ಮತ್ತೆ ಜೊತೆಯಾಗುವರೇ ಪ್ರಿಯಾಂಕಾ– ಶಾರುಖ್‌?

ಶನಿವಾರ, ಏಪ್ರಿಲ್ 20, 2019
24 °C

ಮತ್ತೆ ಜೊತೆಯಾಗುವರೇ ಪ್ರಿಯಾಂಕಾ– ಶಾರುಖ್‌?

Published:
Updated:
Prajavani

‘ಡಾನ್‌’ ಮತ್ತು ‘ಡಾನ್–2’ ಸಿನಿಮಾಗಳನ್ನು ನೋಡಿರುವ ಲಕ್ಷಾಂತರ ಸಿನಿಪ್ರಿಯರು ಶಾರುಖ್‌ ಖಾನ್‌– ಪ್ರಿಯಾಂಕಾ ಚೋಪ್ರಾ ಜೋಡಿಯನ್ನು ಮನಸಾರೆ ಮಚ್ಚಿದ್ದರು. ಎರಡೂ ಸಿನಿಮಾಗಳು ನಿರೀಕ್ಷೆಗೂ ಮೀರಿ ಹಣ ಸಂಪಾದಿಸಿದ್ದು ಇದಕ್ಕೆ ಸಾಕ್ಷಿ.

ಈಗಿನ ಸುದ್ದಿ ಏನೆಂದರೆ ಈ ಎರಡೂ ಸಿನಿಮಾಗಳ ನಿರ್ಮಾಪಕ ರಿತೇಶ್‌ ಸಿದ್ವಾನಿ ‘ಡಾನ್‌–3’ ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ ಎಂಬುದು. ಆದರೆ ಈ ಸುದ್ದಿ ಇವರ ಅಭಿಮಾನಿಗಳಿಗೆ ಹೆಚ್ಚು ಸಂತೋಷ ಉಂಟುಮಾಡಿಲ್ಲ. ಯಾಕೆಂದರೆ, ‘ಡಾನ್‌–2’ ಬಿಡುಗಡೆಯ ನಂತರ ಪ್ರಿಯಾಂಕಾ– ಶಾರುಖ್‌ ನಡುವೆ ಶೀತಲ ಸಮರ ಆರಂಭವಾಗಿದ್ದು, ಯಾವ ಸಿನಿಮಾದಲ್ಲೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಡಾನ್‌–3ಯಲ್ಲಿ ಈ ಜೋಡಿ ಮತ್ತೆ ಕಾಣಿಸಿಕೊಳ್ಳುವುದು ಅನುಮಾನ ಎಂಬ ಸುದ್ದಿಯೂ ಬಂದಿದೆ.

ಸುಮಾರು ₹ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಡಾನ್‌ ಸಿನಿಮಾ ₹ 106 ಕೋಟಿ ಗಳಿಸಿತ್ತು. ಆ ನಂತರ ನಿರ್ಮಾಪಕರು ₹ 76 ಕೋಟಿ ಹೂಡಿಕೆ ಮಾಡಿ ಡಾನ್‌–2 ನಿರ್ಮಿಸಿದ್ದರು. ಅದು ₹ 209ಕೋಟಿ ಗಳಿಕೆ ಮಾಡಿತು. ಇದರಿಂದ ಇನ್ನಷ್ಟು ಉತ್ತೇಜಿತರಾಗಿರುವ ನಿರ್ಮಾಪಕರು ಈ ಬಾರಿ ಭರ್ಜರಿಯಾದ ಸಿನಿಮಾ ಮಾಡಲು ಮುಂದಾಗಿದ್ದಾರಂತೆ. ಆದರೆ ಶಾರುಖ್‌–ಪ್ರಿಯಾಂಕಾ ಜೋಡಿಯೇ ಬರುತ್ತಿದೆಯೇ ಎಂಬುದು ಬಗೆಹರಿಯದ ಪ್ರಶ್ನೆ. ‘ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ಅವರಿಬ್ಬರೂ ಜೊತೆಯಾಗಿ ನಟಿಸಬೇಕು’ ಎಂದು ಬಾಲಿವುಡ್‌ನ ಕೆಲವರು ಅವರಿಬ್ಬರಿಗೂ ಸಲಹೆ ನೀಡಲು ಮುಂದಾಗಿದ್ದಾರಂತೆ.

ಇದು ಒಂದೆಡೆಯಾದರೆ, ‘ಡಾನ್‌–3’ ಪ್ರಾಜೆಕ್ಟ್‌ನಿಂದ ಶಾರುಖ್‌ ಖಾನ್‌ ಅವರನ್ನೇ ಕೈಬಿಡಲಾಗಿದೆ ಎಂಬ ಸುದ್ದಿಯೂ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಶಾರುಖ್‌ ಸ್ಥಾನವನ್ನು ರಣವೀರ್‌ ಸಿಂಗ್‌ ತುಂಬುತ್ತಿದ್ದಾರೆ ಎಂಬುದು ಇದರ ಹಿಂದೆಯೇ ಬಂದಿರುವ ಇನ್ನೊಂದು ಸುದ್ದಿ. ಈ ವದಂತಿಗೆ ಒಂದು ಆಧಾರವೂ ಇದೆ. ಡಾನ್‌ ಸರಣಿಯ ನಿರ್ಮಾಪಕ– ನಿರ್ದೇಶಕ ಜೋಡಿಯೇ ಈಚೆಗೆ ರಣವೀರ್‌ ಅಭಿನಯದ ‘ಗಲ್ಲಿ ಬಾಯ್‌’ ಸಿನಿಮಾ ನಿರ್ಮಿಸಿತ್ತು. ಆ ಚಿತ್ರವೂ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಜೊತೆಗೆ ರಣವೀರ್‌ ಅಭಿನಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಾರಣಕ್ಕೆ ಡಾನ್‌–3ರಲ್ಲಿ ಶಾರುಖ್‌ ಸ್ಥಾನಕ್ಕೆ ರಣವೀರ್‌ ಬರಲಿದ್ದಾರೆ ಎಂಬ ವದಂತಿಗೆ ರೆಕ್ಕೆಪುಕ್ಕಗಳು ಹುಟ್ಟಿಕೊಂಡವು. ‘ಈ ಸುದ್ದಿ ನಿಜವೇ ಆಗಿದ್ದಲ್ಲಿ ಶಾರುಖ್‌ ಖಾನ್‌ ಅವರ ‘ಕಿಂಗ್‌’ ಪಟ್ಟವನ್ನು ರಣವೀರ್‌ ಕಸಿದುಕೊಳ್ಳುವುದು ಖಚಿತ ಎಂದು ಬಾಲಿವುಡ್‌ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

‘ಡಾನ್‌ ಕೊ ಪ‍ಕಡ್‌ನಾ ಮುಷ್ಕಿಲ್‌ ಹೀ ನಹೀಂ ನಾಮುಮ್ಕಿನ್‌ ಹೈ’ (ಡಾನ್‌ನನ್ನು ಹಿಡಿಯುವುದು ಕಷ್ಟ ಮಾತ್ರವಲ್ಲ  ಅಸಾಧ್ಯ) ಎಂಬುದು ಡಾನ್‌ ಸಿನಿಮಾದ ಸೂಪರ್‌ ಹಿಟ್‌ ಡೈಲಾಗ್‌. ಶಾರುಖ್‌ ಈಗ ‘ಡಾನ್‌ ಚಿತ್ರದಿಂದ ನನ್ನನ್ನು ಕೈಬಿಡಲು ಅಸಾಧ್ಯ’ ಎಂಬ ಡೈಲಾಗ್‌ ಹೇಳುವರೇ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ಡಾನ್‌–3ಯಲ್ಲಿ ಶಾರುಖ್‌– ಪ್ರಿಯಾಂಕಾ ಜೊತೆಯಾಗಿ ಕಾಣಿಸಿಕೊಂಡರೆ ಈ ಸಿನಿಮಾ ಸೂಪರ್‌ ಹಿಟ್‌ ಆಗುವುದನ್ನು ಯಾರಿಂದಲೂ ತಡೆಯಲಾಗದು ಎಂದು ಬಾಲಿವುಡ್‌ ಪಂಡಿತರು ಹೇಳುತ್ತಾರೆ. ಇವರ ಮಾತುಗಳು ಶಾರುಖ್‌– ಪ್ರಿಯಾಂಕಾಗೆ ಕೇಳಿಸುತ್ತಿವೆಯೇ?

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !