ಪ್ರಭುದೇವ ಅವರು ನಟನೆ ಮತ್ತು ತಮ್ಮ ನೃತ್ಯದಿಂದಲೇ ಹೆಸರುವಾಸಿಯಾಗಿದ್ದಾರೆ. ಇವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅನೇಕ ಬಾರಿ ತಮ್ಮ ಸರಳತೆಯ ಮೂಲಕ ಗಮನಸೆಳೆದಿದ್ದರು. ಇದೀಗ ಮತ್ತೊಮ್ಮೆ ಅವರು ತಮ್ಮ ಸರಳತೆಯಿಂದಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಭುದೇವ ಅವರ ಸರಳತೆಯ ವಿಡಿಯೊ ಒಂದು ಹರಿದಾಡುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮೈಸೂರಿನವರಾದ ಪ್ರಭುದೇವ ಅವರು ಕನ್ನಡ ಚಿತ್ರರಂಗದಿಂದ ಬಾಲಿವುಡ್ವರೆಗೆ ಹೆಸರು ಮಾಡಿದ್ದಾರೆ. ಇವರು ನಟರಾಗಿ, ನಿರ್ದೇಶಕನಾಗಿ ಹಾಗೂ ನೃತ್ಯ ನಿರ್ದೇಶಕರಾಗಿ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಪ್ರಭುದೇವ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ.

ವಿಡಿಯೊದಲ್ಲಿ ಪ್ರಭುದೇವ ಅವರು ಸಾಮಾನ್ಯ ಬಟ್ಟೆಯನ್ನು ಧರಿಸಿದ್ದಾರೆ. ಅಲ್ಲದೇ ನೆಲದ ಮೇಲೆ ಕುಳಿತು, ಎಳನೀರನ್ನೂ ಕುಡಿದಿದ್ದಾರೆ. ಹಾಸಿಗೆ ಹಾಗೂ ದಿಂಬು ಕೂಡ ಇಲ್ಲದೆ ನೆಲದ ಮೇಲೆ ಮಲಗಿಕೊಂಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಭಿಮಾನಿಗಳಿಂದ ಮೆಚ್ಚಗೆ ವ್ಯಕ್ತವಾಗುತ್ತಿದೆ.

ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿರುವ ವಿಡಿಯೊಗೆ ಹಲವರು ಕಮೆಂಟ್ ಹಾಕಿದ್ದಾರೆ. ಪ್ರಭುದೇವ ಅವರು ‘ಹಳ್ಳಿ ಜೀವನ’ ಎಂದು ವಿಡಿಯೊಗೆ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ 25ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.