ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಚಂದನವನದ ಪ್ರತಿಭೆಗಳನ್ನು ಗುರುತಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿ ಸಮಾರಂಭ ಜೂನ್ 19ರಂದು ನಡೆಯಲಿದೆ.

ನಾಲ್ಕನೇ ಆವೃತ್ತಿಗೆ 2025ರಲ್ಲಿ ತೆರೆಕಂಡ ಸಿನಿಮಾಗಳನ್ನು ಪರಿಗಣಿಸಲಾಗಿದೆ. 150ಕ್ಕಿಂತಲೂ ಅಧಿಕ ಸಿನಿಮಾಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದು, ತೀರ್ಪುಗಾರರು ನಾಮನಿರ್ದೇಶನಗಳನ್ನು ಅಂತಿಮಗೊಳಿಸಿದ್ದಾರೆ. ಇವುಗಳಿಗೆ ‘ಸಿನಿ ಸಮ್ಮಾನ’ದ ಮುಖ್ಯತೀರ್ಪುಗಾರರು ಅಂತಿಮ ಮುದ್ರೆ ಒತ್ತಲಿದ್ದಾರೆ. ಮಾಸಾಂತ್ಯದೊಳಗೆ ನಾಮನಿರ್ದೇಶನಗಳು ಪ್ರಕಟವಾಗಲಿವೆ.

ನಾಮನಿರ್ದೇಶನಗಳ ಪೈಕಿ ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಜನರಿಂದ ಮತದಾನ ನಡೆಯಲಿದೆ. ಚಿತ್ರರಂಗದ ಪ್ರಮುಖ ಸಂಘ-ಸಂಸ್ಥೆಗಳ ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದ್ದಾರೆ.

ಸಿನಿ ಸಮ್ಮಾನದಲ್ಲಿ ‘ಪ್ರತಿಭಾನ್ವಿತ ಕಲಾವಿದರು’ ವಿಭಾಗದಲ್ಲಿ 15 ಪ್ರಶಸ್ತಿಗಳು, ‘ಜನಮೆಚ್ಚಿದ ವಿಭಾಗ’ದಲ್ಲಿ ನಾಲ್ಕು ಪ್ರಶಸ್ತಿಗಳು, ‘ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು’ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳು ಹಾಗೂ ‘ಜೀವಮಾನ ಸಾಧನೆ’ ಪುರಸ್ಕಾರ ಇರಲಿವೆ. ಜೊತೆಗೆ ಸಂಪಾದಕೀಯ ಆಯ್ಕೆ ವಿಭಾಗದಲ್ಲಿ ‘ಸಿನಿ ಧ್ರುವತಾರೆ’, ‘ನವತಾರೆ (ನಟ–ನಟಿ)’ ಹಾಗೂ ‘ವರ್ಷದ ಅತ್ಯುತ್ತಮ ಸಾಧನೆ’ ಎಂಬ ನಾಲ್ಕು ಪ್ರಶಸ್ತಿಗಳಿವೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-821436622

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.