ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ದಿನಕ್ಕೆ ಪ್ರೇಮಸ್ವರದ ಕಾಣಿಕೆ

Last Updated 26 ಜನವರಿ 2020, 11:26 IST
ಅಕ್ಷರ ಗಾತ್ರ

ಡಾಟಾ ಸೈಂಟಿಸ್ಟ್‌ ಆಗಿರುವಎಸ್‌ಎನ್‌ಎಲ್‌ (ಎಸ್‌. ಲಕ್ಷ್ಮಿನರಸಿಂಹಸ್ವಾಮಿ) ನಿರ್ಮಾಣ, ನಿರ್ದೇಶನ ಹಾಗೂ ನಟನೆಯ ‘ಪ್ರೇಮಸ್ವರ’ ಚಿತ್ರ ಪೂರ್ಣಗೊಂಡಿದ್ದು ಫೆ.14ರಂದು ಪ್ರೇಮಿಗಳ ದಿನಾಚರಣೆ ಪ್ರಯುಕ್ತ ತೆರೆಕಾಣಲು ಸಜ್ಜಾಗಿದೆ.

‘ಇದೊಂದು ಪ್ರೇಮ ಕಥೆಯ ಚಿತ್ರ. ಪ್ರೇಮಲೋಕ ಸಿನಿಮಾವನ್ನು ನಕಲು ಮಾಡಿಲ್ಲ. ನೈಜ ಘಟನೆ ಆಧರಿಸಿದ ಕಥೆ ಇದರಲ್ಲಿದೆ. ಪ್ರೀತಿ ಮಾಡದ ವ್ಯಕ್ತಿ ಈ ಭೂಮಿ ಮೇಲೆ ಯಾರೂ ಇಲ್ಲ. ಪ್ರೀತಿಗೆ ಕೊನೆ ಇಲ್ಲ. ಒಂದು ವೇಳೆ ಪ್ರೀತಿ ಮಾಡದೇ ಇದ್ದರೆ ಒಮ್ಮೆಯಾದರೂ ಪ್ರೀತಿಸಿ ಎನ್ನುವುದು ನಮ್ಮ ಕಳಕಳಿ’ ಎಂದು ಮಾತು ವಿಸ್ತರಿಸಿದರು.

‘ಈ ಚಿತ್ರದಲ್ಲಿಏಳು ಕಥೆಗಳಿವೆ. ಕಥೆಗಳಿಗೂ ಏಳು ಆಯಾಮವಿದೆ. ಕಥೆ ಸುಖಾಂತ್ಯವೋ ದುಃಖಾಂತವೋ ಎನ್ನುವುದು ಚಿತ್ರದ ಕುತೂಹಲ. ‘ಇದು ನಿನ್ನ ಕಥೆ’ ಎನ್ನುವ ಸಬ್ ಟೈಟಲ್ ಕೊಟ್ಟಿದ್ದೇವೆ. ಚಿತ್ರದಲ್ಲಿ ಏಳು ನಾಯಕಿಯರು ಇದ್ದಾರೆ. ಏಳು ನಾಯಕಿಯರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸಾಮಾನ್ಯದ ಮಾತಲ್ಲ, ಸವಾಲೇ ಸರಿ. ಚಿತ್ರದಲ್ಲಿ ನಾನು ನಾಯಕ ಎನ್ನುವುದಕ್ಕಿಂತ ನನ್ನ ಪಾತ್ರ ಮಾಡಿದ್ದೇನೆ. ಇದನ್ನು ಸಿನಿಮ್ಯಾಟಿಕ್‌ ಆಗಿ ಮಾಡಿಲ್ಲ, ರಿಯಲಿಸ್ಟಿಕ್ಕಾಗಿ ಮಾಡಿದ್ದೇನೆ’ ಎಂದರು.

ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಮೈಸೂರಿನನಿರೋಷಾ, ನನಗೆ ಈಗ ಇಪ್ಪತ್ತರ ಹರೆಯ. ಚಿತ್ರದಲ್ಲಿ ನನ್ನ ವಯಸ್ಸಿಗೆ ಮೀರಿದ‍ಪಾತ್ರ ಮಾಡಿದ್ದೇನೆ. ನಾಯಕನಿಗೆ ನಾನು ಹಿರಿಯ ಸಹಪಾಠಿ ಪಾತ್ರ ನನ್ನದು. ಇದೊಂದು ಸವಾಲಿನ ಪಾತ್ರವಾಗಿತ್ತು ನನಗೆ. ನನ್ನ ಪಾತ್ರದ ತಯಾರಿಗಾಗಿ ‘ಕಿರಿಕ್‌ ಪಾರ್ಟಿ’ ಸಿನಿಮಾವನ್ನು ಎಂಟತ್ತು ಬಾರಿ ನೋಡಿದ್ದೇನೆ’ ಎಂದರು.

ನಾಯಕನ ತಂದೆ ಪಾತ್ರದಲ್ಲಿ ನಟಿಸಿರುವ ಶಿವಮೊಗ್ಗ ರಾಮಣ್ಣ, ದಾರಿ ತಪ್ಪಿದ ಮಕ್ಕಳನ್ನು ಸರಿದಾರಿಗೆ ತರಲು ಹೆಣಗಾಡುವ ಪೋಷಕನ ಪಾತ್ರ ನನ್ನದು ಎಂದರು. ಆರು ಹಾಡುಗಳಿರುವ ಈ ಚಿತ್ರಕ್ಕೆ ಕಮಲೇಶ್ಸಂಗೀತ ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT