ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ್‌ ನಿರ್ದೇಶನದ 'ಯುದ್ಧದ ಮುನ್ನುಡಿ...' ಏ.24ಕ್ಕೆ ಚಿತ್ರೀಕರಣ ಆರಂಭ

Last Updated 18 ಏಪ್ರಿಲ್ 2022, 13:00 IST
ಅಕ್ಷರ ಗಾತ್ರ

‘ಏಕ್‌ ಲವ್‌ ಯಾ’ ಸಿನಿಮಾ ಬೆನ್ನಲ್ಲೇ ಮತ್ತೊಂದು ಪ್ರೊಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ ನಿರ್ದೇಶಕ ‘ಜೋಗಿ’ ಪ್ರೇಮ್‌. ‘ಯುದ್ಧದ ಮುನ್ನುಡಿ ಇಲ್ಲಿಂದ ಆರಂಭ–1970’ ಎಂಬ ಟ್ಯಾಗ್‌ಲೈನ್‌ ಇರುವ ಪೋಸ್ಟರ್‌ ಅಪ್‌ಲೋಡ್‌ ಮಾಡಿರುವ ಪ್ರೇಮ್‌, ಚಿತ್ರದ ಮುಹೂರ್ತ ಏ.24ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಾಣದ ನಾಲ್ಕನೇ ಚಿತ್ರದಲ್ಲಿ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ನಾಯಕರಾಗಿ ನಟಿಸಲಿದ್ದು, ಚಿತ್ರಕ್ಕೆ ಪ್ರೇಮ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಇದು ಪ್ರೇಮ್‌ ಅವರ ನಿರ್ದೇಶನದ 9ನೇ ಚಿತ್ರ. ಸದ್ಯಕ್ಕೆ, ‘ಪೊಗರು’ ಚಿತ್ರದ ಬಳಿಕ ಧ್ರುವ ಸರ್ಜಾ ಅವರು ನಿರ್ದೇಶಕ ಎ.ಪಿ.ಅರ್ಜುನ್‌ ನಿರ್ದೇಶನದ ‘ಮಾರ್ಟಿನ್‌’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.ಅರ್ಜುನ್‌ ನಿರ್ದೇಶನದ ‘ಅದ್ದೂರಿ’ ಮುಖಾಂತರ 2012ರಲ್ಲಿ ಚಂದನವನಕ್ಕೆ ಪ್ರವೇಶಿಸಿದ್ದ ಧ್ರುವ ಸರ್ಜಾ, ನಂತರ ‘ಬಹದ್ಧೂರ್‌’, ‘ಭರ್ಜರಿ’, ‘ಪೊಗರು’ ಚಿತ್ರದಲ್ಲಿ ಮಿಂಚಿದ್ದರು. ಪ್ರೇಮ್‌ ಆ್ಯಕ್ಷನ್‌ ಕಟ್‌ ಹೇಳಲಿರುವ ಚಿತ್ರವು ಧ್ರುವ ಸರ್ಜಾ ಅವರ ಆರನೇ ಸಿನಿಮಾ ಆಗಿರಲಿದೆ. ‌ ‌

‘ಯುದ್ಧದಲ್ಲಿ ಹುತಾತ್ಮನಾದರೆ ಸ್ವರ್ಗವು ಆತನನ್ನು ಸ್ವಾಗತಿಸುತ್ತದೆ. ಯುದ್ಧದಲ್ಲಿ ಜಯಿಸಿದರೆ ಸಿಂಹಾಸನವು ಅವನಿಗಾಗಿ ಕಾಯುತ್ತದೆ. ಆದ್ದರಿಂದ ಯುದ್ಧ ಯಾವತ್ತೂ ಒಳ್ಳೆಯದೇ. ಯುದ್ಧ ಈಗ ಪ್ರಾರಂಭ’ ಎಂದು ಚಿತ್ರದ ಕುರಿತು ಈ ಹಿಂದೆ ಟ್ವೀಟ್‌ನಲ್ಲಿ ಪ್ರೇಮ್‌ ಪೋಸ್ಟ್‌ ಮಾಡಿದ್ದರು. ಸಿನಿಮಾ ಶೀರ್ಷಿಕೆಯನ್ನು ಚಿತ್ರತಂಡವು ಇನ್ನೂ ಬಹಿರಂಗಗೊಳಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT