ಶುಕ್ರವಾರ, ಡಿಸೆಂಬರ್ 6, 2019
19 °C

ಬೇಬಿ ಎಲ್ಸಾಗೆ ಪ್ರಿನ್ಸ್‌ ಮಹೇಶ್‌ ಬಾಬು ಮಗಳು ಸಿತಾರಾ ಧ್ವನಿ

Published:
Updated:

ತೆಲುಗಿನ ಪ್ರಿನ್ಸ್‌ ಮಹೇಶ್‌ ಬಾಬು ಮಗಳು ಸಿತಾರಾ ಬಾಲಿವುಡ್‌ ಸಿನಿಮಾ ‘ಫ್ರೋಜನ್‌ 2’ ತೆಲುಗು ಅವತರಣಿಕೆಯಲ್ಲಿ ಬೇಬಿ ಎಲ್ಸಾ ಪಾತ್ರಕ್ಕೆ ಧ್ವನಿ ನೀಡಲಿದ್ದಾರೆ. ಈ ವಿಚಾರವನ್ನು ವಾಲ್ಟ್‌ ಡಿಸ್ನಿ ಸ್ಟುಡಿಯೋದ ಭಾರತೀಯ ಕಚೇರಿ ಧೃಡಪಡಿಸಿದೆ. 

ವಾಲ್ಡ್‌ ಡಿಸ್ನಿ ಅನಿಮೇಷನ್‌ ಸ್ಟುಡಿಯೋ ಹಾಗೂ ವಾಲ್ಟ್‌ ಡಿಸ್ನಿ ಪಿಕ್ಚರ್ಸ್‌ ಸಂಸ್ಥೆಯಡಿ ಪೀಟರ್‌ ಡೆಲ್‌ ವೆಚೊ ನಿರ್ಮಾಣದಲ್ಲಿ ಅನಿಮೇಟೆಡ್‌ ಸಿನಿಮಾ ಫ್ರೋಜನ್‌ 2 ನಿರ್ಮಾಣಗೊಳ್ಳಲಿದೆ. 

2013ರಲ್ಲಿ ಕ್ರಿಸ್‌ ಬಕ್‌  ಹಾಗೂ ಜೆನ್ನಿಫರ್‌ ಲೀ ನಿರ್ದೇಶಿಸಿದ್ದ  ‘ಫ್ರೋಜನ್‌’ ತೆರೆಕಂಡಿತ್ತು. ಅದರ ಮುಂದುವರಿದ ಭಾಗವೇ ‘ಫ್ರೋಜನ್‌ 2’. ಇದರ ಇಂಗ್ಲಿಷ್‌ ಅವತರಣಿಕೆ ನವೆಂಬರ್‌ 22ರಂದು ಬಿಡುಗಡೆಯಾಗಲಿದೆ. ಜತೆಗೆ ಹಿಂದಿ, ತಮಿಳು, ತೆಲುಗು ಅವತರಣಿಕೆಯಲ್ಲಿಯೂ ಇದೇ ದಿನದಂದು ಬಿಡುಗಡೆ ಮಾಡಲು ನಿರ್ಮಾಪಕರು ಯೋಚಿಸಿದ್ದಾರೆ. ಇದಕ್ಕಾಗಿ ಭರಪೂರ ಸಿದ್ಧತೆಗಳು ನಡದಿದೆ. 

ಇದನ್ನೂ ಓದಿ: ರಾಜಮೌಳಿ ಸಿನಿಮಾದಲ್ಲಿ ‘ಪ್ರಿನ್ಸ್’ ಮಹೇಶ್ ಬಾಬು

ಮಹೇಶ್‌ಬಾಬು ಸಿತಾರಾಳ ಈ ಸಾಧನೆಯನ್ನು ಟಿಟ್ವರ್‌, ಫೇಸ್‌ಬುಕ್‌ ಹಾಗೂ ಇನ್‌ಸ್ಟಗ್ರಾಂ ಪುಟಗಳಲ್ಲಿ ಹೇಳಿಕೊಂಡಿದ್ದು, ಚಿತ್ರಗಳು ವೈರಲ್‌ ಆಗಿವೆ. 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು