ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್‌ ನೀಲ್ ಸಾರಥ್ಯದಲ್ಲಿ ಚಂದನವನಕ್ಕೆ ಎನ್‌ಟಿಆರ್‌

Last Updated 29 ಜುಲೈ 2019, 4:05 IST
ಅಕ್ಷರ ಗಾತ್ರ

ಆ್ಯಕ್ಷನ್‌ ಚಿತ್ರಗಳಿಂದಲೇ ಖ್ಯಾತಿ ಪಡೆದಿರುವ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಮುಂದಿನ ಬಾರಿಸಂಗೀತ– ನೃತ್ಯ ಪ್ರಧಾನಕತೆಯನ್ನೊಳಗೊಂಡ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಈ ಚಿತ್ರದಲ್ಲಿ ಜೂನಿಯರ್‌ ಎನ್‌ಟಿಆರ್‌ ನಾಯಕನಾಗಿ ನಟಿಸಲಿದ್ದಾರೆ. ಈ ಚಿತ್ರವು ದ್ವಿಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ತೆಲುಗು ಹಾಗೂ ಕನ್ನಡದಲ್ಲಿ ಬಿಡುಗಡೆಯಾಗಲಿದೆಯಂತೆ.

ಪ್ರಶಾಂತ್‌ ನೀಲ್‌ ಅವರು ಆ್ಯಕ್ಷನ್‌ ಸಿನಿಮಾಗಳಿಂದ ಕೊಂಚ ಬಿಡುವು ಮಾಡಿಕೊಂಡು ಈಗ ಹೊಸ ವಿಷಯದತ್ತ ಹೊರಳಿದ್ದಾರೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್‌ ಬಂಡವಾಳ ಹೂಡುತ್ತಿದ್ದಾರೆ. ಟಾಲಿವುಡ್‌ನ ಉತ್ತಮ ನೃತ್ಯಗಾರರಲ್ಲಿ ಜೂನಿಯರ್‌ ಎನ್‌ಟಿಆರ್‌ ಕೂಡ ಒಬ್ಬರು. ಅವರು ಕುಚಿಪುಡಿ ನೃತ್ಯವನ್ನು ಕಲಿತಿದ್ದಾರೆ.

ಈ ನಟ ಕನ್ನಡ ಹಾಗೂ ತೆಲುಗು ಚೆನ್ನಾಗಿ ಮಾತನಾಡುತ್ತಾರೆ. ಹೀಗಾಗಿ ಈ ಚಿತ್ರವನ್ನು ಎರಡೂ ಭಾಷೆಗಳಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಎಂದು ಸುದ್ದಿಯಿದೆ. ಸದ್ಯ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವುದರಿಂದ ಈ ಚಿತ್ರದ ಕೆಲಸಗಳು ಮುಂದಿನ ವರ್ಷ ಆರಂಭವಾಗಲಿವೆ.

ಪ್ರಶಾಂತ್‌ ನೀಲ್‌ ಅವರ ಈ ಹಿಂದಿನ ಚಿತ್ರಗಳಾದ ‘ಉಗ್ರಂ’ ಹಾಗೂ ಕೆಜಿಎಫ್‌ ಭಾಗ 1 ಹಾಗೂ ಈಗ ಚಿತ್ರೀಕರಣ ಹಂತದಲ್ಲಿರುವ ಕೆಜಿಎಫ್‌ ಭಾಗ 2 ಚಿತ್ರಗಳು ಸಂಪೂರ್ಣ ಆ್ಯಕ್ಷನ್‌ ಚಿತ್ರಗಳು. ಈಗ ಸಂಗೀತ, ನೃತ್ಯ ಪ್ರಧಾನ ಚಿತ್ರ ಮಾಡುತ್ತಿರುವ ನೀಲ್‌ ನಿರ್ಧಾರವನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.

ಸದ್ಯ ಜೂನಿಯರ್‌ ಎನ್‌ಟಿಆರ್‌ ಎಸ್‌. ಎಸ್‌. ರಾಜಮೌಳಿಯ ಬಹುಭಾಷಾ ಚಿತ್ರ ‘ಆರ್‌ಆರ್‌ಆರ್‌’ ಚಿತ್ರದಲ್ಲಿ ತೊಡಗಿದ್ದಾರೆ. ಈ ಚಿತ್ರ ಮುಗಿಯಲು ಇನ್ನೂ 12 ತಿಂಗಳು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT