ಭಾನುವಾರ, ಡಿಸೆಂಬರ್ 8, 2019
21 °C

ದಾಂಪತ್ಯಕ್ಕೆ ಕಾಲಿರಿಸಿದ ಪ್ರಿಯಾಂಕಾ– ನಿಕ್

Published:
Updated:
Deccan Herald

ಜೋಧಪುರ: ನಟಿ ಪ್ರಿಯಾಂಕಾ ಚೋಪ್ರಾ ಹಾಗೂ  ಹಾಲಿವುಡ್ ಗಾಯಕ ನಿಕ್ ಜೋನಸ್, ಜೋಧಪುರದ ಉಮೈದ್‌ ಭವನ ಅರಮನೆಯಲ್ಲಿ ಶನಿವಾರ ಕ್ಯಾಥೊಲಿಕ್ ಸಂಪ್ರದಾಯದ ಪ್ರಕಾರ ವಿವಾಹ ಬಂಧನಕ್ಕೆ ಒಳಗಾದರು.

ಭಾನುವಾರ ಈ ಜೋಡಿ ಹಿಂದೂ ಸಂಪ್ರದಾಯದ ಪ್ರಕಾರವೂ ಮದುವೆಯಾಗಲಿದೆ.

ಪ್ರಿಯಾಂಕಾ ತಾಯಿ ಮಧು ಚೋಪ್ರಾ, ಸೋದರ ಸಿದ್ಧಾರ್ಥ್, ಸೋದರಿಯರಾದ ಪರಿಣೀತಿ ಚೋಪ್ರಾ, ಮನ್ನಾರ ಚೋಪ್ರಾ, ನಿಕ್‌ ಪೋಷಕರಾದ ಪೌಲ್ ಕೆವಿನ್ ಹಾಗೂ ಡಿನೈಸ್‌, ಸೋದರ ಕೆವಿನ್ ಹಾಗೂ ಅವರ ಪತ್ನಿ ಡೇನಿಯಲ್, ಮತ್ತೊಬ್ಬ ಸೋದರ ಜೋ ಹಾಗೂ ಭಾವಿ ಪತ್ನಿ ನಟಿ ಸೋಫಿ ಟರ್ನರ್‌ ಪಾಲ್ಗೊಂಡಿದ್ದರು.

ಉಳಿದಂತೆ ಉದ್ಯಮಿ ಮುಕೇಶ್ ಅಂಬಾನಿ, ಪತ್ನಿ ನೀತಾ, ಪುತ್ರಿ ಇಶಾ ಹಾಗೂ ಪುತ್ರರಾದ ಆಕಾಶ್‌, ಅನಂತ್, ಅಮೆರಿಕದ ನಟಿ ಎಲಿಜಬೆತ್‌ ಚೇಂಬರ್ಸ್‌, ಬ್ರಿಟನ್‌ ಗಾಯಕಿ ಜಾಸ್ಮಿನ್‌ ವಾಲಿಯ, ಸಲ್ಮಾನ್‌ ಖಾನ್‌ ಸಹೋದರಿ ಅರ್ಪಿತಾ, ವಸ್ತ್ರ ವಿನ್ಯಾಸಕ ಸವ್ಯಸಾಚಿ ಇದ್ದರು.

ಸಮಾರಂಭಕ್ಕೆ ಮೊಬೈಲ್‌ ತರದಂತೆ ಅತಿಥಿಗಳಿಗೆ ಸೂಚನೆ ನೀಡಲಾಗಿತ್ತು ಹಾಗೂ ಆಹ್ವಾನಿತರಿಗೆ ಮಾತ್ರ ಪ್ರವೇಶವಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು