ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಾ... ಕ್ಯಾಮೆರಾ ಪ್ರೀತಿ

Last Updated 25 ಜುಲೈ 2019, 19:48 IST
ಅಕ್ಷರ ಗಾತ್ರ

ಒಂದು ಸಿನಿಮಾ ದೃಶ್ಯಕಾವ್ಯದಂತೆ ಅಂದವಾಗಿ ಮೂಡಿಬರಬೇಕೆಂದರೆ ಕ್ಯಾಮೆರಾ ಕಣ್ಣಷ್ಟೇ ಅಲ್ಲ, ಆ ಕ್ಯಾಮೆರಾ ಮಸೂರದ ಹಿಂದಿನ ಸೂಕ್ಷ್ಮ ಕಣ್ಣುಗಳೂ ಅಷ್ಟೇ ಮುಖ್ಯ. ಹೌದು, ಸಿನಿಮಾ ನಿರ್ಮಾಣದಲ್ಲಿ ಛಾಯಾಗ್ರಹಣ ಕೆಲಸಅತ್ಯಂತ ಮಹತ್ವದ್ದು. ಈ ವೃತ್ತಿಪುರುಷ ತಂತ್ರಜ್ಞರಿಗಷ್ಟೇ ಸೀಮಿತ ಎನ್ನುವ ಅಘೋಷಿತ ಕಟ್ಟಳೆ ಮುರಿದು, ಛಾಯಾಗ್ರಹಣವನ್ನೇ ವೃತ್ತಿಯಾಗಿ ಸ್ವೀಕರಿಸಿದವರು ಪ್ರೀತಾಜಯರಾಮನ್‌. ಛಾಯಾಗ್ರಹಣ ವೃತ್ತಿ ಬಗೆಗಿನ ತಮ್ಮ ಅನುಭವವನ್ನು ಅವರು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಪ್ರೀತಾ ಅವರು ಚೆನ್ನೈನ ಎಫ್‌ಟಿಐನಲ್ಲಿ (ಫಿಲ್ಮ್‌ ಅಂಡ್‌ ಟೆಲಿವಿಜನ್‌ ಇನ್ಸ್‌ಟಿಟ್ಯೂಷನ್‌) ಚಿನ್ನದ ಪದಕ ವಿಜೇತೆ. ಆಸ್ಟ್ರೇಲಿಯಾದ ಬಾಂಡ್‌ ವಿಶ್ವವಿದ್ಯಾಲಯದಲ್ಲಿ 2002ರಲ್ಲಿ ಫಿಲ್ಮ್‌ ಅಂಡ್‌ ಟೆಲಿವಿಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆವಾರ್ನರ್‌ ಬ್ರದರ್ಸ್‌ ಸಂಸ್ಥೆಯಲ್ಲಿ ಇಂಟರ್ನ್‌ಶಿಪ್‌ ಮಾಡುವ ಅವಕಾಶ ಪಡೆದ ಅಗ್ಗಳಿಕೆ ಇವರದು. ಪ್ರಶಸ್ತಿ ಪುರಸ್ಕೃತ ನಟಿ– ನಿರ್ದೇಶಕಿ ರೇವತಿ ಮೆನನ್‌ ಅವರ ‘ವೆರುಕ್ಕು ನೀರ್‌’ ಕಿರುಚಿತ್ರ ಮತ್ತು ನಿರ್ದೇಶಕಿ ಸಾಗರಿ ಛಾಬ್ರಾ ಅವರು ನಿರ್ದೇಶಿಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರ ಡಾಕ್ಯುಮೆಂಟರಿ ‘ಅಸ್ಲಿ ಆಜಾದಿ’ಗೂ ಪ್ರೀತಾ ಛಾಯಾಗ್ರಹಣ ಮಾಡಿದ್ದಾರೆ.

‘ಚಿತ್ರರಂಗದಲ್ಲಿ ತಂತ್ರಜ್ಞೆಯಾಗಿ ಕೆಲಸ ಮಾಡುವವರಿಗೆ ಎಂತಹಸವಾಲುಗಳಿವೆ’ ಎಂದು ಅವರನ್ನು ಮಾತಿಗೆಳೆದಾಗ, ‘ವಿಭಿನ್ನ ನಿರ್ದೇಶಕರ ಜತೆಗೆ ಆ್ಯಕ್ಷನ್‌, ಡ್ರಾಮಾ, ರೊಮ್ಯಾಂಟಿಕ್‌ ಹಾಸ್ಯದಂತಹ ವಿಭಿನ್ನ ದೃಶ್ಯಗಳನ್ನು ಒಟ್ಟುಗೂಡಿಸಿ ಛಾಯಾಗ್ರಹಣ ಮಾಡುವುದು ಒಂದು ದೊಡ್ಡ ಸವಾಲು.ಕನ್ನಡ ಚಿತ್ರರಂಗ ತುಂಬಾ ಅದ್ಭುತವಾಗಿದ್ದು,ಇಲ್ಲಿ ‌ನನಗಂತೂ ಎಲ್ಲರಿಂದಲೂ ಸಂಪೂರ್ಣ ಬೆಂಬಲ ಮತ್ತು ಗೌರವ ಸಿಗುತ್ತಿದೆ.ಮಹಿಳಾ ತಂತ್ರಜ್ಞರಿಗಂತೂ ಇದು ಅತ್ಯದ್ಭುತ ಕ್ಷೇತ್ರ. ಇಲ್ಲಿ ನಿರ್ಮಾಪಕರು, ನಿರ್ದೇಶಕರಿಂದ ಹಿಡಿದು ಎಲ್ಲರಿಂದಲೂ ತುಂಬಾ ಪ್ರೋತ್ಸಾಹ, ಸಹಕಾರ ಸಿಗುತ್ತಿದೆ.ಕನ್ನಡ ಚಿತ್ರರಂಗ ಬಹಳ ಕ್ರಿಯಾಶೀಲವಾಗಿದ್ದು, ಈ ರಂಗಕ್ಕೆ ಬಂದಿರುವುದಕ್ಕೆ ನನಗೆ ತುಂಬಾ ತೃಪ್ತಿ ಇದೆ. ಈ ಚಿತ್ರರಂಗದಲ್ಲಿ ಬಹುದೂರ ಪಯಣಿಸಲು ಉತ್ಸುಕಳಾಗಿದ್ದೇನೆ’ ಎನ್ನುವ ಮಾತು ಸೇರಿಸಿದರು.

‘ಆದಿ ಲಕ್ಷ್ಮಿ ಪುರಾಣ’ದಲ್ಲಿನ ಛಾಯಾಗ್ರಹಣದ ಅನುಭವದ ಬಗ್ಗೆ ಕೇಳಿದಾಗ, ‘ನಿರ್ದೇಶಕಿ ವಿ.ಪ್ರಿಯಾ ಮತ್ತು ನಾನು ಬಹಳ ವರ್ಷಗಳಿಂದಲೂ ಅತ್ಯುತ್ತಮ ಸ್ನೇಹಿತೆಯರು. ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ಬಹಳ ಸಂಕೀರ್ಣ ವ್ಯಕ್ತಿತ್ವದ ನಾಯಕಿ ಪಾತ್ರವಿರುವ ‘ಆದಿ ಲಕ್ಷ್ಮಿ ಪುರಾಣದ’ ಕಥೆಯನ್ನು ಪ್ರಿಯಾಹೇಳಿದಾಗ ನನಗೆ ತುಂಬಾ ಎಕ್ಸೈಟ್‌ಮೆಂಟ್‌ ಆಯಿತು. ವಿಭಿನ್ನ ಶೇಡ್‌ಗಳಿರುವ ಈ ಕಥೆಯನ್ನು ನನ್ನ ಕ್ಯಾಮೆರಾ ಮೂಲಕ ಚೆಂದವಾಗಿ ಹೇಳಲು ಪ್ರಯತ್ನಿಸಿದ್ದೇನೆ.ಅದು ನನ್ನ ಜವಾಬ್ದಾರಿ ಕೂಡ ಆಗಿತ್ತು. ಅದರಲ್ಲಿ ಸಫಲವಾಗಿರುವೆ ಎಂದುಕೊಂಡಿದ್ದೇನೆ’ ಎಂದು ಮಾತು ವಿಸ್ತರಿಸಿದರು ಪ್ರೀತಾ.

ಈ ಚಿತ್ರದ ನಾಯಕಿ ರಾಧಿಕಾ ಪಂಡಿತ್‌ ಬಗ್ಗೆಯೂ ಮೆಚ್ಚುಗೆ ಮಾತನಾಡಿದ ಪ್ರೀತಾ, ‘ಚಿತ್ರರಂಗದಲ್ಲಿ ನಮ್ಮ ಗಮನ ಸೆಳೆದ ಅತ್ಯುತ್ತಮ ನಟಿಯರಲ್ಲಿ ರಾಧಿಕಾ ಕೂಡ ಒಬ್ಬರು. ಬೆಳಕು ಮತ್ತು ಕ್ಯಾಮೆರಾ ಲೆನ್ಸ್‌ನಲ್ಲಿ ಶೂಟ್‌ ಮಾಡುವಾಗ ರಾಧಿಕಾ ಅದ್ಭುತವಾಗಿ ಕಾಣಿಸುತ್ತಾರೆ. ರಾಧಿಕಾ ಪ್ರತಿಭೆ ಮತ್ತು ಆಕೆ ಕೊಡುವ ಪೋಸ್‌ಗಳು ಛಾಯಾಗ್ರಹಣದ ಕೆಲಸವನ್ನೂ ಸುಲಭಗೊಳಿಸುತ್ತವೆ’ ಎಂದು ಹೇಳಲು ಮರೆಯಲಿಲ್ಲ.

ಪ್ರೀತಾ ಕ್ಯಾಮೆರಾ ಕೈಚಳಕ ಫ್ಯೂಚರ್ಸ್‌ ಸಿನಿಮಾಗಳಿಗಷ್ಟೇ ಸೀಮಿತಗೊಂಡಿಲ್ಲ.ಟಿ.ವಿ ಜಾಹೀರಾತುಗಳು, ಮ್ಯೂಸಿಕ್‌ ಆಲ್ಬಮ್‌ಗಳು, ಕಿರುಚಿತ್ರಗಳು ಹಾಗೂ ಡಾಕ್ಯುಮೆಂಟರಿಗಳಲ್ಲೂ ಎದ್ದುಕಾಣುತ್ತದೆ. ಕೈಲಾಸ್‌ ಖೇರ್‌ (ತೇರಿ ದೀವಾನಿ) ಸೇರಿದಂತೆ ಹಲವು ಗಾಯಕರ ಮ್ಯೂಸಿಕ್‌ ಆಲ್ಬಮ್‌ಗಳಲ್ಲೂ ಪ್ರೀತಾ ಕ್ಯಾಮೆರಾ ಕೈಚಳಕ ಇದೆ. ಐಸಿಐಸಿ ಬ್ಯಾಂಕ್‌, ಬ್ರಿಟಾನಿಯಾ, ಬ್ರೂಕ್‌ ಬಾಂಡ್, ಟೈಟಾನ್‌, ಆಪಲ್‌, ಟಿವಿಎಸ್‌, ಟಾಟಾ ಗೋಲ್ಡ್‌ ಪ್ಲಸ್‌, ಉಜ್ಜಾಲ ಜಾಹೀರಾತುಗಳ ಮನಮೋಹಕ ದೃಶ್ಯಗಳ ಸೆರೆ ಹಿಡಿದಿರುವಲ್ಲಿ ಪ್ರೀತಾ ಪ್ರತಿಭೆ ಕಾಣುತ್ತದೆ.

ತ್ರಿಭಾಷೆಗಳಲ್ಲಿ ಬಿಡುಗಡೆಯಾದ ಪ್ರಕಾಶ್‌ ರಾಜ್‌ ನಿರ್ದೇಶನದ ಒಗ್ಗರಣೆ (ಕನ್ನಡ), ಉನ್‌ ಸಮಯಲ್‌ ಅರೈಯಿಲ್‌ (ತಮಿಳು) ಉಲವುಚಾರು ಬಿರಿಯಾನಿ(ತೆಲುಗು) ಸಿನಿಮಾದಲ್ಲೂ ಪ್ರೀತಾ ಛಾಯಾಗ್ರಹಣ ಇದೆ. ಈ ಸಿನಿಮಾ ಸೌತ್‌ ಇಂಡಿಯನ್‌ ಸಿನಿಮೆಟೊಗ್ರಾಫಾರ್ಸ್‌ ಅಸೋಸಿಯೇಷನ್‌ ವತಿಯಿಂದ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದುಕೊಂಡಿತ್ತು.

