'ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ' ಚಂದನವನದ ಪ್ರತಿಭೆಗಳನ್ನು ಗುರುತಿಸುವ ಹಾಗೂ ನಮ್ಮ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆ. ಇಂತಹ ವೇದಿಕೆ ಇದೀಗ 4ನೇ ಆವೃತ್ತಿಯನ್ನು ಆಯೋಜಿಸಲು ಸಜ್ಜಾಗುತ್ತಿದೆ.

ಪ್ರಜಾವಾಣಿಗೆ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ (2023ರಲ್ಲಿ) ಸಿನಿ ಸಮ್ಮಾನ ಎಂಬ ವಿಶೇಷ ಕಾರ್ಯಕ್ರಮದ ಮೂಲಕ, ಸಿನಿಮಾ ಕ್ಷೇತ್ರಕ್ಕೆ ಕೊಡುಗೆ ನೀಡಿದವರನ್ನು ಗುರುತಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕನ್ನಡ ಚಿತ್ರರಂಗವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಿದವರನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಲಾಗುವ ಈ ಕಾರ್ಯಕ್ರಮವು, ಮೂರು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, ನಾಲ್ಕನೇ ಆವೃತ್ತಿಗೆ ಕಾಲಿಟ್ಟಿದೆ.

ಪ್ರಶಸ್ತಿಗೆ ಆಯ್ಕೆ ಮಾಡಲು ಉತ್ತಮ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ. ತಜ್ಞ ತೀರ್ಪುಗಾರರ ತಂಡ ಇರಲಿದೆ. ಆ ಮೂಲಕ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪ್ರಶಸ್ತಿಗಳಲ್ಲಿ ಒಂದೆಂದು ಈ ಸಿನಿ ಸಮ್ಮಾನ ಗುರುತಿಸಿಕೊಂಡಿದೆ.

ಮೂರು ಹಂತಗಳಲ್ಲಿ ನಡೆಯಲಿದೆ ಪ್ರಶಸ್ತಿಯ ಆಯ್ಕೆ

ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳಲ್ಲಿ ವಿವಿಧ ತೀರ್ಪುಗಾರರ ತಂಡವನ್ನು ಒಳಗೊಂಡಿರಲಿದೆ. ಅದರಲ್ಲಿ, ತಾಂತ್ರಿಕ ಸಮಿತಿ, ಸಲಹಾ ಮಂಡಳಿ, ಅಂತಿಮವಾಗಿ ಅಕಾಡೆಮಿ ಮತದ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಈ ಪ್ರಶಸ್ತಿ ಆಯ್ಕೆಗೆ ಸಿನಿಮಾ ಕ್ಷೇತ್ರದ 1400ಕ್ಕೂ ಅಧಿಕ ಸದಸ್ಯರು ಮತ ಚಲಾಯಿಸುವುದರೊಂದಿಗೆ, ‘ನಿಮ್ಮಿಂದ, ನಿಮಗಾಗಿ, ನಿಮ್ಮವರಿಂದಲೇ’ ಎಂಬ ತತ್ವದ ಅಡಿಯಲ್ಲಿ ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆ ಮೂಲಕ ಚಂದನವನದ ಉತ್ತಮ ಪ್ರತಿಭೆಗಳನ್ನು ಗೌರವಿಸಲು ಸಿನಿ ಸಮ್ಮಾನ ಸಹಕಾರಿಯಾಗಿದೆ.

ವಿವಿಧ ವಿಭಾಗಗಳ 28 ಪ್ರಶಸ್ತಿಗಳನ್ನು ಒಳಗೊಂಡಿರುವ ಈ ವೇದಿಕೆಯು ಈಗಾಗಲೇ ಮೂರು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನಾಲ್ಕನೇ ಆವೃತ್ತಿಗೆ ಬರುವ ಜೂನ್ 19ರಂದು ದಿನಾಂಕ ನಿಗದಿಪಡಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.