‘ನೆನಪಿರಲಿ’, ‘ಪ್ರೇಮಂ ಪೂಜ್ಯಂ’ ಸಿನಿಮಾ ಖ್ಯಾತಿಯ ಪ್ರೇಮ್ ಫೀಲ್ಗುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡವರು. ನಮ್ಮ ನೆಲದ ಕಥೆಯನ್ನು ಹೇಳುವ ಸಿನಿಮಾಗಳ ಕೊರತೆ ಇದೆ ಎನ್ನುವ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲೇ ಐತಿಹಾಸಿಕ ಕಥೆಯುಳ್ಳ ಸಿನಿಮಾವೊಂದರಲ್ಲಿ ಪ್ರೇಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

2023ರಲ್ಲಿ ತೆರೆಕಂಡ ‘ಜಲಪಾತ’ ಸಿನಿಮಾ ನಿರ್ಮಿಸಿದ ಶ್ರೀ ಬ್ಯಾನರ್ನ ಅಡಿಯಲ್ಲಿ, ಅದೇ ತಂಡ ಚಿತ್ರಿಸುತ್ತಿರುವ ಹೊಸ ಸಿನಿಮಾ ಇದಾಗಿದೆ. ‘ಈ ಸಿನಿಮಾದಲ್ಲೂ ಪರಿಸರದ ಕುರಿತಾದ ವಿಷಯಗಳಿದ್ದು, ಐತಿಹಾಸಿಕ ಹಿನ್ನೆಲೆಯ ಕಥೆಯೂ ಒಳಗೊಂಡಿದೆ. ಸಿನಿಮಾವು ಮಾಸ್ ಶೈಲಿಯಲ್ಲಿರುವುದು ವಿಶೇಷವಾಗಿದೆ. ಇತಿಹಾಸ ಮತ್ತು ವರ್ತಮಾನಕ್ಕೆ ಕೊಂಡಿ ಬೆಸೆಯುತ್ತಾ ವಿಭಿನ್ನವಾಗಿ ಸಾಗುವ ಈ ಚಿತ್ರವು ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿಯನ್ನು ಆಧರಿಸಿದೆ’ ಎಂದಿದೆ ಚಿತ್ರತಂಡ.

ಇತ್ತೀಚೆಗೆ ಪ್ರೇಮ್ ಅವರ ಜನ್ಮದಿನದಂದು ಸಿನಿಮಾದ ಫಸ್ಟ್ಲುಕ್ ಬಿಡುಗಡೆಯಾಗಿದೆ. ಹರಿತವಾದ ನೋಟ, ಕೈಯಲ್ಲಿ ಹೊಳೆವ ಮುದ್ರೆಯುಂಗುರದೊಂದಿಗೆ ಪಾತ್ರವನ್ನು ಪರಿಚಯಿಸಲಾಗಿದೆ. ಪ್ರೇಮ್ ಅವರು ಈ ಪಾತ್ರದ ಮೂಲಕ ಹೊಸದೊಂದು ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಶೃಂಗೇರಿಯ ರಂಗಕರ್ಮಿ, ಯಕ್ಷಗಾನ, ಕಿರುತೆರೆ, ಹಿರಿತೆರೆಯ ಅನುಭವವುಳ್ಳ ರಮೇಶ್ ಬೇಗಾರ್ ಬರವಣಿಗೆ ಜೊತೆಗೆ ಈ ಸಿನಿಮಾ ನಿರ್ದೇಶಿಸಿದ್ದಾರೆ. ‘ಜಲಪಾತ’ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು.

ಈಗಾಗಲೇ ಈ ಸಿನಿಮಾದಲ್ಲಿನ ಪ್ರೇಮ್ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರದ ಪೂರ್ತಿವಿವರ ಮತ್ತು ಶೀರ್ಷಿಕೆಯನ್ನು ಒಂದು ಟೀಸರ್ ಮೂಲಕ ಹಂಚಿಕೊಳ್ಳಲಾಗುವುದು ಎಂದು ರಮೇಶ್ ಬೇಗಾರ್ ತಿಳಿಸಿದ್ದಾರೆ.v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-130107751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.