ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರ್ಯಾಮಿಯಲ್ಲಿ ಪ್ರಿಯಾಂಕಾ

Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

ಗ್ಲೋಬಲ್‌ ಐಕಾನ್‌ ಪ್ರಿಯಾಂಕಾ ಚೋಪ್ರಾ ಲಾಸ್‌ ಏಂಜಲೀಸ್‌ನಲ್ಲಿ ನಡೆದ 62ನೇ ವರ್ಷದ ಗ್ರ್ಯಾಮಿ ಅವಾರ್ಡ್‌ ಫಂಕ್ಷನ್‌ನಲ್ಲಿ ತುಂಬ ಹಾಟ್‌ ಆಗಿ ಕಾಣಿಸಿಕೊಂಡರು.ತಮ್ಮ ಪತಿ ನಿಕ್‌ ಜೋನಾಸ್‌ ಜೊತೆ ರೆಡ್‌ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದರು. ಅವರು ತೊಟ್ಟಿದ್ದಗೌನ್‌ ಟ್ರೆಂಡ್‌ ಸೆಟ್ಟಿಂಗ್‌ ಎನ್ನುವಷ್ಟು ಆಕರ್ಷಕವಾಗಿತ್ತು.

ಅದು ಉದ್ದ ತೋಳಿನಫ್ಲೋರಲ್‌ ಡಿಸೈನ್‌ನ ಗೌನ್‌. ಅದರ ತುಂಬಾ ಆವರಿಸಿರುವ ಸಣ್ಣ ಸಣ್ಣ ಹರಳುಗಳು, ಎದೆಯಿಂದ ಹೊಕ್ಕಳುವರೆಗೂ ಜಾರುಬಂಡೆಯಂತೆ ತೆರೆದುಕೊಂಡಿರುವ ಡೀಪ್‌ ನೆಕ್‌ ಮತ್ತು ಸೆಂಟರ್‌ ಬಾಟಮ್‌ ಸ್ಲಿಟ್‌ನ ಐವರಿ ವೈಟ್‌ ಗೌನ್‌ ಸಹಜವಾಗಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿತು. ಗೌನ್‌ನ ಬಾಟಮ್‌ ಮತ್ಸ್ಯಕನ್ನೆಯಂತೆ ತೆರೆದುಕೊಂಡಿತ್ತು. ಈ ಗೌನ್‌ ವಿನ್ಯಾಸ ಮಾಡಿದ್ದು ರಾಲ್ಫ್‌ ಮತ್ತು ರಸ್‌. ನೆಕ್‌ ನಾಟ್‌ ಮತ್ತು ಸೈಡ್‌ ಬಾಟಮ್‌ ಸ್ಲಿಟ್‌ ಇರುವ ಶಾಂಪೆನ್‌ ಬೋಲ್ಡ್‌ ಬಣ್ಣದ ಈ ಮೃದುವಾದ ಸಾಟಿನ್‌ ಧಿರಿಸಿನಲ್ಲಿ ಪ್ರಿಯಾಂಕಾ ಹೆಣ್ತನ, ಸೌಂದರ್ಯ ಅನಾವರಣಗೊಂಡಿದೆ.

ಅವರ ಪತಿ ನಿಕ್‌ ಜೋನಾಸ್‌ ಕೂಡ ಸ್ಟೈಲಿಷ್‌ ಆಗಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT