ಏಕ್‌ ಲವ್‌ ಯಾ!

ಶನಿವಾರ, ಏಪ್ರಿಲ್ 20, 2019
31 °C

ಏಕ್‌ ಲವ್‌ ಯಾ!

Published:
Updated:
Prajavani

‘ದಿ ವಿಲನ್’ ನಂತರ ಜೋಗಿ ಪ್ರೇಮ್ ಯಾವ ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನುವ ಚಂದನವನದ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಮಡದಿ ನಟಿ ರಕ್ಷಿತಾ ಅವರ ಸಹೋದರ, ಅಂದರೆ ತಮ್ಮ ಭಾವಮೈದ ಅಭಿಷೇಕ್‌ಗಾಗಿ ಪ್ರೇಮ್‌ ‘ಏಕಲವ್ಯ’ ಅರ್ಥಾತ್‌ ‘ಏಕ್‌ ಲವ್‌ ಯಾ’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ.

ಅಭಿಷೇಕ್‌ ತನ್ನ ಹುಟ್ಟಿದ್ದ ಹೆಸರನ್ನು ‘ರಾಣಾ’ ಎಂಬುದಾಗಿ ಬದಲಿಸಿಕೊಂಡು, ಏಕಲವ್ಯದ ಮೂಲಕ ತನ್ನ ಸಿನಿ ಕೆರಿಯರ್ ಅನ್ನು ಭರ್ಜರಿಯಾಗಿಯೇ ಶುರು ಮಾಡುತ್ತಿದ್ದಾರೆ. ಈ ಚಿತ್ರವು ರಕ್ಷಿತಾ ಫಿಲ್ಮ್ ಫ್ಯಾಕ್ಟರಿ ಮೂಲಕ ನಿರ್ಮಾಣ ಆಗುತ್ತಿದೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ನಿರ್ದೇಶಕ ಜೋಗಿ ಪ್ರೇಮ್‌ ಅವರು ಮತ್ತೊಬ್ಬ ಖ್ಯಾತ ನಿರ್ದೇಶಕ ಯೋಭ ಅವರಿಂದ (ಯೋಗರಾಜ ಭಟ್‌) ಚಿತ್ರದ ಟೈಟಲ್ ಅನ್ನು ಯುಬಿ ಸಿಟಿಯಲ್ಲಿ ಬಿಡುಗಡೆ ಮಾಡಿಸಿದರು. ಅಂದು ರಕ್ಷಿತಾ ಹುಟ್ಟಹಬ್ಬದ ದಿನ ಎಂಬುದು ವಿಶೇಷ. 

‘ನಿರ್ದೇಶಕನನ್ನು ಸಿನಿಮಾದ ನಿಜವಾದ ಹೀರೋ ಎನ್ನುತ್ತಾರೆ. ಏಕಲವ್ಯ ಎಂದರೆ ಕ್ಲಾಸ್ ಆಗುತ್ತದೆ, ಏಕ್ ಲವ್ ಯಾ ಅಂತ ಕರೆದರೆ ಮಾಸ್ ಆಗುತ್ತದೆ. ಈ ಚಿತ್ರದಲ್ಲಿ ಏಳು ಹಾಡುಗಳು ಇರಲಿವೆ. ಮುಂದಿನ ವಾರದಿಂದ ಚಿತ್ರೀಕರಣ ಶುರುವಾಗಲಿದೆ. ಬಾಮೈದ ಅಭಿಷೇಕ್ ಹೆಸರನ್ನು ಸಿನಿಮಾಕ್ಕಾಗಿ ರಾಣಾ ಎಂದು ಬದಲಿಸಿದ್ದೇವೆ. ನಾಯಕಿಯನ್ನೂ ಸದ್ಯದಲ್ಲೆ ಆಯ್ಕೆ ಮಾಡುತ್ತೇವೆ’ ಎಂದು ಪ್ರೇಮ್ ಮಾಹಿತಿ ಹಂಚಿಕೊಂಡರು. 

