ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಲಿವುಡ್‌ಗೆ ಹಾರಿದ ಕುಡ್ಲ ಕುವರಿ

Last Updated 9 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ವೀಶ್‌ ಶೆಟ್ಟಿ ನಿರ್ದೇಶನದ ಮೂರು ಭಾಷೆಗಳಲ್ಲಿ ನಿರ್ಮಾಣವಾಗಿದ್ದ ‘ಜಿಲ್ಕ’ ಸಿನಿಮಾದಲ್ಲಿ ಕುಡಿನೋಟದಿಂದಲೇ ಚಿತ್ರರಸಿಕರ ಗಮನ ಸೆಳೆದಿದ್ದ ಕುಡ್ಲದ ನಟಿ ಪ್ರಿಯಾ ಹೆಗಡೆ ಈಗ ಟಾಲಿವುಡ್‌ಗೆ ಅಡಿ ಇಟ್ಟಿದ್ದಾರೆ.ಕನ್ನಡದಲ್ಲಿ ನೆಲೆಯೂರಲು ಕನಸು ಕಂಡಿದ್ದ ಅವರಿಗೆ ತೆಲುಗಿನಲ್ಲಿಯೂ ಅವಕಾಶದ ಬಾಗಿಲು ತೆರೆದಿದೆ.

ಕವೀಶ್‌ ಶೆಟ್ಟಿ ನಾಯಕನಾಗಿರುವ ‘ಜಿಲ್ಕ’ ಸಿನಿಮಾಇತ್ತೀಚೆಗಷ್ಟೇ ಕನ್ನಡದಲ್ಲಿ ತೆರೆ ಕಂಡಿದೆ. ಮರಾಠಿ ಮತ್ತು ಹಿಂದಿಯ ಅವರತಣಿಕೆಯ ಬಿಡುಗಡೆಯಷ್ಟೇ ಬಾಕಿಯಿದೆ.

ಈ ಚಿತ್ರದಲ್ಲಿನ ನನ್ನ ಅಭಿನಯವೇ ನನಗೆ ಅವಕಾಶಗಳನ್ನು ಹೊತ್ತು ತರುತ್ತಿದೆ ಎಂದು ಪ್ರಿಯಾ ಹೆಗಡೆ ‘ಪ್ರಜಾ ಪ್ಲಸ್‌’ ಜೊತೆಗೆ ಮಾತು ಆರಂಭಿಸಿದರು.

‘ತೆಲುಗಿನ ‘ಮಿತ್ರ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ. ಇದರಲ್ಲಿ ನನ್ನ ಪಾತ್ರದ ಹೆಸರು ಕೂಡ ಮಿತ್ರ. ಈ ಚಿತ್ರಕ್ಕೆ ಅಭಿನಂದನ್‌ ನಿರ್ದೇಶನವಿದ್ದು, ನಾಯಕನಾಗಿ ಇಂದ್ರನೀಲ್‌ ವರ್ಮಾ ನಟಿಸಿದ್ದಾರೆ.ಒಂದು ಹಾಡು ಮಾತ್ರ ಬಾಕಿಯಿದೆ. ಅಲ್ಲದೆ,ವರುಣ್‌ ಕೃಷ್ಣ ಫಿಲಮ್ಸ್‌ ಬ್ಯಾನರ್‌ನಡಿ ‘ನೂವೇನಾ ಪ್ರಾಣಂ’ ಚಿತ್ರದಲ್ಲಿಲೀಡ್‌ ರೋಲ್‌ ಮಾಡುತ್ತಿದ್ದೇನೆ. ಶ್ರೀಕೃಷ್ಣ ಮಲ್ಲಿಶೆಟ್ಟಿ ನಿರ್ದೇಶನದ ಇದರಲ್ಲಿ ಕಿರಣ್‌ ರಾಜ್‌ ನಾಯಕನಾಗಿ ನಟಿಸಿದ್ದಾರೆ. ಇದರ ಚಿತ್ರೀಕರಣ ಬಹುತೇಕ ಮುಗಿದಿದ್ದು, ಎರಡು ಹಾಡುಗಳು ಮಾತ್ರ ಬಾಕಿಯಿವೆ’ ಎಂದು ಮಾತು ವಿಸ್ತರಿಸಿದರು.

ಕನ್ನಡದಲ್ಲೂ ಅವರ ಸಿನಿ ಪಯಣಮುಂದುವರಿದಿದ್ದು, ಅವರ ಎರಡನೇ ಚಿತ್ರ ಸೆಟ್ಟೇರಿದೆ. ‘ಅವಿನಾಶ್‌ ನಿರ್ದೇಶನದ ‘ಹಗ್ಗ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಇದರಲ್ಲಿ ಇಬ್ಬರು ನಾಯಕಿಯರಿದ್ದು, ಇಬ್ಬರಿಗೂ ಸಮಾನ ಆದ್ಯತೆ ಸಿಕ್ಕಿದೆ. ನನ್ನ ಪಾತ್ರ ಸೆಕೆಂಡ್‌ ಆಫ್‌ನಲ್ಲಿ ಬರುತ್ತದೆ. ಮೊದಲಾರ್ಧದಲ್ಲಿ ಪ್ರಿಯಾಂಕಾ ಅರೊರಾ ನಟಿಸಿದ್ದಾರೆ. ನಾಯಕನಾಗಿ ವೇಣು ಭಾರದ್ವಾಜ್‌ ನಟಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಲೋಕೇಶ್‌ ಶೆಟ್ಟಿ ನಿರ್ಮಿಸುತ್ತಿರುವ ‘ಕಂಬಳ’ ಸಿನಿಮಾವನ್ನು ಒಪ್ಪಿಕೊಂಡಿದ್ದೇನೆ. ಇದು ಕನ್ನಡ ಮತ್ತು ತುಳು ಭಾಷೆಯಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರದ ಅತಿಥಿ ಪಾತ್ರಗಳಲ್ಲಿ ಶಿಲ್ಪಾ ಶೆಟ್ಟಿ, ಸುನೀಲ್‌ ಶೆಟ್ಟಿ ನಟಿಸಲಿದ್ದಾರೆ. ಜತೆಗೆ ಅವಿನಾಶ್‌ ಅವರು ಪ್ರಮುಖ ಪಾತ್ರ ನಿಭಾಯಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಹಿರಿತೆರೆಗೆ ಕಾಲಿಟ್ಟ ತಕ್ಷಣ ಅಲ್ಲಿಯೇ ನೆಲೆಯೂರಬೇಕೆಂಬ ಹಪಾಹಪಿ ಪ್ರಿಯಾಗೆ ಇಲ್ಲವಂತೆ. ‘ಪ್ರೇಕ್ಷಕರಿಗೆ ಪಾತ್ರಗಳ ಮೂಲಕ ನಾವು ಕನೆಕ್ಟ್‌ ಆಗಬೇಕು ಅಷ್ಟೇ. ಅದರಲ್ಲೂ ಈಗಂತೂ ಜನರೊಂದಿಗೆ ಬೇಗ ಕನೆಕ್ಟ್‌ ಆಗಲು ಕಿರುತೆರೆಯಲ್ಲೂ ಅತ್ಯುತ್ತಮ ಅವಕಾಶಗಳಿವೆ. ತೆಲುಗು ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಬಂದಿವೆ. ಕಲರ್ಸ್‌ ಕನ್ನಡ ಮತ್ತು ಜೀ ಕನ್ನಡ ವಾಹಿನಿಗಳ ಎರಡು ಹೊಸ ಧಾರಾವಾಹಿಗಳಲ್ಲಿ ನಟಿಸುವ ಆಫರ್‌ ಬಂದಿದೆ. ಲಾಕ್‌ಡೌನ್‌ ಮುಗಿದ ಮೇಲೆ ನಿರ್ದೇಶಕರನ್ನು ಭೇಟಿ ಮಾಡಿ ಕನ್ನಡದ ಸೀರಿಯಲ್‌ ಪ್ರಾಜೆಕ್ಟ್‌ ಒಪ್ಪಿಕೊಳ್ಳುವ ಮನಸು ಮಾಡಿದ್ದೇನೆ’ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT