‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 4ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. 2025ನೇ ಸಾಲಿನ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡವರ ವಿವರಗಳನ್ನು ತಿಳಿಸುವ ಸಮಯ ಇದು. 15 ವಿಭಾಗಗಳಲ್ಲಿ ಪ್ರತಿಭಾವಂತರನ್ನು ಆಯ್ಕೆ ಮಾಡಲು ಪರಿಣತರ ತಂಡವು ನಾಮನಿರ್ದೇಶನಗಳನ್ನು ಮಾಡಿದೆ. ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಚಿತ್ರರಂಗದ ವಿವಿಧ ಸಂಘ-ಸಂಸ್ಥೆಗಳ ಒಂದು ಸಾವಿರಕ್ಕೂ ಹೆಚ್ಚು ಸದಸ್ಯರು ವೋಟ್ ಮೂಲಕ ಆಯ್ಕೆ ಮಾಡಲಿದ್ದಾರೆ. ಯಾವ ವಿಭಾಗದ ಪ್ರಶಸ್ತಿ ಯಾರಿಗೆ ಸಲ್ಲಲಿದೆ ಎನ್ನುವುದು ಸಿನಿ ಸಮ್ಮಾನ ಪ್ರದಾನ ಕಾರ್ಯಕ್ರಮದ ದಿನವೇ ತಿಳಿಯಲಿದೆ.

ಆಯ್ಕೆ ಪ್ರಕ್ರಿಯೆಯು ಪಾರದರ್ಶಕವಾಗಿದ್ದು, ಪರಿಣತರು ನಾಮನಿರ್ದೇಶನಕ್ಕೆ ಆಯ್ಕೆ ಮಾಡಿದವರ ಹೆಸರುಗಳನ್ನು ಮುಖ್ಯ ತೀರ್ಪುಗಾರರು ಅನುಮೋದಿಸಿದ್ದಾರೆ. ಮೊದಲ ಹಂತವಾಗಿ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ ವಿಭಾಗದ ನಾಮನಿರ್ದೇಶಿತರಾದವರ ಹೆಸರುಗಳನ್ನು/ಸಿನಿಮಾಗಳನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳು ಹಂತ ಹಂತವಾಗಿ ಪ್ರಕಟವಾಗಲಿದೆ. ‘ಸಿನಿ ಸಮ್ಮಾನ’ ಕುರಿತ ಇನ್ನಷ್ಟು ಮಾಹಿತಿಗೆ ವೆಬ್ಸೈಟ್ ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.