ಮಂಗಳವಾರ, ಮೇ 26, 2020
27 °C

ಬೆಡ್‌ರೂಂ ವಿಡಿಯೊ ವೈರಲ್‌: ಕೊನೆಗೂ ಮೌನ ಮುರಿದ ನಟಿ ಲೋಸ್ಲಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಕಾಲಿವುಡ್‌ ಖ್ಯಾತಿಯ ಲೋಸ್ಲಿಯಾ ಮರಿಯನೇಸನ್ ತಮ್ಮ ಖಾಸಗಿ ವಿಡಿಯೊ ಬಗ್ಗೆ ಕೊನೆಗೂ ಮೌನ ಮುರಿದಿದ್ದು ಈ ಜಗತ್ತು ಬರೀ ಸುಳ್ಳುಗಳಿಂದ ಕೂಡಿದೆ ಎಂದು ಹೇಳುವ ಮೂಲಕ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿರುವ ಲೋಸ್ಲಿಯಾ ಆ ಖಾಸಗಿ ವಿಡಿಯೊ ಸುಳ್ಳು ಎಂದು ಹೇಳಲು ಪ್ರಯತ್ನಿಸಿದ್ದಾರೆ.

ಯಾರು ಈ ಲೋಸ್ಲಿಯಾ?

ಶ್ರೀಲಂಕಾ ಮೂಲದ ಲೋಸ್ಲಿಯಾ ಮರಿಯನೇಸನ್ ತಮಿಳಿನಲ್ಲಿ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದ ಅವರು ತಮಿಳುನಾಡಿನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮುದ್ದು ಮಾತುಗಳು ಮತ್ತು ಮುಗ್ದ ಅಭಿನಯದ ಮೂಲಕ ತಮಿಳು ಅಭಿಮಾನಿಗಳ ಮನೆ ಗೆದ್ದಿರುವ ಲೋಸ್ಲಿಯಾ ಕೈಯಲ್ಲಿ ಈಗ ಹಲವಾರು ಸಿನಿಮಾಗಳು ಇವೆ.

 
 
 
 

 
 
 
 
 
 
 
 
 

#justwhites

A post shared by Losliya Mariyanesan (@losliyamariya96) on

ಮಾಜಿ ಕ್ರಿಕೆಟಿಗ ಹರಭಜನ್‌ ಸಿಂಗ್‌ ಹಾಗೂ ಅರ್ಜುನ್‌ ಸರ್ಜಾ ಅಭಿನಯದ ಫ್ರೆಂಡ್ಸ್‌ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಲೋಸ್ಲುಆಗೆ ಟಾಲಿವುಡ್‌ನಲ್ಲೂ ಆಫರ್‌ಗಳು ಬಮದಿರುವುದು ಸುಳ್ಳಲ್ಲ.

ಏನಿದು ಖಾಸಗಿ ವಿಡಿಯೊ?

ಬಿಗ್‌ಬಾಸ್‌ ಮನೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ ಲೋಸ್ಲಿಯಾ ಅವರ ಬೆಡ್‌ರೂಂ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆ ವಿಡಿಯೊದಲ್ಲಿ ಇರುವ ಯುವಕ ಯಾರು ಎಂಬ ಚರ್ಚೆಗಳು ನಡೆದಿದ್ದವು. ಆ ಖಾಸಿ ವಿಡಿಯೊದಲ್ಲಿ ಇರುವುದು ಲೋಸ್ಲಿಯಾ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿತ್ತು. ವಿಡಿಯೊ ವೈರಲ್ ಆದ ಬಳಿಕ ಲೋಸ್ಲಿಯಾ ನಾಪತ್ತೆಯಾಗಿದ್ದರು. ಇದೀಗ ಪ್ರತ್ಯಕ್ಷವಾಗಿರುವ ಅವರು ಆ ವಿಡಿಯೊ ಸುಳ್ಳು ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.

ಈ ಜಗತ್ತು ಸುಳ್ಳುಗಳ ಸಂತೆ, ಇಲ್ಲಿ ಭಯ ಮತ್ತು ನೆಗೆಟಿವ್‌ ಕೂಡ ಇದೆ. ಇವುಗಳ ಮಧ್ಯೆ ನಮ್ಮ ಬದುಕಿನ ಬೆಳಕು ಹಾದು ಹೋಗಬೇಕಿದೆ. ಇವುಗಳ ಮಧ್ಯೆ ಜನತೆ ಸಂತೋಷವಾಗಿ ಬದುಕಲು ಬದಲಾಗಬೇಕು ಎಂಬುದು ನನ್ನ ಭಾವನೆ ಎಂದು ಬರೆದುಕೊಂಡಿದ್ದಾರೆ. 

 
 
 
 

 
 
 
 
 
 
 
 
 

Dream 😊 believe ☺ achieve 😍

A post shared by Losliya Mariyanesan (@losliyamariya96) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು