ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಈಗ ‘ಬಾಂಡ್ ರವಿ’

Last Updated 2 ಏಪ್ರಿಲ್ 2022, 10:16 IST
ಅಕ್ಷರ ಗಾತ್ರ

‘ಪ್ರೀಮಿಯರ್ ಪದ್ಮಿನಿ’ ಖ್ಯಾತಿಯ ನಟ ಪ್ರಮೋದ್ ಈಗ ಬಾಂಡ್‌ ರವಿಯಾಗಿ ತೆರೆ ಮೇಲೆ ಬರುತ್ತಿದ್ದಾರೆ.ಪ್ರಜ್ವಲ್ ಎಸ್.ಪಿ. ನಿರ್ದೇಶನದಲ್ಲಿ ಈ ಚಿತ್ರ ಸೆಟ್ಟೇರಿದೆ.

ಹಣೆಯಲ್ಲಿ ರಕ್ತ, ಕೈಯಲ್ಲಿ ಬೇಡಿ ತೊಟ್ಟು ಖಡಕ್ ಲುಕ್ ನಲ್ಲಿ ಪ್ರಮೋದ್ ಪೋಸ್ಟರ್‌ನಲ್ಲಿ ಮಿಂಚಿದ್ದಾರೆ.

‘ಬಾಂಡ್ ರವಿ’ ಕಮರ್ಷಿಯಲ್ ಎಮೋಷನಲ್ ಥ್ರಿಲ್ಲರ್ ಜಾನರ್ ಸಿನಿಮಾ. ಲೈಫ್ ಲೈನ್ ಫಿಲ್ಮ್ಸ್‌ ಬ್ಯಾನರ್ ಅಡಿ ನರಸಿಂಹಮೂರ್ತಿ ಬಂಡವಾಳ ಹೂಡಿದ್ದಾರೆ. ಮಲ್ಲಿಕಾರ್ಜುನ್ ಕಾಶಿ ಹಾಗೂ ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರು. ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕೆಎಸ್ ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಸುನಿಲ್ ಮತ್ತು ದೇವರಾಜ್ ಸಂಭಾಷಣೆ, ಮನೋಮೂರ್ತಿ ಸಂಗೀತ ಸಿನಿಮಾಕ್ಕಿದೆ ಜಯಂತ್ ಕಾಯ್ಕಿಣಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT