ಕರ್ನಾಟಕದ ಸಮೃದ್ಧ ಸಿನಿಮಾ ಪರಂಪರೆಯನ್ನು ಸಂಭ್ರಮಿಸುವ ಹಾಗೂ ಚಂದನವನದ ಪ್ರತಿಭೆಗಳನ್ನು ಗೌರವಿಸುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ನಾಲ್ಕನೇ ಆವೃತ್ತಿ ಸಮಾರಂಭ ಜೂನ್ 19ರಂದು ನಡೆಯಲಿದೆ.

ಸಿನಿಮಾದ ನಿರ್ದೇಶಕನನ್ನು ಚಿತ್ರದ ಸೂತ್ರಧಾರನೆಂದೇ ಕರೆಯಲಾಗುತ್ತದೆ. ಕಥೆ, ದೃಶ್ಯ, ಭಾವನೆ ಮತ್ತು ಪಾತ್ರಗಳಿಗೆ ಜೀವ ತುಂಬಿ ಒಂದು ಸಂಪೂರ್ಣ ಸಿನಿಮಾವನ್ನು ಕಟ್ಟಿಕೊಡುವ ಹೊಣೆ ನಿರ್ದೇಶಕನದ್ದೇ. ಇದೇ ಕಾರಣಕ್ಕೆ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ ಆರಂಭದಿಂದಲೂ ‘ಅತ್ಯುತ್ತಮ ನಿರ್ದೇಶನ’ ವಿಭಾಗದ ಮೂಲಕ ಪ್ರತಿಭಾವಂತ ನಿರ್ದೇಶಕರನ್ನು ಗೌರವಿಸುತ್ತ ಬಂದಿದೆ.

ಮೊದಲ ಆವೃತ್ತಿಯಲ್ಲಿ ಈ ಪ್ರಶಸ್ತಿಯನ್ನು ‘ಕಾಂತಾರ’ ಚಿತ್ರದ ಅದ್ಭುತ ಯಶಸ್ಸಿಗಾಗಿ ರಿಷಬ್ ಶೆಟ್ಟಿ ತಮ್ಮದಾಗಿಸಿಕೊಂಡಿದ್ದರು. ವಿಭಿನ್ನ ಪ್ರೇಮಕಥೆಯನ್ನು ಮನಮುಟ್ಟುವ ದೃಶ್ಯಕಾವ್ಯವಾಗಿ ಮೂಡಿಸಿದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ನಿರ್ದೇಶನಕ್ಕಾಗಿ ಹೇಮಂತ್ ಎಂ. ರಾವ್ ಎರಡನೇ ಆವೃತ್ತಿಯ ಪುರಸ್ಕಾರಕ್ಕೆ ಭಾಜನರಾದರು. ‘ಭೈರತಿ ರಣಗಲ್’ ಚಿತ್ರದ ಮೂಲಕ ಶಿವರಾಜ್ಕುಮಾರ್ ಅವರ ಪರದೆ ಎನರ್ಜಿಯನ್ನು ಮತ್ತಷ್ಟು ಪ್ರಭಾವಿಯಾಗಿ ತೆರೆದಿಟ್ಟ ನರ್ತನ್ ಮೂರನೇ ಆವೃತ್ತಿಯ ಪ್ರಶಸ್ತಿ ಪಡೆದರು. ಈ ಬಾರಿಯೂ ‘ಅತ್ಯುತ್ತಮ ನಿರ್ದೇಶನ’ ವಿಭಾಗದಲ್ಲಿ ಅರ್ಹ ನಿರ್ದೇಶಕರು ನಾಮನಿರ್ದೇಶನಗೊಂಡಿದ್ದು, ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ನಾಲ್ಕನೇ ಆವೃತ್ತಿಗೆ 2025ರಲ್ಲಿ ಬಿಡುಗಡೆಯಾದ ಸಿನಿಮಾಗಳನ್ನು ಪರಿಗಣಿಸಲಾಗಿದೆ. 150ಕ್ಕೂ ಹೆಚ್ಚು ಸಿನಿಮಾಗಳು ಪ್ರಶಸ್ತಿಗಾಗಿ ಸ್ಪರ್ಧಿಸಿದ್ದು, ತೀರ್ಪುಗಾರರ ಮಂಡಳಿ ವಿವಿಧ ವಿಭಾಗಗಳ ನಾಮನಿರ್ದೇಶನಗಳನ್ನು ಅಂತಿಮಗೊಳಿಸಿದೆ. ‘ಸಿನಿ ಸಮ್ಮಾನ’ದ ಮುಖ್ಯ ತೀರ್ಪುಗಾರರು ಇವುಗಳಿಗೆ ಅಂತಿಮ ಮುದ್ರೆ ಒತ್ತಲಿದ್ದು, ಮಾಸಾಂತ್ಯದೊಳಗೆ ನಾಮನಿರ್ದೇಶಿತರ ಪಟ್ಟಿ ಪ್ರಕಟವಾಗಲಿದೆ.

ವಿಜೇತರ ಆಯ್ಕೆಗಾಗಿ ಚಿತ್ರರಂಗದ ಸಾವಿರಕ್ಕೂ ಹೆಚ್ಚು ಮಂದಿ ಮತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರರಂಗದ ಪ್ರಮುಖ ಸಂಘ–ಸಂಸ್ಥೆಗಳ ಸದಸ್ಯರು ಮತದಾನದ ಮೂಲಕ ನಾಮನಿರ್ದೇಶಿತರಲ್ಲಿ ತಮ್ಮ ಆಯ್ಕೆಯನ್ನು ಸೂಚಿಸಲಿದ್ದಾರೆ.

ಈ ವರ್ಷದ ‘ಸಿನಿ ಸಮ್ಮಾನ’ದಲ್ಲಿ ‘ಪ್ರತಿಭಾನ್ವಿತ ಕಲಾವಿದರು’ ವಿಭಾಗದಲ್ಲಿ 15 ಪ್ರಶಸ್ತಿಗಳು, ‘ಜನಮೆಚ್ಚಿದ ವಿಭಾಗ’ದಲ್ಲಿ ನಾಲ್ಕು ಪ್ರಶಸ್ತಿಗಳು, ‘ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು’ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳು ಹಾಗೂ ‘ಜೀವಮಾನ ಸಾಧನೆ’ ಪುರಸ್ಕಾರ ಪ್ರದಾನವಾಗಲಿದೆ. ಜೊತೆಗೆ ಸಂಪಾದಕೀಯ ಆಯ್ಕೆ ವಿಭಾಗದಲ್ಲಿ ‘ಸಿನಿ ಧ್ರುವತಾರೆ’, ‘ನವತಾರೆ (ನಟ–ನಟಿ)’ ಮತ್ತು ‘ವರ್ಷದ ಅತ್ಯುತ್ತಮ ಸಾಧನೆ’ ಸೇರಿದಂತೆ ವಿಶೇಷ ಪ್ರಶಸ್ತಿಗಳೂ ಇರಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-51-1118756552

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.