ಕರ್ನಾಟಕದ ಸಮೃದ್ಧ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ ಹಾಗೂ ಚಂದನವನದ ಪ್ರತಿಭೆಗಳನ್ನು ಗುರುತಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿಯ ಸಮಾರಂಭ ಜೂನ್ 19ರಂದು ನಡೆಯಲಿದೆ.

ಕನ್ನಡ ಚಿತ್ರರಂಗಕ್ಕೆ ಬದುಕನ್ನೇ ಮುಡಿಪಾಗಿಟ್ಟ ಹಿರಿಯ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸುವ ‘ಜೀವಮಾನ ಸಾಧನೆ’ ಪುರಸ್ಕಾರವು ‘ಸಿನಿ ಸಮ್ಮಾನ’ದ ಅತ್ಯಂತ ಹೆಮ್ಮೆಯ ಘಟ್ಟಗಳಲ್ಲಿ ಒಂದಾಗಿದೆ. ಕಳೆದ ಐದಾರು ದಶಕಗಳಿಂದ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಸಾಧಕರನ್ನು ಈ ವಿಭಾಗದಲ್ಲಿ ಸನ್ಮಾನಿಸಲಾಗುತ್ತಿದೆ. ಮೊದಲ ಆವೃತ್ತಿಯಲ್ಲಿ ನಟ ಅನಂತನಾಗ್ ಈ ಗೌರವಕ್ಕೆ ಪಾತ್ರರಾಗಿದ್ದರು. ಎರಡನೇ ಆವೃತ್ತಿಯಲ್ಲಿ ಬಹುಭಾಷಾ ನಟಿ ಸರೋಜಾ ದೇವಿ ಅವರಿಗೆ ಪುರಸ್ಕಾರ ಲಭಿಸಿತ್ತು. ಮೂರನೇ ಆವೃತ್ತಿಯಲ್ಲಿ ನಟ ಶ್ರೀನಾಥ್ ಈ ಗೌರವ ಸ್ವೀಕರಿಸಿದ್ದರು. ಈ ವರ್ಷವೂ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಮತ್ತೊಬ್ಬ ಶ್ರೇಷ್ಠ ಸಾಧಕನಿಗೆ ಈ ಪುರಸ್ಕಾರ ಪ್ರದಾನವಾಗಲಿದೆ.

ನಾಲ್ಕನೇ ಆವೃತ್ತಿಗೆ 2025ರಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಪರಿಗಣಿಸಲಾಗಿದೆ. 150ಕ್ಕೂ ಅಧಿಕ ಸಿನಿಮಾಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದು, ತೀರ್ಪುಗಾರರು ನಾಮನಿರ್ದೇಶನಗಳನ್ನು ಅಂತಿಮಗೊಳಿಸಿದ್ದಾರೆ. ಇವುಗಳಿಗೆ ‘ಸಿನಿ ಸಮ್ಮಾನ’ದ ಮುಖ್ಯ ತೀರ್ಪುಗಾರರು ಅಂತಿಮ ಮುದ್ರೆ ಒತ್ತಲಿದ್ದಾರೆ. ಮಾಸಾಂತ್ಯದೊಳಗೆ ನಾಮನಿರ್ದೇಶಿತರ ಪಟ್ಟಿ ಪ್ರಕಟವಾಗಲಿದೆ.

ನಾಮನಿರ್ದೇಶಿತರ ಪೈಕಿ ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಮಂದಿ ಮತದಾನದಲ್ಲಿ ಭಾಗವಹಿಸಲಿದ್ದಾರೆ. ಚಿತ್ರರಂಗದ ಪ್ರಮುಖ ಸಂಘ–ಸಂಸ್ಥೆಗಳ ಸದಸ್ಯರು ತಮ್ಮ ಮತದಾನದ ಮೂಲಕ ನಾಮನಿರ್ದೇಶಿತರಲ್ಲಿ ಶ್ರೇಷ್ಠರನ್ನು ಆಯ್ಕೆ ಮಾಡಲಿದ್ದಾರೆ.

‘ಸಿನಿ ಸಮ್ಮಾನ’ದಲ್ಲಿ ‘ಪ್ರತಿಭಾನ್ವಿತ ಕಲಾವಿದರು’ ವಿಭಾಗದಲ್ಲಿ 15 ಪ್ರಶಸ್ತಿಗಳು, ‘ಜನಮೆಚ್ಚಿದ ವಿಭಾಗ’ದಲ್ಲಿ ನಾಲ್ಕು ಪ್ರಶಸ್ತಿಗಳು, ‘ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು’ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳು ಹಾಗೂ ‘ಜೀವಮಾನ ಸಾಧನೆ’ ಪುರಸ್ಕಾರ ಇರಲಿವೆ. ಜೊತೆಗೆ ಸಂಪಾದಕೀಯ ಆಯ್ಕೆ ವಿಭಾಗದಲ್ಲಿ ‘ಸಿನಿ ಧ್ರುವತಾರೆ’, ‘ನವತಾರೆ’ (ನಟ–ನಟಿ) ಮತ್ತು ‘ವರ್ಷದ ಅತ್ಯುತ್ತಮ ಸಾಧನೆ’ ಸೇರಿದಂತೆ ನಾಲ್ಕು ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತದೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-51-572107013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.