‘ಅಕ್ಕ, ಅಮ್ಮ ಹಾಗೂ ಬಾವನ ಆಶೀರ್ವಾದದಿಂದ ಸಿನಿಮಾರಂಗಕ್ಕೆ ಬರುತ್ತಿದ್ದೇನೆ. ದಿ ವಿಲನ್ ಚಿತ್ರಕ್ಕೆ ಸಹಾಯಕ ನಿರ್ದೇಶನ ಮಾಡಿದ ಅನುಭವವಿದೆ. ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ. ಅಕ್ಕ ಮೊದಲಿನಿಂದಲೂ ಧೈರ್ಯ ತುಂಬುತ್ತಾ ಬಂದಿದ್ದಾರೆ. ಎಲ್ಲರ ಸಹಕಾರವೂ ಬೇಕು’ ಎಂದು ರಾಣಾ ಮನವಿ ಮಾಡಿದರು.

ರಕ್ಷಿತಾ ಪ್ರೇಮ್‌, ‘ಇಂದು ಅಪ್ಪು ಸಿನಿಮಾದ ಮುಹೂರ್ತ ನೆನಪಾಗುತ್ತಿದೆ. ಹದಿನೆಂಟು ವರ್ಷದ ಹಿಂದೆ ಚಿತ್ರರಂಗಕ್ಕೆ ಬಂದು, ಮಾಧ್ಯಮಗಳ ಪ್ರೋತ್ಸಾಹದಿಂದ ಇಲ್ಲಿಯವರೆಗೂ ಬಂದಿರುವೆ. ನನ್ನ ಸೋದರ ರಾಣಾನನ್ನು ಇದೇ ರೀತಿ ಬೆಳೆಸಿ. ರಾಣಾ ನ್ಯೂಯಾರ್ಕ್‌ನಲ್ಲಿ ನಟನೆಗೆ ಬೇಕಾದ ತರಬೇತಿ ಪಡೆದಿದ್ದಾನೆ’ ಎಂದು ಶಿಫಾರಸು ಮಾಡಿದರು.

ಹೊಸ ನಾಯಕನನ್ನು ಚಂದನವನಕ್ಕೆ ಟ್ವಿಟರ್‌ನಲ್ಲಿ ಸ್ವಾಗತಿಸಿರುವ ಕಿಚ್ಚ ಸುದೀಪ್‌, ‘ರಾಣಾ ನಿನಗೆ ನನ್ನ ಪ್ರೀತಿಯ ಶುಭಾಶಯಗಳು‌. ನೀನು ಖಂಡಿತಾ ರಾಕ್ ಮಾಡುತ್ತೀಯಾ. ಚಿತ್ರದ ಟೈಟಲ್ ಹಾಗೂ ಫೋಟೊ ಚೆನ್ನಾಗಿದೆ’ ಬೆನ್ನು ತಟ್ಟಿದ್ದಾರೆ.‌

*‌**

‘ಅಕ್ಕ, ಅಮ್ಮ ಹಾಗೂ ಬಾವನ ಆಶೀರ್ವಾದದಿಂದ ಸಿನಿಮಾರಂಗಕ್ಕೆ ಬರುತ್ತಿದ್ದೇನೆ. ದಿ ವಿಲನ್ ಚಿತ್ರಕ್ಕೆ ಸಹಾಯಕ ನಿರ್ದೇಶನ ಮಾಡಿದ ಅನುಭವವಿದೆ. ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ. ಅಕ್ಕ ಮೊದಲಿನಿಂದಲೂ ಧೈರ್ಯ ತುಂಬುತ್ತಾ ಬಂದಿದ್ದಾರೆ. ಎಲ್ಲರ ಸಹಕಾರವೂ ಬೇಕು’

–ರಾಣಾ, ನಾಯಕ ನಟ

‘ಇಂದು ಅಪ್ಪು ಸಿನಿಮಾದ ಮುಹೂರ್ತ ನೆನಪಾಗುತ್ತಿದೆ. ಹದಿನೆಂಟು ವರ್ಷದ ಹಿಂದೆ ಚಿತ್ರರಂಗಕ್ಕೆ ಬಂದು, ಮಾಧ್ಯಮಗಳ ಪ್ರೋತ್ಸಾಹದಿಂದ ಇಲ್ಲಿಯವರೆಗೂ ಬಂದಿರುವೆ. ನನ್ನ ಸೋದರ ರಾಣಾನನ್ನು ಇದೇ ರೀತಿ ಬೆಳೆಸಿ. ರಾಣಾ ನ್ಯೂಯಾರ್ಕ್‌ನಲ್ಲಿ ನಟನೆಗೆ ಬೇಕಾದ ತರಬೇತಿ ಪಡೆದಿದ್ದಾನೆ’

 – ರಕ್ಷಿತಾ ಪ್ರೇಮ್‌, ನಟಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !