯಾದ ಬಳಿಕ ನಟ ಪ್ರಭಾಸ್‌ ಅಮೆರಿಕ ಮೂಲದ ಉದ್ಯಮಿಯೊಬ್ಬರ ಪುತ್ರಿಯ ಕೈ ಹಿಡಿಯಲಿದ್ದಾರೆ. 

‘ಬಾಹುಬಲಿ’ ಚಿತ್ರದ ಯಶಸ್ಸಿನ ನಂತರ ಪ್ರಭಾಸ್‌, ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಂಡಿದ್ದಾರೆ. ಪ್ರಭಾಸ್‌ ಮದುವೆ ಕುರಿತಾದ ಹಲವಾರು ಗಾಳಿಸುದ್ದಿಗಳು ಆಗಾಗ ಕೇಳಿಬರುತ್ತಿದ್ದವು. ಆದರೆ, ಕುಟುಂಬ ಸದಸ್ಯರು ಪ್ರಭಾಸ್‌ಗೆ ಅಮೆರಿಕ ಮೂಲದ ಉದ್ಯಮಿಯ ಮಗಳನ್ನು ಮದುವೆಗೆ ಗೊತ್ತು ಮಾಡಿದ್ದಾರೆ. ‘ಸಾಹೋ’ ಬಿಡುಗಡೆಯ ಬೆನ್ನಲ್ಲೇ ಮದುವೆ ಮಾತುಕತೆಗಳು ಅಂತಿಮಗೊಳ್ಳಲಿವೆ ಎನ್ನುವುದು ಇತ್ತೀಚಿನ ಸುದ್ದಿ. 

ಆದರೆ ಈ ಬಗ್ಗೆ ಪ್ರಭಾಸ್‌ ಅಥವಾ ಅವರ ಕುಟುಂಬ ಸದಸ್ಯರು ಯಾವುದೇ ಸ್ಪಷ್ಟನೆ ನೀಡಿಲ್ಲ. ವೈಯಕ್ತಿಕ ವಿಷಯ ಬಂದಾಗೆಲ್ಲ ಪ್ರಭಾಸ್‌ ಮಾಧ್ಯಮದಿಂದ ದೂರ ಉಳಿಯುತ್ತಾರೆ. ಕಳೆದ ವರ್ಷ ಅವರ ಚಿಕ್ಕಪ್ಪ ಕೃಷ್ಣಂರಾಜು, ‘ಪ್ರಭಾಸ್‌ 2019ಕ್ಕೆ ಗೃಹಸ್ಥ ಜೀವನಕ್ಕೆ ಕಾಲಿಡಲಿದ್ದಾನೆ’ ಎಂದು ಹೇಳಿದ್ದರು. ಇದಕ್ಕೆ ಪ್ರಭಾಸ್‌, ‘ಅದೆಲ್ಲಾ ನನ್ನ ವೈಯಕ್ತಿಕ ವಿಚಾರ’ ಎಂದಿದ್ದರು.

Post Comments (+)