ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ದಾಟಿದ ನೋಟಾ: 44,100 ಮತಗಳ ಮುನ್ನಡೆ ಸಾಧಿಸಿದ ಕಾಂಗ್ರೆಸ್‌ನ ಮುನಿರತ್ನ

ಮತ ಎಣಿಕೆ ಕೇಂದ್ರದಿಂದ ಹೊರ ನಡೆದ ಬಿಜೆಪಿಯ ತುಳಸಿ ಮುನಿರಾಜುಗೌಡ
Last Updated 31 ಮೇ 2018, 5:34 IST
ಅಕ್ಷರ ಗಾತ್ರ

ಬೆಂಗಳೂರು: ಇದೇ 28ರಂದು ನಡೆದಿದ್ದ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಮತದಾನದ ಫಲಿತಾಂಶ ಗುರುವಾರ ಹೊರಬೀಳಲಿದೆ. ಈಗಾಗಲೇ ಒಂಬತ್ತು ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ಮುನ್ನಡೆ ಕಾಯ್ಡುಕೊಂಡಿದ್ದಾರೆ.

ಮುನಿರತ್ನ ಸಮೀಪ ಸ್ಪರ್ಧಿ ಬಿಜೆಪಿಯ ತುಳಸಿ ಮುನಿರಾಜುಗೌಡ ಅವರಿಗಿಂತ 44,100 ಮತಗಳ ಮುನ್ನಡೆ ಸಾಧಿಸಿದ್ದಾರೆ. ಮಧ್ಯಾಹ್ನ 12ರ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರ ಬೀಳಲಿದೆ.

ಈಗಾಗಲೇ ಎಂಟನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಒಟ್ಟು 1,286 ನೋಟಾ ದಾಖಲಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹುಚ್ಚ ವೆಂಕಟ್‌ ನೋಟಾಕ್ಕಿಂತಲೂ ಕಡಿಮೆ, 325 ಮತಗಳನ್ನು ಪಡೆದಿದ್ದಾರೆ.

ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಮತ ಎಣಿಕೆ ಕೇಂದ್ರದಿಂದ ಬೇಸರದಿಂದ ಹೊರ ನಡೆದರು. 

ಕಾಂಗ್ರೆಸ್‌- ಮುನಿರತ್ನ- 75,282
ಬಿಜೆಪಿ-  ತುಳಸಿ ಮುನಿರಾಜುಗೌಡ - 31,182
ಜೆಡಿಎಸ್‌-ಜಿ.ಎಚ್. ರಾಮಚಂದ್ರ- 19,509
ಪಕ್ಷೇತರ– ಹುಚ್ಚ ವೆಂಕಟ್- 325
ನೋಟಾ- 1,286

(ಅಂಚೆ ಮತಗಳು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT