ಚಂದನವನದ ಪ್ರತಿಭೆಗಳನ್ನು ಗುರುತಿಸುವ ಹಾಗೂ ನಮ್ಮ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಸಮಾರಂಭ ಶೀಘ್ರದಲ್ಲಿ ಜರುಗಲಿದೆ.

ನಾಲ್ಕನೇ ಆವೃತ್ತಿಗೆ 2025ರಲ್ಲಿ ತೆರೆಕಂಡ ಸಿನಿಮಾಗಳನ್ನು ಪರಿಗಣಿಸಲಾಗಿದೆ. 150ಕ್ಕಿಂತಲೂ ಅಧಿಕ ಸಿನಿಮಾಗಳು ಪ್ರಶಸ್ತಿಗಾಗಿ ಸ್ಪರ್ಧಿಸಿವೆ. ಈಗಾಗಲೇ ಈ ಸಿನಿಮಾಗಳು ‘ಸಿನಿ ಸಮ್ಮಾನ’ದ 21 ತಾಂತ್ರಿಕ ತೀರ್ಪುಗಾರರ ಕೈಸೇರಿದ್ದು, ಶೀಘ್ರದಲ್ಲೇ ನಾಮನಿರ್ದೇಶನಗಳು ಹೊರಬೀಳಲಿವೆ. ‘ಪ್ರತಿಭಾನ್ವಿತ ಕಲಾವಿದರು’ ವಿಭಾಗದಲ್ಲಿ 15 ಪ್ರಶಸ್ತಿಗಳು, ‘ಜನಮೆಚ್ಚಿದ ವಿಭಾಗ’ದಲ್ಲಿ ನಾಲ್ಕು ಪ್ರಶಸ್ತಿಗಳು ಹಾಗೂ ‘ಜೀವಮಾನ ಸಾಧನೆ’ ಪುರಸ್ಕಾರಕ್ಕೆ ತಾಂತ್ರಿಕ ತೀರ್ಪುಗಾರರು ನಾಮನಿರ್ದೇಶನ ಮಾಡಲಿದ್ದಾರೆ. ಇವುಗಳಿಗೆ ಮುಖ್ಯತೀರ್ಪುಗಾರರ ಮಂಡಳಿಯು ಅಂತಿಮ ಮುದ್ರೆ ಒತ್ತಲಿದೆ.

ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಜನರಿಂದ ಮತದಾನ ನಡೆಯಲಿದೆ. ಚಿತ್ರರಂಗದ ಪ್ರಮುಖ ಸಂಘ-ಸಂಸ್ಥೆಗಳ ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಾದವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಿದ್ದಾರೆ. ನಂತರ ಮುಖ್ಯತೀರ್ಪುಗಾರರ ಮಂಡಳಿಯಿಂದ ಆಯ್ಕೆಗಳಿಗೆ ಅಂತಿಮ ಅನುಮೋದನೆ ದೊರೆಯಲಿದೆ.

ಜೊತೆಗೆ ‘ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು’ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳಿದ್ದು, ಇವುಗಳಿಗೆ ನಾಮನಿರ್ದೇಶನಗೊಂಡ ಸಿನಿಮಾಗಳಲ್ಲಿ ವಿಜೇತರನ್ನು ಮುಖ್ಯತೀರ್ಪುಗಾರರೇ ಆರಿಸಲಿದ್ದಾರೆ. ಸಂಪಾದಕರ ಆಯ್ಕೆ ವಿಭಾಗದಲ್ಲಿ ‘ಸಿನಿ ಧ್ರುವತಾರೆ’, ‘ನವತಾರೆ’ ಹಾಗೂ ‘ವರ್ಷದ ಅತ್ಯುತ್ತಮ ಸಾಧನೆ’ ಎಂಬ ಮೂರು ಪ್ರಶಸ್ತಿಗಳಿವೆ. ಈ ಎಲ್ಲಾ ಹಂತದಲ್ಲಿ ಆಡಿಟ್ ಪಾರ್ಟ್ನರ್ ಆಗಿ ‘ಇವೈ’ ಸಂಸ್ಥೆ ಜೊತೆಯಾಗಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-51-450642379

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.