ವಿ.ಪ್ರಿಯಾ ನಿರ್ದೇಶನದ ತಮಿಳಿನ ‘ಕಣ್ಣಮೂಚಿ ಎಣ್ಣಡ’ ಮತ್ತು ರಾಧಾ ಮೋಹನ್‌ ನಿರ್ದೇಶನದ ‘ಅಭಿಯುಮ್‌ ನಾನುಮ್‌’ ಮತ್ತು ‘ಗೌರವಂ’ ಸಿನಿಮಾಗಳಲ್ಲೂ ಪ್ರೀತಾ ಕ್ಯಾಮೆರಾ ಕೈಚಳಕ ಇದೆ.2008ರಲ್ಲಿ ‘ಅಭಿಯುಮ್‌ ನಾನುಮ್‌’ ಸಿನಿಮಾ ತಮಿಳುನಾಡು ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.ಕನ್ನಡದ ಬಾಕ್ಸರ್‌, ಐದೊಂದ್ಲೈದು ಹಾಗೂಫರಾನ್‌ ಅಖ್ತರ್‌ ಮತ್ತು ಅನ್ನು ಕಪೂರ್‌ ಅಭಿನಯದ ಆನಂದ್‌ ಸುರಪುರ್‌ ನಿರ್ದೇಶನದ‘ದಿ ಫಕೀರ್‌ ಆಫ್‌ ವೆನಿಸ್‌’ ಚಿತ್ರಕ್ಕೂ ಪ್ರೀತಾ ಛಾಯಾಗ್ರಹಣ ಮಾಡಿದ್ದಾರೆ. ಈ ಸಿನಿಮಾಲಾಸ್‌ಏಂಜಲಿಸ್‌ನಲ್ಲಿ ನಡೆದ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು.

ನಾನಾ ಪಾಟೇಕರ್‌, ಶ್ರೇಯಾ ಶರಣ್‌, ತಾಪ್ಸಿ ಮತ್ತು ಅಲಿ ಫಜಲ್‌ ಮುಖ್ಯಭೂಮಿಕೆಯಲ್ಲಿರುವ, ಪ್ರಕಾಶ್‌ ರಾಜ್‌ ನಿರ್ದೇಶನದ ಹಿಂದಿ ಸಿನಿಮಾ ‘ತಡ್ಕಾ’ದ ‌ಛಾಯಾಗ್ರಹಣವನ್ನುಪ್ರೀತಾಜಯರಾಮನ್‌ ಮುಗಿಸಿದ್ದು, ಈ ಸಿನಿಮಾ ಇನ್ನಷ್ಟೇ ತೆರೆಗೆ ಬರಬೇಕಿದೆ. ಇದು ಕನ್ನಡದ ಒಗ್ಗರಣೆ ಮತ್ತು ಮಲಯಾಳದ ‘ಸಾಲ್ಟ್‌ ಅಂಡ್‌ ಪೆಪ್ಪರ್‌’ ಸಿನಿಮಾದ ರೀಮೇಕ್‌.

ಸದ್ಯ ಮದ್ರಾಸ್‌ ಟಾಕೀಸ್‌ನ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಧನಶೇಖರನ್‌ ನಿರ್ದೇಶನದ ‘ವಾನಂ ಕೊಟ್ಟಾಟುಂ’ಸಿನಿಮಾದ ಛಾಯಾಗ್ರಹಣದಲ್ಲಿ ಪ್ರೀತಾ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ವಿಕ್ರಮ್‌ ಪ್ರಭು, ಶರತ್‌ಕುಮಾರ್‌, ರಾಧಿಕಾ ಶರತ್‌ ಕುಮಾರ್‌, ಐಶ್ವರ್ಯ ರಾಜೇಶ್‌, ಮಡೋನಾ ಸೆಬಾಸ್ಟಿಯನ್‌, ಶಾಂತನು ಭಾಗ್ಯರಾಜ್‌ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT