ಭಾನುವಾರ, ಅಕ್ಟೋಬರ್ 17, 2021
23 °C

ಪ್ರೇಕ್ಷಕರ ಮನಗೆದ್ದ ʼಪ್ರೇಮಕ್ಕೆ ಕಣ್ಣಿಲ್ಲʼ ವಿಡಿಯೊ ಸಾಂಗ್

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಮುಂದಿನ ವರ್ಷ ತೆರೆಗೆ ಬರಲು ಸಜ್ಜಾಗಿರುವ 'ಸಖತ್' ಸಿನಿಮಾದ ವಿಡಿಯೊ ಹಾಡೊಂದು ಬಿಡುಗಡೆಯಾಗಿದ್ದು, ಗಮನ ಸೆಳೆದಿದೆ.

'ಪ್ರೇಮಕ್ಕೆ ಕಣ್ಣಿಲ್ಲ' ವಿಡಿಯೊದಲ್ಲಿ ಗಣೇಶ್ ಹಾಗೂ ನಟಿ ನಿಶ್ವಿಕಾ ನಾಯ್ಡು ಅವರ ಪ್ರಣಯ ಭರಿತ ಗೀತೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಜಯಂತ್ ಕಾಯ್ಕಿಣಿ ಅವರು ಈ ಗೀತೆ ರಚಿಸಿದ್ದಾರೆ. ಜುಧಾ ಸಂಧ್ಯಾ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಗೀತೆಗೆ ಪಂಚಮ್ ಜೀವಾ ಹಾಗೂ ಶ್ರೇಯಾ ಅಯ್ಯರ್ ಅವರು ದನಿ ನೀಡಿದ್ದಾರೆ.

ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಖತ್ ಸಿನಿಮಾ ಗಣೇಶ್ ಅವರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಸದ್ಯ ಇದು ನಿರ್ಮಾಣ ಹಂತದಲ್ಲಿದ್ದು, ಕೆವಿಎನ್ ಪ್ರೊಡಕ್ಸನ್ ಅಡಿ ನಿರ್ಮಾಣವಾಗುತ್ತಿದೆ.

ಪ್ರೇಮಕ್ಕೆ ಕಣ್ಣಿಲ್ಲ ವಿಡಿಯೊ ಗೀತೆ ಬಿಡುಗಡೆಯಾದ ಒಂದೇ ದಿನದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು